ಗದಗ: ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ್ಗೆ ಇಂದು ಕ್ಯೂಆರ್ಟಿ ಪೊಲೀಸ್ ತಂಡ ಸಾಕಷ್ಟು ಭದ್ರತೆ ಕಲ್ಪಿಸಲಾಗಿತ್ತು. ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ, ಸಾರ್ವಜನಿಕರು ಸಚಿವರಿಗೆ ಮುಗಿಬೀಳಬಾರದು ಎಂಬ ಉದ್ದೇಶದಿಂದ ಸಾಕಷ್ಟು ಭದ್ರತೆ ಕಲ್ಪಿಸಲಾಗಿತ್ತು.
ಜಿಲ್ಲಾಡಳಿತ ಭವನದಲ್ಲಿ ಕೋವಿಡ್-19 ಕುರಿತು ಅಧಿಕಾರಿಗಳ ಸಭೆಗೆ ಹಾಜರಾಗಿದ್ದರು. ಈ ವೇಳೆ ಕ್ವಿಕ್ ರೆಸ್ಪಾನ್ಸ್ ಟೀಮ್ನ 10 ಜನ ಪೊಲೀಸ್ ಸಿಬ್ಬಂದಿ ಹಗ್ಗ ಹಿಡಿದು ನಡೆಯುತ್ತಾ ಸಚಿವರ ಹತ್ತಿರ ಯಾರೂ ಸುಳಿಯದಂತೆ ನೋಡಿಕೊಂಡರು.
ಇಂದಿನ ಸಭೆಯಲ್ಲೂ ಎಲ್ಲಾ ಅಧಿಕಾರಿಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ‘ನಮ್ಮ ಆರೋಗ್ಯ ನಮ್ಮ ಕೈನಲ್ಲಿ’ ಎಂಬ ಸಂದೇಶವನ್ನು ಸಚಿವರು ಸಾರಿ ಸಾರಿ ಹೇಳುವ ಮೂಲಕ ಮೊದಲು ತಾವು ಪಾಲನೆ ಮಾಡಲು ಮುಂದಾದರು.
ಇನ್ನು ಕೆಲವರು ಜನಸಾಮಾನ್ಯರ ಮಧ್ಯೆ ಕೆಲಸ ಮಾಡುವ ಜನಪ್ರತಿನಿಧಿಗಳಿಗೆ, ಸಚಿವರಿಗೆ ಈ ರೀತಿಯಾಗಿ ಪ್ರೊಟೆಕ್ಷನ್ ಬೇಕಿತ್ತಾ ಎಂಬುದು ಕೆಲವರ ಪ್ರಶ್ನೆಯಾಗಿತ್ತು. ಪ್ರೊಟೆಕ್ಷನ್ ಮೂಲಕ ಜನಸಾಮಾನ್ಯರ ಕಷ್ಟನಷ್ಟಗಳನ್ನು ಆಲಿಸಲು ಹೇಗೆ ಸಾಧ್ಯ ಅನ್ನೋ ಮಾತುಗಳೂ ಸಹ ಕೇಳಿಬಂದವು.