ಗದಗ: ಸರ್ಕಾರ ಸಂಡೇ ಲಾಕ್ಡೌನ್ ತೆರವು ಮಾಡಿದೆ. ಆದರೆ ನಗರದಲ್ಲಿ ಜನರು ಮನೆಯಿಂದ ಹೊರ ಬರುತ್ತಿಲ್ಲ. ಹೀಗಾಗಿ ರಸ್ತೆಗಳು ಬಿಕೋ ಎನ್ನುತ್ತಿದ್ದವು.
ನಗರದಲ್ಲಿ ಬೆರಳೆಣಿಕೆಯ ವಾಹನಗಳ ಸಂಚಾರ ಕಂಡುಬಂತು. ಜನರಿನ್ನೂ ಸಂಡೇ ಲಾಕ್ಡೌನ್ ಗುಂಗಿನಲ್ಲಿಯೇ ಇರುವಂತೆ ಗೋಚರಿಸಿತು. ಬೆಳಗ್ಗೆ 10 ಗಂಟೆಯಾದರೂ ಅಂಗಡಿ ತೆರೆಯಲಿಲ್ಲ.
ಜಿಲ್ಲೆಯಲ್ಲಿ 1,480 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 34 ಮಂದಿ ಮೃತಪಟ್ಟಿದ್ದಾರೆ.