ETV Bharat / state

ಗದಗ-ಮುಂಬೈ ಎಕ್ಸ್‌ಪ್ರೆಸ್‌ ರೈಲು ಸಂಚಾರಕ್ಕೆ ಸಿದ್ಧತೆ: ಜಿಲ್ಲೆಯ ಜನರಲ್ಲಿ ಹೆಚ್ಚಾದ ಆತಂಕ - Train traffic start

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಇದೀಗ ಗದಗ ಹಾಗೂ ಮುಂಬೈ ನಡುವೆ ನಿತ್ಯ ರೈಲು ಸಂಚಾರಕ್ಕೆ ಸಿದ್ಧತೆ ನಡೆದಿದೆ. ಈ ಹಿನ್ನೆಲೆ ಜೂ. 1ರಿಂದ ರೈಲು ಸಂಚರಿಸಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಈ ಆದೇಶದಿಂದಾಗಿ ಜಿಲ್ಲೆಯ ಜನರಲ್ಲಿ ಆತಂಕ ಮನೆಮಾಡಿದ್ದು, ಮುಂಬೈ ಸೋಂಕಿತರ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಭೀತಿ ಎದುರಾಗಿದೆ.

Preparing for daily train service from Mumbai to Gadag
ಮುಂಬೈಯಿಂದ ಗದಗಕ್ಕೆ ನಿತ್ಯ ರೈಲು ಸಂಚಾರಕ್ಕೆ ಸಿದ್ಧತೆ: ಏರಿಕೆಯಾಗಲಿದ್ಯಾ ಸೋಂಕಿತರ ಸಂಖ್ಯೆ..?
author img

By

Published : May 28, 2020, 9:17 PM IST

ಗದಗ: ಸೋಮವಾರದಿಂದ ಗದಗ-ಮುಂಬೈ ಎಕ್ಸ್‌ಪ್ರೆಸ್‌ ರೈಲು ಆರಂಭವಾಗಲಿದ್ದು, ಮುಂಬೈ ಕಂಟಕ ಗದಗ ಜಿಲ್ಲೆಗೂ ತಗುಲುತ್ತಾ ಎಂಬ ಭಯ ಜಿಲ್ಲೆಯ ಜನರನ್ನು ಕಾಡುತ್ತಿದೆ. ಒಂದಡೆ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈ ಬೆನ್ನಲ್ಲೆ ರೈಲು ಓಡಾಟ ಜಿಲ್ಲೆಯಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.

ಜಿಲ್ಲೆಯಲ್ಲಿ 35 ಮಂದಿ ಸೋಂಕಿತರಿದ್ದು, ಇದರಲ್ಲಿ ಹೊರ ರಾಜ್ಯದಿಂದ ಬಂದವರ ಸಂಖ್ಯೆಯೇ ಹೆಚ್ಚಿದೆ. ಈ ಸಂದರ್ಭದಲ್ಲಿ ಮುಂಬೈನಿಂದ ಪ್ರತಿದಿನ ರೈಲು ಓಡಾಡುವ ವಿಷಯ ಆಘಾತ ಮೂಡಿಸಿದೆ.

ರೈಲ್ವೆ ಇಲಾಖೆ ಮಾಹಿತಿ ಪ್ರಕಾರ ಜೂ. 1 ರಿಂದ ಪ್ರತಿದಿನ ರೈಲು ಓಡಾಟ ಆರಂಭವಾಗಲಿದ್ದು, ಸೋಮವಾರ ಮುಂಬೈ ಬಿಡಲಿರುವ ರೈಲು,‌ ಮಂಗಳವಾರ ಗದಗ ತಲುಪಲಿದೆ. ಈ ಕುರಿತು ರೈಲ್ವೆ ಇಲಾಖೆ ಅಧಿಕೃತ ಮಾಹಿತಿ ಪತ್ರ ಬಿಡುಗಡೆ ಮಾಡಿದೆ. ಆದರೆ, ಗದಗ ಜಿಲ್ಲಾಡಳಿತಕ್ಕೆ ರೈಲು ಓಡಾಟದ ಮಾಹಿತಿ ಇಲ್ಲದೇ ಇರುವುದು ವಿಪರ್ಯಾಸ.

Preparing for daily train service from Mumbai to Gadag
ರೈಲ್ವೆ ಇಲಾಖೆ ಅಧಿಕೃತ ಮಾಹಿತಿ ಪತ್ರ

ರೈಲು ಬರುವ ಬಗ್ಗೆ ಮಾಹಿತಿ ಬಂದಿಲ್ಲಾ ಅಂತ ಗದಗ ಡಿಸಿ ಎಂ.ಜಿ ಹಿರೇಮಠ ತಿಳಿಸಿದ್ದಾರೆ. ಪ್ರಯಾಣಿಕರು ಎಷ್ಟು ಜನ ಆಗಮಿಸಲಿದ್ದಾರೆ ಎಂಬ ಮಾಹಿತಿ ರೈಲ್ವೆ ಇಲಾಖೆಯಿಂದ ನಮಗೆ ಇನ್ನು ಬಂದಿಲ್ಲಾ. ಮಾಹಿತಿ ಬಂದ‌ ನಂತರ ಪ್ರಯಾಣಿಕರ ಕ್ವಾರಂಟೈನ್ ಬಗ್ಗೆ ಚಿಂತನೆ ಮಾಡುತ್ತೇವೆ. ಅಕಸ್ಮಾತ್ ರೈಲ್ವೆ ಇಲಾಖೆ ಮಾಹಿತಿ ತಡವಾಗಿ ಬಂದರೂ, ಸರ್ಕಾರದ ಕೆಲವು ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸುವ ಕೆಲಸ‌ ಮಾಡಲಾಗುವುದು ಅಂತಾ ಹಿರೇಮಠ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.