ಗದಗ: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ವಿಚಾರಕ್ಕೆ ಗದಗದ ತೋಂಟದಾರ್ಯ ಮಠದ ಡಾ. ಸಿದ್ದರಾಮ ಶ್ರೀಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಸಿಎಂ ಯಡಿಯೂರಪ್ಪ ತರಾತುರಿಯಲ್ಲಿ ಘೋಷಣೆ ಮಾಡಿದ್ದಾರೆ. ಇದಕ್ಕೆ ಯಾವುದೇ ಗೊತ್ತು ಗುರಿ ಇಲ್ಲ. ಸ್ಪಷ್ಟತೆಯೂ ಕಂಡುಬರುತ್ತಿಲ್ಲ ಎಂದಿದ್ದಾರೆ.
ಅನುದಾನ ಘೋಷಣೆ ಮಾಡಿಲ್ಲ. ಬಿಡುಗಡೆಯೂ ಇಲ್ಲ. ಇದರ ಪ್ರಯೋಜನ ಯಾರಿಗೆ? ವೀರ ಶೈವರಿಗೋ..? ಲಿಂಗಾಯತರಿಗೋ..? ಅಥವಾ ವೀರಶೈವ ಲಿಂಗಾಯತ ಪ್ರಮಾಣಪತ್ರ ಪಡೆದವರಿಗೋ? ಯಾವುದೂ ಗೊತ್ತಿಲ್ಲ. ಈ ಹಿಂದೆ ಚುನಾವಣೆ ವೇಳೆ ಗೊಲ್ಲ ಅಭಿವೃದ್ಧಿ ನಿಗಮ ಮಾಡಿದ್ರಿ. ಅದು ಗೊಲ್ಲ ಅಭಿವೃದ್ಧಿ ನಿಗಮವೋ, ಕಾಡುಗೊಲ್ಲ ಅಭಿವೃದ್ಧಿ ನಿಗಮವೋ ಅನ್ನೋ ಸಂದೇಹ ಉಂಟಾಗಿದೆ. ಈ ನಿಗಮ ಕುರಿತು ಸಾರ್ವಜನಿಕ ಚರ್ಚೆ ಆಗಬೇಕು ಎಂದು ಆಗ್ರಹಿಸಿದ್ದಾರೆ.