ಗದಗ: ಬೆಲೆ ಏರಿಕೆ ಹಾಗೂ ನೂತನ ಕೃಷಿ ಕಾಯ್ದೆ ಕೈಬಿಡುವಂತೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಮಾಜಿ ಸಚಿವ ಎಚ್.ಕೆ. ಪಾಟೀಲ ನೇತೃತ್ವದಲ್ಲಿ ಟ್ರ್ಯಾಕ್ಟರ್ ಪ್ರತಿಭಟನಾ ರ‍್ಯಾಲಿ ನಡೆಯಿತು.
ಈ ವೇಳೆ ನೂರಾರು ಟ್ರ್ಯಾಕ್ಟರ್ಗಳಲ್ಲಿ ಬಂದ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ಮುತ್ತಿಗೆ ಹಾಕಿದರು. ಕಾರ್ಯಕರ್ತರನ್ನು ಗೇಟ್ ಬಳಿ ಪೊಲೀಸರು ತಡೆಹಿಡಿದರು. ಈ ವೇಳೆ ಬೇಗನೆ ಮನವಿ ತೆಗೆದುಕೊಳ್ಳಲು ಬಾರದ ಡಿಸಿ ಸುಂದರೇಶ್ ಬಾಬುರನ್ನು ಶಾಸಕ ಎಚ್.ಕೆ. ಪಾಟೀಲ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಓದಿ:ಟ್ರ್ಯಾಕ್ಟರ್ ಪಲ್ಟಿ: ಇಬ್ಬರು ಸ್ಥಳದಲ್ಲೇ ಸಾವು, 7 ಮಂದಿಗೆ ಗಾಯ
ನೀವೆಲ್ಲಾ ಅಧಿಕಾರಿಗಳು ಸರ್ಕಾರದ ಪರವಾಗಿ ನಿಂತು ರೈತರಿಗೆ ಅವಮಾನ ಮಾಡುತ್ತಿದ್ದೀರಿ. ನಾವು ಬಂದಾಗ ಡಿಸಿ ಇರಲಿಲ್ಲ, ಗೇಟ್, ಒಳಗಿನ ಬಾಗಿಲು, ಆಫೀಸ್ ಬಾಗಿಲು ಎಲ್ಲವನ್ನು ಯಾಕೆ ಕ್ಲೋಸ್ ಮಾಡಿದ್ರಿ? ನಾವು ಬರ್ತೀವಿ ಅಂತ ಗೊತ್ತಿದ್ರೂ ಯಾಕೆ ಕಚೇರಿಯಲ್ಲಿ ಇರಲಿಲ್ಲಾ? ನಿಮ್ಮ ವಾಚಮನ್ ಕೈಗೆ ಮನವಿ ಕೊಡಬೇಕಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾವು ಬರಬೇಕು ಅಂದುಕೊಂಡಿದ್ದೆವು ಎಂದು ಡಿಸಿ ಹೇಳಿದಾಗ, ನೀವು ಬಾರದಿರುವುದಕ್ಕೆ ಒಳ ನುಗ್ಗಿದ್ದೇವೆ. ಅಶಿಸ್ತು ನಿಮ್ಮಲ್ಲಿ ತುಂಬಿ ತುಳುಕುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.