ETV Bharat / state

ಭಯ ಬೇಡ, ಧೈರ್ಯವಾಗಿ ಪರೀಕ್ಷೆ ಎದುರಿಸು: ವಿದ್ಯಾರ್ಥಿ ಮನವೊಲಿಸಿದ PSI

ಕೊರೊನಾ ವೈರಸ್​​​ಗೆ ಹೆದರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲು ಹಿಂದೇಟು ಹಾಕಿದ್ದ ವಿದ್ಯಾರ್ಥಿಯೊಬ್ಬನ ಮನೆಗೆ ತೆರಳಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ವಿದ್ಯಾರ್ಥಿಯ ಮನವೊಲಿಸುವಲ್ಲಿ ಯಶಸ್ವಿಯಾದರು.

SSLC exams begin amid Covid-19
ವಿದ್ಯಾರ್ಥಿ ಮನವೊಲಿಸಿದ ಪಿಎಸ್​​ಐ
author img

By

Published : Jun 25, 2020, 12:48 PM IST

Updated : Jun 25, 2020, 1:06 PM IST

ಗದಗ: ವಿದ್ಯಾರ್ಥಿಯೊಬ್ಬ ಕೊರೊನಾಗೆ ಹೆದರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲು ಹಿಂದೇಟು ಹಾಕಿದ ಘಟನೆ ಗಜೇಂದ್ರಗಡದಲ್ಲಿ ನಡೆದಿದೆ. ಪರೀಕ್ಷೆ ಬರೆಯಲು ಹಿಂದಡಿಯಿಟ್ಟ ಕಾರಣ ಗಜೇಂದ್ರಗಡ ಪಿಎಸ್​​ಐ ಗುರುಶಾಂತ ದಾಶ್ಯಾಳ ಅವರು ಬೆಳಗ್ಗೆ 8 ಗಂಟೆಗೆ ವಿದ್ಯಾರ್ಥಿ ಮನೆಗೆ ಭೇಟಿ ನೀಡಿ, ಬಾಲಕ ಮತ್ತು ಪೋಷಕರ ಮನವೊಲಿಸಿದರು.

ವಿದ್ಯಾರ್ಥಿ ಮನವೊಲಿಸಿದ PSI

ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯ, ಸಾಮಾಜಿಕ ಅಂತರ ಕಾಯ್ದುಕೊಂಡು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಕಲ್ಪಿಸಲಾಗಿದೆ. ಈ ಬಗ್ಗೆ ಯಾವುದೇ ರೀತಿಯಲ್ಲೂ ಭಯಪಡುವ ಅಗತ್ಯವಿಲ್ಲ ಎಂದು ಪೊಲೀಸ್ ಅಧಿಕಾರಿ ಆತ್ಮಸ್ಥೈರ್ಯ ತುಂಬಿದರು. ಬಳಿಕ ವಿದ್ಯಾರ್ಥಿ ಪರೀಕ್ಷಾ ಕೇಂದ್ರಕ್ಕೆ ಹೋಗಿ ಪರೀಕ್ಷೆ ಬರೆಯಲು ನಿರ್ಧರಿಸಿದ್ದಾನೆ.

Last Updated : Jun 25, 2020, 1:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.