ETV Bharat / state

ಪೊಲೀಸರೂ ಕೂಡ ಮನುಷ್ಯರೇ, ಗದಗದಲ್ಲಿ ಖಾಕಿಯೊಳಗಿನ ಮಾನವೀಯತೆಯ ದರ್ಶನ.. - ಕಾಶಿ ವಿಶ್ವನಾಥ ನಗರ ಗದಗ

ಬೆಳಗ್ಗೆ ತರಕಾರಿ‌ ತರಲು ಬಂದಾಗ ಏಕಾಏಕಿ ಮೂರ್ಛೆ ತಪ್ಪಿದ್ದರು. ಹೀಗೆ ನಡು ರಸ್ತೆಯಲ್ಲಿ ನರಳಾಡುತ್ತಿದ್ದ ವ್ಯಕ್ತಿಯನ್ನು ಕಂಡ ಸ್ಥಳದಲ್ಲಿದ್ದ ಡಿವೈಎಸ್ಪಿ ಏಗನಗೌಡ್ರ, ಪಿಎಸ್‌ಐ ಕಮಲಾ ದೊಡ್ಡಮನಿ ಹಾಗೂ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.

First Aid
ಪ್ರಥಮ ಚಿಕಿತ್ಸೆ ನೀಡಿದ ಪೊಲೀಸರು
author img

By

Published : Apr 8, 2020, 10:09 AM IST

ಗದಗ: ಮೂರ್ಛೆ(ಪಿಟ್ಸ್​​)ರೋಗದಿಂದ ನರಳಾಡುತ್ತಿರೋ ವ್ಯಕ್ತಿ ನೋಡಿದ್ದ ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ಪ್ರಥಮ ಚಿಕಿತ್ಸೆ ನೀಡಿ ಆತನನ್ನು ಅಪಾಯದಿಂದ ಪಾರು ಮಾಡಿದ ಘಟನೆ ನಗರದ‌ ಎಪಿಎಂಸಿ ಮಾರುಕಟ್ಟೆಯಲ್ಲಿ‌ ನಡೆದಿದೆ.

ನಗರದ ಕಾಶಿ ವಿಶ್ವನಾಥ ನಗರದ ನಿವಾಸಿ ಶಿವಾನಂದ ಆಸಂಗಿ(40) ಎಂಬಾತ ಬೆಳಗ್ಗೆ ತರಕಾರಿ‌ ತರಲು ಬಂದಾಗ ಏಕಾಏಕಿ ಮೂರ್ಛೆ ತಪ್ಪಿದ್ದರು. ಹೀಗೆ ನಡು ರಸ್ತೆಯಲ್ಲಿ ನರಳಾಡುತ್ತಿದ್ದ ವ್ಯಕ್ತಿಯನ್ನು ಕಂಡ ಸ್ಥಳದಲ್ಲಿದ್ದ ಡಿವೈಎಸ್ಪಿ ಏಗನಗೌಡ್ರ, ಪಿಎಸ್‌ಐ ಕಮಲಾ ದೊಡ್ಡಮನಿ ಹಾಗೂ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಆತನ ಕೈಗೆ ಕಬ್ಬಿಣದ ವಸ್ತು ನೀಡಿ ಕೈಕಾಲು ಬೆರಳುಗಳಿಗೆ ಉಪಚಾರ‌ ನೀಡಿದ್ದಾರೆ.

ಪಿಟ್ಸ್ ಬಂದ ವ್ಯೆಕ್ತಿಗೆ ಪ್ರಥಮ ಚಿಕಿತ್ಸೆ ನೀಡಿದ ಪೊಲೀಸರು..

ನಂತರ ಸ್ಥಳಕ್ಕಾಗಮಿಸಿದ ಎಸ್ಪಿ ಯತೀಶ್ ಅವರು, ಕೂಡಲೇ ಆತನನ್ನು ಆಟೋ ಮೂಲಕ ಆಸ್ಪತ್ರೆಗೆ ಸಾಗಿಸಿದರು. ಪೊಲೀಸರ ಈ ಸಮಯೋಚಿತ ಮಾನವೀಯ ನಡೆಯಿಂದಾಗಿ ಆ ವ್ಯಕ್ತಿಯು ಪ್ರಾಣಪಾಯದಿಂದ ಪಾರಾಗಿದ್ದಾರೆ. ಲಾಕ್‌ಡೌನ್ ನಡುವೆಯೂ ಪೊಲೀಸ್ ಸಿಬ್ಬಂದಿ ಮಾನವೀಯತೆಯ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.