ETV Bharat / state

ಭಯಾನಕ ಆಚರಣೆಗಳ ವಿಶಿಷ್ಟ ಏಳು ಕೋಟಿ ಮೈಲಾರಲಿಂಗನ‌ ಜಾತ್ರೆ! - ಏಳು ಕೋಟಿ ಮೈಲಾರಲಿಂಗಪ್ಪನ ದೇವಸ್ಥಾನ

ದಸರಾ ಅಂಗವಾಗಿ ಗದಗದಲ್ಲಿ ನಡೆಯುತ್ತೆ ವಿಶೇಷ ಪವಾಡಗಳ ಜಾತ್ರೆ. ಮೈಲಾರಲಿಂಗನ‌ ಜಾತ್ರೆಯಲ್ಲಿ ಶಸ್ತ್ರ ಚುಚ್ಚಿಕೊಂಡು ನಾಡಿನಲ್ಲೆಡೆ ಮಳೆ,ಬೆಳೆ ಸಮೃದ್ಧಿಯಾಗಲಿ ಅಂತ ಭಕ್ತರು ಬೇಡಿಕೊಳ್ತಾರೆ.

special-dessehra-festival-celebrate-in-gadag
author img

By

Published : Oct 8, 2019, 10:48 PM IST

Updated : Oct 8, 2019, 11:59 PM IST

ಗದಗ: ದಸರಾ ಅಂದ್ರೆ ಥಟ್ ಅಂತಾ ನೆನಪಾಗೋದು ಜಂಬೂ ಸವಾರಿ. ಆದ್ರೆ, ಅಲ್ಲೊಂದು ಗ್ರಾಮದಲ್ಲಿ ದಸರಾವನ್ನು ವಿಶಿಷ್ಟವಾಗಿ ಆಚರಿಸಲಾಗ್ತಿದೆ. ಅಲ್ಲಿ ಒಂದೆಡೆ ಭಕ್ತಿಯ ಉನ್ಮಾದದಲ್ಲಿ ಭಕ್ತರು ಹೆಜ್ಜೆ ಹಾಕುತ್ತಿದ್ದರೆ, ಢಮರುಗದ ನಾದದೊಂದಿಗೆ ದೇವಸ್ಥಾನದ ಅಂಗಳದಲ್ಲಿ ಆಸ್ತಿಕರು ಸುತ್ತು ಹಾಕುತ್ತಾರೆ. ಇಷ್ಟೇನಾ ವಿಶೇಷ? ಅಂದ್ರೆ ಖಂಡಿತಾ ಅಲ್ಲ!

ಗದಗದ ನರಗುಂದ ತಾಲೂಕಿನ ಬೆನಕನಕೊಪ್ಪ ಗ್ರಾಮದಲ್ಲಿ 33ವರ್ಷದ ಹಿಂದೆಯೇ ಮೈಲಾರಲಿಂಗೇಶ್ವರ ದೇವಸ್ಥಾನ ನಿರ್ಮಿಸಲಾಗಿದೆ. ಗ್ರಾಮದಲ್ಲಿ ಮಳೆಯ ಅಭಾವ ಉಂಟಾಗಿ, ತೀವ್ರ ಬರಗಾಲ ಎದುರಾಗಿರೋದ್ರಿಂದ ಕಳೆದೊಂದು ದಶಕದಿಂದ ದಸರಾ ಹಬ್ಬವನ್ನು ಇಲ್ಲಿ ವಿಶಿಷ್ಟವಾಗಿ ಆಚರಿಸಲಾಗ್ತಿದೆ. ಈ ಬಾರಿ ಪ್ರವಾಹ ಉಂಟಾಗಿ ಸಾಕಷ್ಟು ಸಂಕಷ್ಟ ಉಂಟಾಗಿರುವುದರಿಂದ ಭಕ್ತರು, ಇಂತಹ ಸ್ಥಿತಿ ಯಾವತ್ತೂ ಬರದಿರಲಪ್ಪ ಅಂತ ದೇವರನ್ನು ಬೇಡಿಕೊಂಡಿದ್ದಾರೆ.

