ಗದಗ: ಇಂದು ಹೊಸದಾಗಿ 38 ಜನರನ್ನೂ ಸೇರಿಸಿ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 1,351 ಜನರ ಮೇಲೆ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ಇನ್ನು 28 ದಿನಗಳ ನಿಗಾ ಅವಧಿ ಪೂರೈಸಿದವರು 231 ಜನರಿದ್ದಾರೆ. ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿರುವವರು 1,092 ಜನರಿದ್ದಾರೆ. ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿರುವವರು 18 ಜನರಿದ್ದಾರೆ. ಇನ್ನು ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು ಮಾದರಿಗಳು 1,408 ಇದ್ದು, ಇದರಲ್ಲಿ 1,165 ವರದಿಗಳು ನೆಗೆಟಿವ್ ಬಂದಿವೆ. 55 ವರದಿಗಳು ತಿರಸ್ಕೃತಗೊಂಡಿದ್ದು, 183 ವರದಿಗಳು ಬರಲು ಬಾಕಿ ಇವೆ ಎಂದಿದ್ದಾರೆ.
ಜಿಲ್ಲೆಯಲ್ಲಿ ಪಿ-166, ಪಿ-304, ಪಿ-370, ಪಿ-396, ಪಿ-514 ಒಟ್ಟು 5 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಪಿ-166 ಕಾರ್ಡಿಕ್ ಅರೆಸ್ಟ್ನಿಂದ ಮೃತಪಟ್ಟಿದ್ದಾರೆ. ಪಿ-304 ವ್ಯಕ್ತಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ ಎಂದರು.