ಗದಗ:ಕೋವಿಡ್ ನಿಯಂತ್ರಣಕ್ಕಾಗಿ ಟಫ್ ರೂಲ್ಸ್ ಜಾರಿ ಹಿನ್ನೆಲೆ ಖಾಕಿ ಪಡೆ ಕಟ್ಟೆಚ್ಚರ ವಹಿಸುತ್ತಿದೆ. ನಗರದಲ್ಲಿ ಸುಖಾಸುಮ್ಮನೆ ಓಡಾಡುವವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡುತ್ತಿದ್ದಾರೆ.
ನಗರದ ಸರಾಫ್ ಬಜಾರ್ನಲ್ಲಿ ತೆರೆದಿದ್ದ ಬಂಗಾರದ ಅಂಗಡಿ ಸೀಜ್ ಮಾಡಿ ವ್ಯಾಪಾರಿ ಬಂಧಿಸಲಾಗಿದೆ. ಅಗತ್ಯ ವಸ್ತುಗಳ ಅಂಗಡಿ ಹೊರತುಪಡಿಸಿ ತೆರದಿದ್ದ ಅಂಗಡಿಗಳನ್ನು ಮುಚ್ಚಿಸಲಾಗಿದೆ.
ಇನ್ನು ಮಾರ್ಕೆಟ್ ಹಾಗೂ ಪ್ರಮುಖ ಸರ್ಕಲ್ನಲ್ಲಿ ಮಾಸ್ಕ್ ಹಾಕದ ವ್ಯಾಪಾರಸ್ಥರು, ಸಾರ್ವಜನಿಕರಿಂದ ದಂಡ ವಸೂಲಿ ಮಾಡಲಾಯಿತು.