ದೇಹ ದಂಡಿಸಿಕೊಳ್ಳುತ್ತಿರುವ ಭಕ್ತರು

ಹಾಗಾಗಿ ತಮ್ಮನ್ನು ತಾವೇ ದಂಡಿಸಿಕೊಂಡರೆ ಮೈಲಾರಲಿಂಗೇಶ್ವರನ ಅನುಗ್ರಹಕ್ಕೆ ಪಾತ್ರರಾಗ್ತೇವೆ ಅನ್ನೋದು ಭಕ್ತರ ಅಭಿಪ್ರಾಯ. ಹೀಗಾಗಿ ಏಳು ಕೋಟಿ ಮೈಲಾರಲಿಂಗಪ್ಪನ ದೇವಸ್ಥಾನದ ಎದುರಲ್ಲಿ ದೇಹದಂಡನೆ ಮಾಡಿಕೊಂಡು ತಮ್ಮ ಬೇಡಿಕೆಯನ್ನು ಭಕ್ತರು ಈಡೇರಿಸಿಕೊಂಡ್ರು.

ಇಲ್ಲಿ ವ್ಯಕ್ತಿಯೊಬ್ಬ 450 ಮೀಟರ್ ದಾರವನ್ನು ಪೋಣಿಸಿಕೊಂಡು ದವಡೆಯ ಮೂಲಕ ದೇವಸ್ಥಾನದ ಅಂಗಳ ಸುತ್ತುಹಾಕುತ್ತಾ ಹೊರತೆಗೆದ. ಕಬ್ಬಿಣದ ಸರಪಳಿಯನ್ನು ಇಬ್ಬರು ಸೇರಿಕೊಂಡು ಮುರಿಯೋ ಮೂಲಕ ಪವಾಡ ಪ್ರದರ್ಶನವೂ ನಡೆಯಿತು. ಈ ವಿಶಿಷ್ಟ ಆಚರಣೆ ಇಷ್ಟಕ್ಕೆ ಮುಗಿದಿಲ್ಲ. ಮತ್ತೊಬ್ಬ ವ್ಯಕ್ತಿ ಅಂಗೈನ ಹಿಂಭಾಗದಲ್ಲಿ ಕೈಗೆ ದೀಪ ಚುಚ್ಚಿಸಿಕೊಂಡು ದೀಪಾರತಿ ಮಾಡಿದ. ಮೈಲಾರಲಿಂಗೇಶ್ವರನಿಗೆ ಕೈಗೆ ಚುಚ್ಚಿಸಿಕೊಂಡ ದೀಪ ಬೆಳಗೋ ಮೂಲಕ ಜನರಲ್ಲಿನ ಭಕ್ತಿ ಉನ್ಮಾದ ಹೆಚ್ಚಿಸಿದ. ಯುವಕ, ಯುವತಿಯರಿಂದ ಹಿಡಿದು ವೃದ್ಧರು ಕೂಡಾ ಈ ಪವಾಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಸ್ತ್ರ ಚುಚ್ಚಿಸಿಕೊಂಡು ಭಕ್ತಿಯ ಪರಾಕಾಷ್ಠೆ ಮೆರೆದರು.

ಇಲ್ಲಿ ಹೊತ್ತ ಹರಕೆ ಈಡೇರಿದ ಮೇಲೂ ಭಕ್ತರು ಮತ್ತೆ ಶಸ್ತ್ರ ಚುಚ್ಚಿಸಿಕೊಂಡು ಹರಕೆ ತೀರಿಸುತ್ತಾರೆ. ಗೊರವಪ್ಪನ ನೂರಾರು ವೇಷಧಾರಿಗಳು ಢಮರುಗ ಬಾರಿಸುತ್ತಾ ಈ ವಿಶಿಷ್ಟ ಜಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಇನ್ನೂ ಹಲವರು ಚಾಟಿಯಿಂದ ಹೊಡೆದುಕೊಳ್ಳೋ ಮೂಲಕ ದೇಹ ದಂಡಿಸಿಕೊಂಡರು.

ರೋಣ ಹಾಗೂ ನರಗುಂದ ತಾಲೂಕುಗಳ ಹಲವಾರು ಹಳ್ಳಿಗಳು ಈ ಬಾರಿ ಪ್ರವಾಹಕ್ಕೆ ಸಿಲುಕಿ ನಲುಗಿವೆ. ಊರಿನ ಜನರ ನೆಮ್ಮದಿಗಾಗಿ, ಹಾಗೂ ಮುಂದಿನ ದಿನಗಳಲ್ಲಿ ಈ ಸಲದಂತೆ ಪ್ರವಾಹ ಉಂಟಾಗದೇ ಇರಲಿ. ಜನಜೀವನವನ್ನು ಚೆನ್ನಾಗಿ ನಡೆಯಲಿ, ಸಮೃದ್ಧ ಮಳೆ ಬೆಳೆಗಯಾಗಿ ನಾಡು ಸುಭಿಷ್ಟೆಯಿಂದರಲಿ ಎಂದು ಭಕ್ತರು ಪ್ರಾರ್ಥಿಸಿದ್ದಾರೆ.

