ETV Bharat / state

ಗದಗದಲ್ಲಿ ಕೊರೊನಾದಿಂದ ಸಾವನಪ್ಪಿದ ವೃದ್ಧೆಯ ಸ್ನೇಹಿತೆಗೂ ಸೋಂಕು: ಹೆಚ್ಚಿದ ಆತಂಕ - ಗದಗದಲ್ಲಿ ಕೊರೊನಾ ಎಫೆಕ್ಟ್​

ಗದಗದಲ್ಲಿ ಕೊರೊನಾದಿಂದ ಮೃತಪಟ್ಟಿದ್ದ ವೃದ್ಧೆಯ ಸ್ನೇಹಿತೆಗೆ ಕೊರೊನಾ ಸೋಂಕು ತಗುಲಿದ್ದು,ಜಿಲ್ಲೆಯಲ್ಲಿ ಆಂತಕ ಹೆಚ್ಚಾಗಿದೆ.

dsdd
ಗದಗದಲ್ಲಿ ಕೊರೊನಾ
author img

By

Published : Apr 16, 2020, 2:36 PM IST

ಗದಗ: ನಗರದಲ್ಲಿ ಇಂದು ಮತ್ತೊಂದು ಕೊರೊನಾ ಕೇಸ್ ಪತ್ತೆಯಾಗಿದೆ. ಕೆಲ ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿ ಮೃತಪಟ್ಟಿದ್ದ ವೃದ್ಧೆ ವಾಸವಾಗಿದ್ದ ರಂಗನವಾಡ ಗಲ್ಲಿಯಲ್ಲಿಯೇ ಮತ್ತೋರ್ವ ಮಹಿಳೆಗೆ ಸೋಂಕು ತಗುಲಿರುವುದು ದೃಢವಾಗಿದೆ.

ಗದಗದಲ್ಲಿ ಕೊರೊನಾ

ಸದ್ಯ 304 ನಂಬರ್ ರೋಗಿಗೆ ಮೃತ ಅಜ್ಜಿಯ ಸಂಪರ್ಕದಿಂದ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ಎಂ‌.ಜಿ ಹಿರೇಮಠ್​ ಮಾಹಿತಿ ನೀಡಿದ್ದಾರೆ. ಇನ್ನು ಸೋಂಕಿತ ಮೃತ ಅಜ್ಜಿ (ಕೇಸ್​ ನಂ 166) ಹಾಗೂ ಇಂದು ಪಾಸಿಟಿವ್ ಧೃಡಪಟ್ಟ 59 ವರ್ಷದ ರೋಗಿ (304) ಇಬ್ಬರೂ ಆತ್ಮೀಯ ಗೆಳತಿಯರಾಗಿದ್ದರು. ಒಂದೇ ಕಟ್ಟೆಯ ಮೇಲೆ ಕುಳಿತು ಮಾತನಾಡುತ್ತಿದ್ದರು. ಈ ಕಾರಣದಿಂದ ಸೋಂಕು ತಗುಲಿರಬಹುದು ಅಂತ ಹೇಳಲಾಗ್ತಿದೆ. ಇಂದು ಪತ್ತೆಯಾಗಿರುವ ರೋಗಿಗೆ ನಾಲ್ಕು ಮಕ್ಕಳಿದ್ದಾರೆ. ರೋಗಿಯ ಕುಟುಂಬದವರನ್ನು ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್ ವಾರ್ಡ್​​ಗೆ ದಾಖಲು‌ ಮಾಡಲಾಗಿದೆ.

ಜೊತೆಗೆ ರೋಗಿ ವಾಸವಾಗಿದ್ದ ಮನೆಯ ಅಕ್ಕಪಕ್ಕದ ,ಎಲ್ಲಾ ಜನರಿಗೆ ಥ್ರೋಟ್ ಸ್ವ್ಯಾಬ್ ತಪಾಸಣೆ ಮಾಡಲು ಜಿಮ್ಸ್ ಸಿಬ್ಬಂದಿ ಕರೆದುಕೊಂಡು ಹೋಗಿದ್ದಾರೆ. ಜೊತೆಗೆ ಈ ಪಾಸಿಟಿವ್ ಕೇಸ್ ಪ್ರಕರಣದ ಬೆನ್ನಲ್ಲೇ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಕಲ ವೈದ್ಯಕೀಯ ಸೌಲಭ್ಯಗಳೊಂದಿಗೆ ರಂಗನವಾಡಿ ಗಲ್ಲಿಯಲ್ಲಿ ಬೀಡುಬಿಟ್ಟಿದ್ದಾರೆ. ಸುತ್ತಲೂ ಬ್ಯಾರಿಕೇಡ್ ಹಾಕಿ ಜನರನ್ನು ನಿಯಂತ್ರಣ ಮಾಡಲಾಗಿದೆ. ‌ರಂಗನವಾಡಿ ಪ್ರದೇಶವನ್ನ ಕಂಟೈನ್​ನ್ಮೆಂಟ್ ಏರಿಯಾ ಎಂದು ಈಗಾಗಲೇ ಜಿಲ್ಲಾಧಿಕಾರಿ ಘೋಷಣೆ ಮಾಡಿದ್ರು. ಈಗ ಮತ್ತಷ್ಟು ಕಠಿಣ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.