ETV Bharat / state

ಸಾರಿಗೆ ಬಸ್ ಮತ್ತು ಕಾರು​ ನಡುವೆ ಅಪಘಾತ: ಇಬ್ಬರ ಸಾವು - ನರಗುಂದ ತಾಲೂಕಿನ ಕಲಕೇರಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ

ಕಾರ್​ ಬಸ್​ ನಡುವೆ ಭೀಕರ ಅಪಘಾತ; ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ಬಸ್ ಮತ್ತು ಕಾರು ನಡುವೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

retired-teacher-died
ಬಸ್ ಮತ್ತು ಕಾರು ನಡುವೆ ಅಪಘಾತ
author img

By

Published : Sep 2, 2022, 9:36 PM IST

ಗದಗ: ಸಾರಿಗೆ ಬಸ್ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ ಓರ್ವ ನಿವೃತ್ತ ಶಿಕ್ಷಕ ಹಾಗೂ ಮತ್ತೊಬ್ಬ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ಕಲಕೇರಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಘಟನೆಯಲ್ಲಿ ನವಲಗುಂದದ ಬಸವರಡ್ಡಿ ಹಾಗೂ ಹನಮಗೌಡ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನವೀನ ಹಾಗೂ ಮಂಜುನಾಥ್ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಬಾಗಲಕೋಟೆಯಿಂದ ವಾಪಸ್​ ತಮ್ಮ ಊರಿಗೆ ಹಿಂದಿರುಗಿದಾಗ ಈ ದುರಂತ ಸಂಭವಿಸಿದೆ. ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಲ್ಲಿ ಅನುಚಿತ ವರ್ತನೆ: ಪ್ರತಿರೋಧಿಸಿದ ಮಹಿಳೆಯನ್ನು ಕೆಳಗೆ ನೂಕಿದ ಕಿರಾತಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.