Intro:ದಸರಾ ಅಂಗವಾಗಿ ನಡೆಯುತ್ತೆ ವಿಶೇಷ ಪವಾಡಗಳ ಜಾತ್ರೆ....ಮೈಲಾರಲಿಂಗನ‌ ಜಾತ್ರೆಯಲ್ಲಿ ಶಸ್ತ್ರ ಚುಚ್ಚಿಕೊಳ್ತಾರೆ ಭಕ್ತರು....ಪ್ರವಾಹವಾಗದಂತೆ ಮಳೆ ಬೆಳೆ ಸಮೃದ್ಧಿಯಾಗಲಿ ಅಂತ ಬೇಡಿಕೊಂಡ ಭಕ್ತರು....ಭಯಾನಕ ಆಚರಣೆಗಳ ವಿಶೇ಼ ಜಾತ್ರೆ ಮೈಲಾರಲಿಂಗನ‌ ಜಾತ್ರೆ

ಆಂಕರ್-ದಸರಾ ಅಂದ್ರೆ ಸಾಕು ಥಟ್ ಅಂತಾ ನೆನಪಾಗೋದು ಜಂಬೂ ಸವಾರಿ. ಆದ್ರೆ ಅಲ್ಲೊಂದು ಗ್ರಾಮದಲ್ಲಿ ದಸರಾ ಹಬ್ಬವನ್ನು ವಿಶಿಷ್ಠವಾಗಿ ಆಚರಿಸಲಾಗ್ತಿದೆ. ಹಲವು ಪವಾಡಗಳ ಮೂಲಕ ಆ ಗ್ರಾಮ, ದಸರಾ ಹಬ್ಬಕ್ಕೆ ಸುತ್ತಲಿನ ಗ್ರಾಮಸ್ಥರನ್ನು ಸೆಳೆಯುತ್ತಿದೆ. ದೇಹ ದಂಡಿಸಿಕೊಳ್ಳೋ ಮೂಲಕ ದಸರಾ ಆಚರಿಸಿ ದೈವಭಕ್ತಿಗೆ ಪಾತ್ರರಾಗಬೇಕು ಅನ್ನೋದು ಆ ಜನ್ರ ನಂಬಿಕೆ. ಅಷ್ಟೇ ಅಲ್ಲ ಈ ಬಾರಿ ಉಂಟಾದ ಪ್ರವಾಹದ ಸ್ಥಿತಿ ಯಾವತ್ತಿಗೂ ಬರಬಾರದು. ಪ್ರವಾಹವಿಲ್ದೆ ಮಳೆ ಬೆಳೆ ಸಮೃದ್ಧಿಯಾಗಲಿ ಅಂತ‌ ಮೈಲಾರಲಿಂಗನಲ್ಲಿ ಬೇಡಿಕೊಂಡ್ರು ಅಲ್ಲಿನ ಭಕ್ತರು.

