ETV Bharat / state

ಅ.10 ಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್​ಗೆ​ ರಾಮಣ್ಣ ಲಮಾಣಿ ಸೇರ್ಪಡೆ.. ಮಾಜಿ ಶಾಸಕರ ಸ್ಪಷ್ಟನೆ ಹೀಗಿದೆ - ಮಾಜಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಅಕ್ಟೋಬರ್ 10ಕ್ಕೆ ಮಾಜಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತೇವೆ ಎಂದು ಮಾಜಿ ಶಾಸಕ ರಾಮಣ್ಣ ಲಮಾಣಿ ಹೇಳಿಕೆ ನೀಡಿದ್ದಾರೆ.

ಮಾಜಿ ಶಾಸಕ ರಾಮಣ್ಣ ಲಮಾಣಿ
ಮಾಜಿ ಶಾಸಕ ರಾಮಣ್ಣ ಲಮಾಣಿ
author img

By ETV Bharat Karnataka Team

Published : Sep 30, 2023, 12:58 PM IST

Updated : Sep 30, 2023, 1:18 PM IST

ಮಾಜಿ ಶಾಸಕ ರಾಮಣ್ಣ ಲಮಾಣಿ

ಗದಗ: ಮೂಡಿಗೆರೆ ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ ರಾಮಣ್ಣ ಲಮಾಣಿ ಸೇರಿದಂತೆ ವಿವಿಧ ಮಾಜಿ ಶಾಸಕರು ಅಕ್ಟೋಬರ್ 10 ರಂದು ಜಗದೀಶ್ ಶೆಟ್ಟರ್​ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತೇವೆ ಎಂದು ಮಾಜಿ ಶಾಸಕ ರಾಮಣ್ಣ ಲಮಾಣಿ ಹೇಳಿದರು. ಅವರು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಕುಂದ್ರಳ್ಳಿ ಗ್ರಾಮದ ಮನೆಯಲ್ಲಿ ಮಾಧ್ಯಮದವರ ಮುಂದೆ ಮಾತನಾಡಿದರು.

ಬಿಜೆಪಿಯಲ್ಲಿ ಎರಡು ಬಾರಿ ಶಾಸಕನಾಗಿ ಶಿರಹಟ್ಟಿ ಮುಂಡರಗಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಮೂರನೇ ಬಾರಿಗೆ ಕೊನೆಯ ಹಂತದವರೆಗೂ ಎಲ್ಲಾ ಕಡೆ ಕಾರ್ಯಕ್ರಮಕ್ಕೆ ಖರ್ಚುವೆಚ್ಚಗಳನ್ನು ಮಾಡಿದ್ದೆ. ಆದರೆ ಕೊನೆಯ ಹಂತದಲ್ಲಿ ಬಿಜೆಪಿಯಿಂದ ನನಗೆ ಟಿಕೆಟ್ ಕೊಡಲಿಲ್ಲ. ಆದರೂ ನಿಷ್ಠಾವಂತನಾಗಿ ಬಿಜೆಪಿಯಲ್ಲಿ ದುಡಿದಿದ್ದೇನೆ. ಆದರೆ ಈಗಿನ ಶಾಸಕ ಡಾ. ಚಂದ್ರು ಲಮಾಣಿ ಅವರು ಬಿಜೆಪಿ ಕಾರ್ಯಕರ್ತರನ್ನು ಹತ್ತಿರಕ್ಕೆ ಸೇರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ನೀನು ರಾಮಣ್ಣ ಲಮಾಣಿಯವರ ಅಭಿಮಾನಿ ನಮ್ಮ ಹತ್ತಿರ ಬರುವುದಕ್ಕೆ ಹೋಗಬೇಡ ಎಂದು ಹೇಳುತ್ತಿರುತ್ತಾರೆ ಎಂದು ನನ್ನ ಕಾರ್ಯಕರ್ತರು ತಿಳಿಸಿದರು. ಇದರಿಂದ ಮನಸ್ಸಿಗೆ ಬೇಜಾರಾಗಿ ಜಗದೀಶ್ ಶೆಟ್ಟರ್ ಜೊತೆ ಮಾತುಕತೆ ನಡೆಸಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಬಂದಿದ್ದೇನೆ. ಅವರು ಅಕ್ಟೋಬರ್ 10ಕ್ಕೆ ಬಹಳಷ್ಟು ಮಾಜಿ ಶಾಸಕರು ಬರುತ್ತಿದ್ದಾರೆ. ಅಂದು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗು ಎಂದು ತಿಳಿಸಿದ್ದಾರೆ ಎಂದು ರಾಮಣ್ಣ ಲಮಾಣಿ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಸತೀಶ ಜಾರಕಿಹೊಳಿ ಸೇರಿ ಮೂವರು ಸಚಿವರಿಗೆ ಜೀವ ಬೆದರಿಕೆ ಪತ್ರ: ಒಟ್ಟು 61 ಜನರಿಗೆ ಬೆದರಿಕೆ

Last Updated : Sep 30, 2023, 1:18 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.