ETV Bharat / state

ಈರುಳ್ಳಿ ಬೆಲೆಯಲ್ಲಿ ದಿಢೀರ್​​ ಕುಸಿತ: ರೊಚ್ಚಿಗೆದ್ದ ರೈತರಿಂದ ಪ್ರತಿಭಟನೆ - ಗದಗ ಎಸ್​​ಪಿ ಶ್ರೀನಾಥ್ ಜೋಷಿ

ಈರುಳ್ಳಿ ಬೆಲೆಯಲ್ಲಿ ದಿಢೀರನೆ‌ ಕುಸಿತವಾದ ಹಿನ್ನೆಲೆ ಆಕ್ರೋಶಗೊಂಡ ರೈತರು ಗದಗದಲ್ಲಿ ಪ್ರತಿಭಟನೆ ನಡೆಸಿದ್ರು. ಇದೇ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ರು.

ರೈತರಿಂದ ಪ್ರತಿಭಟನೆ
author img

By

Published : Nov 5, 2019, 4:31 PM IST

ಗದಗ: ಈರುಳ್ಳಿ ಬೆಲೆಯಲ್ಲಿ ದಿಢೀರ್ ಕುಸಿತ ಕಂಡ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ರೈತರು ದಲ್ಲಾಳಿಗಳ ಅಂಗಡಿಯ ಈರುಳ್ಳಿ ತೂರಿ ಗಾಜು ಪುಡಿ ಮಾಡಿದ ಘಟನೆ ಗದಗದ ಎಪಿಎಂಸಿಯಲ್ಲಿ ನಡೆದಿದೆ.

ನಗರದ ಹಳೆಯ ಡಿಸಿ ಆಫೀಸ್​​ ವೃತ್ತದಲ್ಲಿ ರಸ್ತೆ ತಡೆದ ರೈತರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಆಗಮಿಸಿ ಪರಿಸ್ಥಿತಿ ಶಾಂತಗೊಳಿಸಲು ಪ್ರಯತ್ನಿಸಿದರೂ ರೈತರು ಮಾತ್ರ ಸ್ಥಳ ಬಿಟ್ಟು ಕದಲಲಿಲ್ಲ. ಪರಿಣಾಮ 1 ಘಂಟೆಗೂ ಹೆಚ್ಚು ಕಾಲ ರಾಜ್ಯ ಹೆದ್ದಾರಿ ಬಂದ್ ಆಗಿತ್ತು.

ಈರುಳ್ಳಿ ಬೆಲೆಯಲ್ಲಿ ದಿಢೀರ್​​ ಕುಸಿತ

ನೆರೆ ಹಾವಳಿಯಿಂದ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದ್ದರೂ ಸರ್ಕಾರ ಈರುಳ್ಳಿ ಬೆಳೆಗಾರರಿಗೆ ಬೆಂಬಲ ಬೆಲೆ ನೀಡುತ್ತಿಲ್ಲ. ಕಳೆದ ಕೆಲ ದಿನಗಳಲ್ಲಿ 4 ರಿಂದ 5 ಸಾವಿರ ರೂಗಳಿದ್ದ ಈರುಳ್ಳಿ ಬೆಲೆ‌ ಈಗ ಏಕಾಏಕಿ 1,500 ರೂಗೆ ಕುಸಿದಿದೆ. ಇದರಿಂದ ರೈತರಿಗೆ ಆಘಾತವಾಗಿದೆ ಎಂದು ಪ್ರತಿಭಟನಾನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಇನ್ನಾದ್ರೂ ರಾಜ್ಯ ಸರ್ಕಾರ ಈರುಳ್ಳಿಗೆ ಬೆಂಬಲ ಬೆಲೆ ನೀಡಬೇಕೆಂದು ರೈತರು ಆಗ್ರಹಿಸಿದರು. ಸ್ಥಳಕ್ಕೆ ಗದಗ ಎಸ್​​ಪಿ ಶ್ರೀನಾಥ್ ಜೋಷಿ, ಎಸಿ ಸ್ಥಳಕ್ಕೆ ಭೇಟಿ ನೀಡಿ ರೈತರ ಮನವೊಲಿಸಿದ್ರು. ದಲ್ಲಾಳಿಗಳ ಜೊತೆ ಮಾತನಾಡಿ ಸೂಕ್ತ ಬೆಲೆ ಒದಗಿಸೋ ಪ್ರಯತ್ನ ಮಾಡೋ ಭರವಸೆ ಸಿಕ್ಕ ನಂತರ ರೈತರು ತಮ್ಮ ಪ್ರತಿಭಟನೆ ಹಿಂಪಡೆದ್ರು.