ವಾ/ಓ೦೧-ಭಕ್ತಿ ಉನ್ಮಾದದಲ್ಲಿ ಹೆಜ್ಜೆ ಹಾಕುತ್ತಿರೋ ಮೈಲಾರಲಿಂಗಪ್ಪನ ಭಕ್ತರು...ಪವಾಡಕ್ಕಾಗಿ ಹಣೆಗೆ ಭಂಡಾರ ಹಚ್ಚಿರೋ ಹಲವರು...ಢಮರುಗದ ನಾದದೊಂದಿಗೆ ದೇವಸ್ಥಾನದ ಅಂಗಳದಲ್ಲಿ ಸುತ್ತು ಹಾಕ್ತಿರೋ ಜನ್ರು...ಹೌದು, ಇದು ಗದಗ ಜಿಲ್ಲೆ ನರಗುಂದ ತಾಲೂಕಿನ ಬೆನಕನಕೊಪ್ಪ ಗ್ರಾಮದಲ್ಲಿ ಕಂಡು ಬಂದ ದಸರಾ ಸಂಭ್ರಮ. ಕಳೆದ ೩೩ ವರ್ಷದ ಹಿಂದೆಯೇ ಇಲ್ಲಿ ಮೈಲಾರಲಿಂಗೇಶ್ವರ ದೇವಸ್ಥಾನ ನಿರ್ಮಿಸಲಾಯಿತು. ಗ್ರಾಮಕ್ಕೆ ಮಳೆಯ ಅಭಾವ ಉಂಟಾಗಿ, ತೀವ್ರ ಬರಗಾಲ ಎದುರಾಗಿರೋದ್ರಿಂದ ಕಳೆದ ೧೧ ವರ್ಷದಿಂದ ದಸರಾ ಹಬ್ಬವನ್ನು ಇಲ್ಲಿ ವಿಶಿಷ್ಠವಾಗಿ ಆಚರಿಸಲಾಗ್ತಾ ಬರಲಾಗಿತ್ತು. ಆದ್ರೆ ಈ ಬಾರಿ ಪ್ರವಾಹ ಉಂಟಾಗಿದ್ರಿಂದ ಭಕ್ತರು, ಇಂತಹ ಸ್ಥಿತಿ ಯಾವತ್ತೂ ಬರಬಾರದೆಂದು ಬೇಡಿಕೊಂಡು ಜಾತ್ರೆಯಲ್ಲಿ ಭಾಗವಹಿಸಿದ್ದಾರೆ.
ತಮ್ಮನ್ನು ತಾವು ದಂಡಿಸಿಕೊಂಡ್ರೆ ಮೈಲಾರಲಿಂಗೇಶ್ವರನ ಅನುಗ್ರಹಕ್ಕೆ ಪಾತ್ರವಾಗ್ತೇವೆ ಅನ್ನೋದು ಭಕ್ತರ ಅಭಿಪ್ರಾಯದಂತೆ, ಏಳು ಕೋಟಿ ಮೈಲಾರಲಿಂಗಪ್ಪನ ದೇವಸ್ಥಾನದ ಎದುರಲ್ಲಿ ದೇಹದಂಡನೆ ಮಾಡಿಕೊಳ್ಳೋ ಮೂಲಕ ತಮ್ಮ ಬೇಡಿಕೆಯ ಈಡೇರಿಕೆಗೆ ಬೇಡಿಕೊಂಡ್ರು. ನೆರೆದ ಭಕ್ತ ಸರತಿಯಲ್ಲಿ ಬಂದು ಒಬ್ಬೊಬ್ಬರಾಗಿ ಶಸ್ತ್ರ ಹಾಕಿಸಿಕೊಂಡು ದೈವಿಭಕ್ತಿ ಮೆರೆದ್ರು. ಬೆನಕನಕೊಪ್ಪ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಸೇರಿ ನೂರಾರು ಜನ್ರು ಶಸ್ತ್ರ ಹಾಕಿಕೊಂಡ್ರು. ವ್ಯಕ್ತಿಯೊಬ್ಬನೇ ೪೫೦ ಮೀಟರ್ ದಾರವನ್ನು ಪೋಣಿಸಿಕೊಂಡು ದವಡೆಯ ಮೂಲಕ ದೇವಸ್ಥಾನದ ಅಂಗಳ ಸುತ್ತುಹಾಕುತ್ತಾ ಹೊರತೆಗೆದ. ಕಬ್ಬಿಣದ ಸರಪಳಿಯನ್ನು ಇಬ್ಬರು ಸೇರಿಕೊಂಡು ಮುರಿಯೋ ಮೂಲಕ ಸರಪಳಿ ಪವಾಡದ ಪ್ರದರ್ಶನ ನಡೆಯಿತು. ಮುಖ್ಯವಾಗಿ ಮತ್ತೊಬ್ಬ ವ್ಯಕ್ತಿ ಅಂಗೈನ ಹಿಂಭಾಗದಲ್ಲಿ ಕೈಗೆ ದೀಪ ಚುಚ್ಚಿಸಿಕೊಂಡು ದೀಪಾರತಿ ಮಾಡಿದ. ಮೈಲಾರಲಿಂಗೇಶ್ವರನಿಗೆ ಕೈಗೆ ಚುಚ್ಚಿಸಿಕೊಂಡ ದೀಪ ಬೆಳಗೋ ಮೂಲಕ ಜನರಲ್ಲಿನ ಭಕ್ತಿ ಉನ್ಮಾದ ಹೆಚ್ಚಿಸಿದ. ಯುವಕ, ಯುವತಿಯರಿಂದ ಹಿಡಿದು ವೃದ್ಧರು ಈ ಪವಾಡ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಶಸ್ತ್ರ ಚುಚ್ಚಿಸಿಕೊಂಡು ಭಕ್ತಿ ಮೆರೆದ್ರು.

ಬೈಟ್೦೧-ಫಕೀರಪ್ಪ, ಗೊರವಯ್ಯ.

