ETV Bharat / state

ಬದುಕಿರುವವರಿಗೆ ಡೆತ್​ ಸರ್ಟಿಫಿಕೆಟ್​: ಇನ್ನೂ ಸಿಗುತ್ತಿಲ್ಲ ಇವರಿಗೆ ಮೂಲ ಸೌಲಭ್ಯ

ನಿಂಗಪ್ಪ ಚಿಲಝರಿ, ನಿಂಗವ್ವ ಚಿಲಝರಿ, ಮಲ್ಲಪ್ಪ ಚಿಲಝರಿ ಈ ಮೂವರು ಹಿರಿಯ ಜೀವಿಗಳು ಜೀವಂತವಿರುವಾಗಲೇ ಮರಣ ಹೊಂದಿರೋದಾಗಿ ದಾಖಲೆಗಳಲ್ಲಿ ಅಧಿಕಾರಿಗಳು ಉಲ್ಲೇಖಿಸಿ ಬಿಟ್ಟಿದ್ದಾರೆ. ಇದರ ಪರಿಣಾಮ ಸರ್ಕಾರದ ಯೋಜನೆಗಳು ಬಂದ್ ಇವರಿಗೆ ಬಂದ್​​ ಆಗಿ ಹೋಗಿವೆ.

ದಾಖಲೆಯಲ್ಲಿ ಬದುಕಿದವರನ್ನು ಸಾಯಿಸಿದ್ರು ಅಧಿಕಾರಿಗಳು
author img

By

Published : May 15, 2019, 9:25 PM IST

ಗದಗ: ಮೂವರು ವೃದ್ಧರು ಜೀವಂತವಿರುವಾಗಲೇ ಮರಣ ಹೊಂದಿರೋದಾಗಿ ಮರಣ ಪತ್ರವನ್ನು ನೀಡಿದಂತಹ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರ ಗ್ರಾಮದಲ್ಲಿ ನಡೆದಿದೆ.

ನಿಂಗಪ್ಪ ಚಿಲಝರಿ, ನಿಂಗವ್ವ ಚಿಲಝರಿ, ಮಲ್ಲಪ್ಪ ಚಿಲಝರಿ ಇವರಿಗೆ ಸರ್ಕಾರದ ಮಾಶಾಸನ ಸೇರಿದಂತೆ ಇತರ ಯೋಜನೆಗಳಿಂದ ಸಿಗುವ ಸೌಲಭ್ಯಗಳೇ ಆಸರೆ. ವೃದ್ಧಾಪ್ಯ ವೇತನದಿಂದಲೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಆದ್ರೆ ಈ ಬಡಪಾಯಿಗಳ ಮೇಲೆ ಅಧಿಕಾರಿಗಳಿಗೆ ಯಾಕಿಷ್ಟು ಕೋಪವೋ ಗೊತ್ತಿಲ್ಲ. ಇವರು ಜೀವಂತವಿರುವಾಗಲೇ ಮರಣ ಹೊಂದಿರೋದಾಗಿ ದಾಖಲೆಗಳಲ್ಲಿ ಉಲ್ಲೇಖಿಸಿ ಬಿಟ್ಟಿದ್ದಾರೆ. ಇದರ ಪರಿಣಾಮ ಸರ್ಕಾರದ ಯೋಜನೆಗಳು ಬಂದ್ ಆಗಿ ಹೋಗಿವೆ.

ದಾಖಲೆಯಲ್ಲಿ ಬದುಕಿದವರನ್ನು ಸಾಯಿಸಿದ್ರು ಅಧಿಕಾರಿಗಳು

ಕಳೆದ ನಾಲ್ಕೈದು ತಿಂಗಳಿಂದ ವೃದ್ಧಾಪ್ಯ ವೇತನ ಕೂಡ ನಿಲ್ಲಿಸಲಾಗಿದೆ. ಇದೆಲ್ಲವನ್ನ ಅರಿಯದ ಈ ಹಿರಿಯ ಜೀವಗಳು ನಿತ್ಯ ವೃದ್ಧಾಪ್ಯವೇತನಕ್ಕಾಗಿ ದಾರಿ ನೋಡ್ತಾ ದಿನಗಳೆದಿದ್ದಾರೆ. ಕೊನೆಗೆ ಯಾರೋ ಇವರ ದಾಖಲೆಗಳನ್ನು ಪರಿಶೀಲಿಸಿ, ನೋಡಿದಾಗ ನೀವು ಈಗಾಗಲೇ ಸರ್ಕಾರಿ ದಾಖಲೆಗಳಲ್ಲಿ ಮರಣ ಹೊಂದಿದ್ದೀರಿ, ಹೀಗಾಗಿ ನಿಮ್ಮ ವೃದ್ಧಾಪ್ಯವೇತನ ನಿಲ್ಲಿಸಲಾಗಿದೆ ಎಂದು ಹೇಳಿದ್ದಾರೆ.

ಸ್ವಾಮಿ ನಾವು ಇನ್ನು ಬದುಕಿದ್ದೇವೆ. ನಾವು ಬದುಕಿದ್ದಾಗಲೇ ನಮ್ಮನ್ನ ಹೀಗ್ಯಾಕೆ ಸಾಯಿಸ್ತಿದ್ದೀರಾ ಅಧಿಕಾರಿಗಳನ್ನ ಕೇಳಿದ್ರೆ. ಇಂದು ನಾಳೆ ಅಂತಾ ಸಮಯ ಕಾಲಹರಣ ಮಾಡುತ್ತಿದ್ದಾರೆ. ಇದರಿಂದ ಕಂಗಾಲಾಗಿರುವ ಈ ಹಿರಿಯ ಜೀವಿಗಳು ತುತ್ತು ಅನ್ನಕ್ಕೂ ಅಂಗಲಾಚುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಈ ಅನ್ಯಾಯದ ಕುರಿತು ಗಜೇಂದ್ರಗಡ ತಹಶೀಲ್ದಾರ್ ಸಾಹೇಬ್ರನ್ನು ಕೇಳಿದ್ರೆ, ಇದನ್ನು ಯಾರು ಮಾಡಿದ್ದಾರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಮತ್ತು ವೃದ್ಧರಿಗೆ ಬರಬೇಕಾದ ವೃದ್ಧಾಪ್ಯವೇತನ ಒಂದು ವಾರದಲ್ಲಿ ಸರಿ ಮಾಡೋದಾಗಿ ಹೇಳಿದ್ದಾರೆ.

sample description

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.