ETV Bharat / state

ಅನುಮಾನಾಸ್ಪದ ವ್ಯಕ್ತಿಗಳ ಮನೆಗಳ ಮೇಲೆ ಪೊಲೀಸರ ದಾಳಿ: ಮಾರಕಾಸ್ತ್ರಗಳ ಪರಿಶೀಲನೆ - ETV Bharath Kannada

ಬೆಳ್ಳಂ ಬೆಳಗ್ಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದು, ಅನುಮಾನಾಸ್ಪದ ವ್ಯಕ್ತಿಗಳ ಮನೆಗಳ ಮೇಲೆ ದಾಳಿ ಮಾರಕಾಸ್ತ್ರಗಳನ್ನು ಪರಿಶೀಲಿಸಿದರು.

Etv Bharat
ಮಾರಕಾಸ್ತ್ರಗಳ ಪರಿಶೀಲನೆ
author img

By

Published : Dec 9, 2022, 10:08 AM IST

ಗದಗ: ಕಳೆದ ಹಲವು ದಿನಗಳಿಂದ ಅವಳಿ ನಗರದಲ್ಲಿ ಹೆಚ್ಚುತ್ತಿರುವ ಪುಂಡ ಪೋಕರಿಗಳ ಹಾವಳಿ ತಡೆಗಟ್ಟಲು ಪೊಲೀಸರು ಬೆಳ್ಳಂಬೆಳಗ್ಗೆ ಕಾರ್ಯಾಚರಣೆಗೆ ಇಳಿದಿದ್ದಾರೆ. ಒಂದೇ ವಾರದಲ್ಲಿ ಚಾಕು ಇರಿತದ ಎರಡು ಪ್ರಕರಣಗಳು ನಡೆದ ಬೆನ್ನಲ್ಲೇ ಅಲರ್ಟ್ ಆಗಿರುವ ಪೊಲೀಸರು, ಡಿವೈಎಸ್​ಪಿ ಶಿವಾನಂದ ಪವಾಡಶೆಟ್ಟರ್ ನೇತೃತ್ವದಲ್ಲಿವ ಹಲವು ಪ್ರದೇಶಗಳಲ್ಲಿ ಮನೆ - ಮನೆಗಳ ಸರ್ಚಿಂಗ್ ನಡೆಸಿದರು.

ಅನುಮಾನಾಸ್ಪದ ವ್ಯಕ್ತಿಗಳ ಮನೆಗಳ ಮೇಲೆ ಪೊಲೀಸರ ದಾಳಿ: ಮಾರಕಾಸ್ತ್ರಗಳ ಪರಿಶೀಲನೆ

ಗದಗ ಶಹರ ಹಾಗೂ ಬೆಟಗೇರಿ ಠಾಣೆಯ ನೂರಾರು ಪೊಲೀಸರು, ಕಮ್ಮಾರ ಸಾಲ ಹಾಗೂ ರಂಗನವಾಡಿ ಗಲ್ಲಿಯ ಅನುಮಾನಾಸ್ಪದ ಮನೆಗಳಲ್ಲಿ ಶೋಧ ನಡೆಸಿದರು. ಕೆಲ ಮನೆಗಳಲ್ಲಿ ಚಾಕು, ಕಂದ್ಲಿಗಳು ಹಾಗೂ ರಾಡ್ ಪತ್ತೆಯಾಗಿವೆ ಎನ್ನಲಾಗಿದೆ. ಇಬ್ಬರು ಸಿಪಿಐ, ಪಿಎಸ್ಐ ಸೇರಿದಂತೆ ಹಲವು ಅಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ಇದ್ದರು.

ಇದನ್ನೂ ಓದಿ: ಗದಗ: ಕ್ಷುಲ್ಲಕ ಕಾರಣಕ್ಕೆ ಮೂವರಿಗೆ ಚಾಕು ಇರಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.