ವಾ‌/ಓ೦೨-ಈ ಪವಾಡಗಳನ್ನು ಕಣ್ತುಂಬಿಕೊಳ್ಳಲು ಸುತ್ತಲಿನ ಗ್ರಾಮದ ಸಾವಿರಾರು ಜನ್ರು ಪಾಲ್ಗೊಂಡಿದ್ರು. ಮೈಲಾರಲಿಂಗೇಶ್ವರ ಸನ್ನಿಧಾನದಲ್ಲಿ ಶಸ್ತ್ರ ಹಾಕಿಸಿಕೊಂಡ್ರೆ ತಮ್ಮ ಹರಕೆ ಈಡೇರುತ್ತೆ ಅನ್ನೋದು ಹಲವರ ನಂಬಿಕೆ. ಇನ್ನು ತಾವು ಹೊತ್ತ ಹರಕೆ ಈಡೇರಿದ ಮೇಲೆಯೂ ಭಕ್ತರು ಮತ್ತೆ ಶಸ್ತ್ರ ಹಾಕಿಸಿಕೊಂಡು ಹರಕೆ ತೀರಿಸುತ್ತಾರೆ. ಇನ್ನು ಗೊರವಪ್ಪನ ನೂರಾರು ವೇಷಧಾರಿಗಳು ಢಮರುಘ ಬಾರಿಸುತ್ತಾ ಈ ಪವಾಡದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಇನ್ನೂ ಹಲವರು ಚಾಟಿಯಿಂದ ತಮ್ಮನ್ನು ತಾವು ಹೊಡೆದುಕೊಳ್ಳೋ ಮೂಲಕ ದೇಹ ದಂಡಿಸಿಕೊಂಡ್ರು. ಈ ಪವಾಡದಲ್ಲಿ ಭಾಗಿಯಾದ್ರೆ ತಮ್ಮ ಮೇಲೆ ಮೈಲಾರಲಿಂಗೇಶ್ವರನ ಕೃಪೆಯಿರುತ್ತದೆ. ಹಾಗಾಗಿ ಯಾವ ಪವಾಡ ಮಾಡಿದ್ರೂ ತಮಗೇನು ಆಗೋದಿಲ್ಲ ಅನ್ನೋದು ಸ್ಥಳೀಯರ ನಂಬಿಕೆ. ಊರು ಜನರ ನೆಮ್ಮದಿಗಾಗಿ, ಹಾಗೂ ಮುಂದಿನ ದಿನಗಳಲ್ಲಿ ಈ ಬಾರಿಯಾದಂತೆ ಪ್ರವಾಹ ಉಂಟಾಗಬಾರದು. ಜನರ ಜೀವನವನ್ನು ಹಾಳು ಮಾಡದ ರೀತಿಯಾಗಿ, ಸಮೃದ್ಧವಾದ ಮಳೆ ಬೆಳೆಗಾಗಿ ಪ್ರಾರ್ಥಿಸೋಕೇ ಈ‌ ಜಾತ್ರೆಯಲ್ಲಿ ಪಾಲ್ಗೊಂಡಿರೋದಾಗಿ ಹೇಳ್ತಾರೆ ಭಕ್ತರು.

ಬೈಟ್೦೨-ಮಹಾದೇವಿ, ಭಕ್ತರು.

ಗದಗ ಜಿಲ್ಲೆಯ ರೋಣ ಹಾಗೂ ನರಗುಂದ ತಾಲೂಕುಗಳ ಹಲವಾರು ಹಳ್ಳಿಗಳು ಈ ಬಾರಿ ಪ್ರವಾಹಕ್ಕೆ ಸಿಲುಕಿ ನಲುಗಿವೆ. ಮುಂದಿನ ದಿನಗಳಲ್ಲಿ ಈ ಬಗೆಯಾಗಿ ವಿಕೋಪಗಳು ನಡೆಯಂದತೆ ಎಲ್ರೂ ನೆಮ್ಮದಿಯ ಬದುಕು ಸಾಗಿಸೋವಂತಾಗಲಿ ಅಂತ ಬೇಡಿಕೊಂಡು ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಂಡಿದ್ರು.‌ ಮೈಲಾರಲಿಂಗ ಭಕ್ತರ ಬೇಡಿಕೆಯನ್ನು ಈಡೇರಿಸಲಿ ಎನ್ನೋದು ನಮ್ಮಾಶಯವೂ ಆಗಿದೆ.Body:GConclusion:G
Last Updated : Oct 8, 2019, 11:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.