Intro:Body:

[11/5, 3:24 PM] +91 99867 88757: ಗದಗ

ದಿಢೀರನೆ ಈರುಳ್ಳಿ ಬೆಲೆ‌ ಕುಸಿತ

ರೊಚ್ಚಿಗೆದ್ದ ರೈತರಿಂದ ಈರುಳ್ಳಿ ತೂರಿ ಗಾಜು ಪುಡಿಪುಡಿ ಮಾಡಿದ ರೈತರು, ಕುರ್ಚಿಗಳು ಪುಡಿಪುಡಿ

ಗದಗನ‌ ಎಪಿಎಂಸಿಯಲ್ಲಿ ನಡೆದ ಘಟನೆ

ದಲಾಲಿ ಅಂಗಡಿಳನ್ನು ಬಿಟ್ಟು ಓಡಿಹೋದ ದಾಲಾಲಿಗಳು

ಎಪಿಎಂಸಿ ಗೇಟ್ ಬಂದ್ ಮಾಡಿದ ರೈತರು

ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ, ಪೊಲೀಸರ ಆಗಮನ, ಪರಿಸ್ಥಿತಿ‌ ನಿಯಂತ್ರಣಕ್ಕೆ ಹರಸಾಹಸ

[11/5, 3:29 PM] +91 99867 88757: ಬುಗಿಲೆದ್ದ ರೈತರ ಆಕ್ರೋಶ, ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ..

ಆ್ಯಂಕರ್: ಈರುಳ್ಳಿ ಬೆಲೆ ದಿಢೀರ್‌ ಕುಸಿದಿರುವ ಹಿನ್ನಲೆಯಲ್ಲಿ  ರಸ್ತೆ ತಡೆದು ರೈತರು ಪ್ರತಿಭಟನೆ ನಡೆಸಿದ ಘಟನೆ ಗದಗನಲ್ಲಿ ನಡೆದಿದೆ, ನಗರದ ಹಳೇ ಡಿಸಿ ಆಪೀಸ್ ವೃತ್ತದಲ್ಲಿ ರಸ್ತೆ ತಡೆದ ರೈತರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು, ಸ್ಥಳಕ್ಕೆ  ಪೊಲೀಸರು ಆಗಮಿಸಿ ಪರಸ್ಥಿತಿ ಶಾಂತ ಮಾಡೋಕೆ ಪ್ರಯತ್ನಿಸಿದರು ಸಹ ಲೆಕ್ಕಿಸದ ರೈತರು ಯಾವುದೇ ಕಾರಣಕ್ಕೂ ಸ್ಥಳ ಬಿಟ್ಟು ಕದಲಲಿಲ್ಲಾ, ಪರಿಣಾಮ ೧ ಘಂಟೆಗೂ ಹೆಚ್ಚು ಕಾಲ ರಾಜ್ಯ ಹೆದ್ದಾರಿ ಬಂದ್ ಆಯಿತು. ಇನ್ನು

ನೆರೆ ಹಾವಳಿಯಿಂದ ರೈತ ಸಮುದಾಯದ ಸಂಕಷ್ಟಕ್ಕೆ ಸಿಲುಕಿದ್ದರೂ ಕೂಡ ಸರ್ಕಾರ ಈರುಳ್ಳಿ ಬೆಳೆಗಾರರ ರಿಗೆ ಬೆಂಬಲ ಬೆಲೆ ನೀಡುತ್ತಿಲ್ಲಾ. ಕಳೆದ ದಿನಗಳಲ್ಲಿ 4-5 ಸಾವಿರ ಇದ್ದ ಈರುಳ್ಳಿ ಬೆಲೆ‌ ಈಗ ಏಕಾಏಕಿ 1500 ಮೌಲ್ಯಕ್ಕೆ ಕುಸಿದಿರುವುದು ರೈತರಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ ಎಂದು ಪ್ರತಿಭಟನಾನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು. ಇನ್ನಾದ್ರೂ ರಾಜ್ಯ ಸರ್ಕಾರ ಈರುಳ್ಳಿಗೆ ಬೆಂಬಲ ನೀಡಬೇಕೆಂದು ರೈತರು ಆಗ್ರಹಿಸಿದರು. ಇನ್ನು ಏಕಾಏಕಿ ರಸ್ತೆ ತಡೆ ನಡೆಸಿದ್ದರಿಂದ ಬಸ್ ಪ್ರಯಾಣಿಕರು ಸೇರಿದಂತೆ ವಾಹನ ಸವಾರರು ಪರದಾಡಿದರು...

