ಗದಗ: ಜಿಲ್ಲೆಯಲ್ಲಿ ಆರ್ಭಟಿಸಿದ ಅತಿಯಾದ ಮಳೆಯಿಂದ ಈರುಳ್ಳಿ ಬೆಳೆ ನೆಲದಲ್ಲೇ ಕೊಳೆತಿದೆ. ಇದರಿಂದ ಬೇಸತ್ತ ರೈತರೊಬ್ಬರು ಟ್ರ್ಯಾಕ್ಟರ್ನಿಂದ ಬೆಳೆ ನಾಶ ಮಾಡಿದ್ದಾರೆ.
ತಾಲೂಕಿನ ಸಂಬಾಪೂರದ ಗೋವಿಂದರೆಡ್ಡಿ ನಾಗನೂರ ಎಂಬ ರೈತ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆಯನ್ನು ತಾವೇ ನಾಶಪಡಿಸಿದ್ದಾರೆ. ಕಟಾವು ಮಾಡಿದರೂ ಅದರಲ್ಲಿ ಸ್ವಲವೂ ಲಾಭ ಸಿಗದೆ ಖರ್ಚಿನ ಹೊರೆಯಾಗ್ತಿತ್ತು ಎಂದಿದ್ದಾರೆ.
ಈ ಕುರಿತು ಮಾತನಾಡಿದ ಗೋವಿಂದರೆಡ್ಡಿ, ಈರುಳ್ಳಿ ಬೆಳೆಗೆ ಸುಮಾರು 50 ಸಾವಿರ ರೂ. ಖರ್ಚು ಮಾಡಿದ್ದೆ. ಕಳೆದೆ ವರ್ಷ ನಾಲ್ಕು ಎಕರೆ ಈರುಳ್ಳಿ ಬೆಳೆಗೆ ಭರ್ಜರಿ ಲಾಭ ಸಿಕ್ಕಿತ್ತು. ಆದರೆ ಈ ವರ್ಷ ಅತಿಯಾದ ಮಳೆ ಇಡೀ ಬೆಳೆಯನ್ನು ಹಾಳು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.