ಗದಗ : ಲಾಕ್‌ಡೌನ್ ತೆರುವಾದ ಬಳಿಕ ಜಿಲ್ಲೆಯಲ್ಲಿ ಮೊದಲ ಬಾರಿಗೆ ಟಗರಿನ ಕಾಳಗ ಸ್ಪರ್ಧೆ ಏರ್ಪಡಿಸಲಾಗಿತ್ತು. ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಎರಡು ದಿನದಿಂದ ಟಗರಿನ ಕಾಳಗ ಸ್ಪರ್ಧೆ ಆಯೋಜಿಸಲಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಲಕ್ಷ್ಮೇಶ್ವರ ಪಟ್ಟಣದ ದುಂಡಿ ಬಸವೇಶ್ವರ ದೇವಸ್ಥಾನದ ಮೈದಾನದಲ್ಲಿ ಅದ್ದೂರಿಯಾಗಿ ಟಗರಿನ ಕಾಳಗ ಸ್ಪರ್ಧೆ ನಡೆಯಿತು. ಜಿಲ್ಲೆಯಷ್ಟೇ ಅಲ್ಲದೆ ಹಾವೇರಿ, ಬಾಗಲಕೋಟೆ, ದಾವಣಗೆರೆ, ವಿಜಯಪುರ, ಧಾರವಾಡ ಸೇರಿ ಹಲವು ಜಿಲ್ಲೆಗಳಿಂದ ಟಗರು ಸ್ಪರ್ಧೆಗೆ ಆಗಮಿಸಿದ್ದವು.
ಓದಿ : ಸಚಿವ ಸಂಪುಟ ಸಭೆ.. ಕರ್ನಾಟಕ ಗೋ ಹತ್ಯೆ ಪ್ರತಿಬಂಧಕ ನಿಯಮ ಸುಗ್ರೀವಾಜ್ಞೆಗೆ ಅನುಮೋದನೆ ಸಾಧ್ಯತೆ
ಹಾಲು ಹಲ್ಲು, 2 ಹಲ್ಲು, 4 ಹಲ್ಲು, 6 ಹಲ್ಲು ಮತ್ತು 8 ಹಲ್ಲುಗಳ ಟಗರುಗಳ ಸ್ಪರ್ಧೆ ಆಯೋಜಿಸಲಾಗಿತ್ತು. ಟಗರುಗಳ ಕಾಳಗ ನೆರೆದಿದ್ದ ನೂರಾರು ಜನರಲ್ಲಿ ರೋಮಾಂಚನ ಮೂಡಿಸಿತು.