[11/5, 3:30 PM] +91 99867 88757: ಗದಗ update

ಗದಗ ಎ.ಪಿ.ಎಂ.ಸಿ ನಲ್ಲಿ ಗಲಾಟೆ

ರೊಚ್ಚಿಗೆದ್ದ ರೈತರಿಂದ ಕುರ್ಚಿ, ಅಂಗಡಿ ಗ್ಲಾಸ್ ಒಡೆದು, ದಲ್ಲಾಳಿಗಳಿಗೆ ಗೂಸಾ

ರೈತರ ಆಕ್ರೋಶಕ್ಕೆ ಕಂಗಾಲ ದಲ್ಲಾಳಿ ಹಾಗೂ ವರ್ತಕರು

ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲೆ ಗಲಾಟೆ

ರೊಚ್ಚಿಗೆದ್ದ ನೂರಾರು ರೈತರು

[11/5, 3:43 PM] +91 99867 88757: ಸ್ಲಗ್-ದಿಢೀರನೆ ಕುಸಿದ ಈರುಳ್ಳಿ ಬೆಲೆ...ಭುಗಿಲೆದ್ದ ರೈತರ ಆಕ್ರೋಶ, ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ....ದಲಾಲಿ ಅಂಗಡಿಗಳ ಗ್ಲಾಸ್ ಗಳಿಗೆ ಈರುಳ್ಳಿ ತೂರಿ ಆಕ್ರೋಶ.....ರೈತರ ಆಕ್ರೋಶಕ್ಕೆ ಪುಡಿಪುಡಿಯಾದ ಗ್ಲಾಸ್ಗಳು, ಕುರ್ಚಿಗಳು....ಅಂಗಡಿ‌ ಬಿಟ್ಟು ಓಡಿಹೋದ ದಲಾಲಿಗಳ

ಆಂಕರ್- ಈರುಳ್ಳಿ ಬೆಲೆ ದಿಢೀರ್‌ ಕುಸಿದ ಹಿನ್ನೆಲೆಯಲ್ಲಿ ದಲಾಲಿ ಅಂಗಡಿಗಳ ಗ್ಲಾಸ್ ಗಳನ್ನು ರೈತರು ಒಡೆದು ಪುಡಿಪುಡಿ ಮಾಡಿದ ಘಟನೆ ಗದಗ ಎಪಿಎಂಸಿಯಲ್ಲಿ ನಡೆದಿದೆ. ರೈತರ ಆಕ್ರೋಶಕ್ಕೆ ದಲಾಲಿಗಳು ಅಂಗಡಿಗಳನ್ನು ಬಿಟ್ಟು ಪರಾರಿಯಾದ್ರು. ಇನ್ನು ಆಕ್ರೋಶಗೊಂಡ ರೈತರು ಗದಗ ಎಪಿಎಂಸಿಯಿಂರ ಜನರಲ್ ಕಾರ್ಯಪ್ಪ ಸರ್ಕಲ್ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯ ಹೆದ್ದಾರಿ ತಡೆದ್ರು. ಇದ್ರಿಂದ ವಾಹನ ಸವಾರರು ಪರದಾಡುವಂತಾಯಿತು. ಇನ್ನು ಸ್ಥಳಕ್ಕೆ ಗದಗ ಎಸ್ಪಿ ಶ್ರೀನಾಥ್ ಜೋಷಿ, ಗದಗ ಎಸಿ ಸ್ಥಳಕ್ಕೆ ಭೇಟಿ ನೀಡಿ ರೈತರ ಮನವೊಲಿಸಿದ್ರು. ದಲಾಲಿಗಳ ಜೊತೆ ಮಾತನಾಡಿ ಸೂಕ್ತ ಬೆಲೆ ಒದಗಿಸೋ ಪ್ರಯತ್ನ ಮಾಡೋ ಭರವಸೆ ಸಿಕ್ಕ ನಂತರ ರೈತರು ತಮ್ಮ ಪ್ರತಿಭಟನೆ ಹಿಂಪಡೆದ್ರು. ಕ್ವಿಂಟಲ್ ಗೆ 4-5 ಸಾವಿರ ಇದ್ದ ಈರುಳ್ಳಿ ಬೆಲೆ‌ ಈಗ ಏಕಾಏಕಿ 150 ಕ್ಕೆ ಕುಸಿದಿದ್ದು ರೈತರ ಆಕ್ರೋಶಕ್ಕೆ ಕಾರಣವಾಯಿತು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.