ETV Bharat / state

ಗದಗದಲ್ಲಿ ರಸ್ತೆ ಪಕ್ಕದ ಗುಂಡಿಗೆ ಉರುಳಿದ ಸರ್ಕಾರಿ ಬಸ್; ಪ್ರಯಾಣಿಕರು ಪಾರು - ಸರ್ಕಾರಿ ಬಸ್​​

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸರ್ಕಾರಿ ಬಸ್‌ ರಸ್ತೆ ಪಕ್ಕದ ಗುಂಡಿಗೆ ಉರುಳಿದ್ದು, ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

nwkrtc-bus-rolled-into-trench
ರಸ್ತೆ ಪಕ್ಕದ ಗುಂಡಿಗೆ ಉರುಳಿದ ಸರ್ಕಾರಿ ಬಸ್
author img

By

Published : Aug 17, 2021, 8:09 AM IST

ಗದಗ: ವಾಯುವ್ಯ ಕರ್ನಾಟಕ ಸಾರಿಗೆ ಬಸ್​​​​ವೊಂದು ಚಾಲಕನ ನಿಯಂತ್ರಣ ತಪ್ಪಿದ ರಸ್ತೆ ಪಕ್ಕದ ಗುಂಡಿಗೆ ಉರುಳಿ ಬಿದ್ದಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಕದಾಂಪುರ ಬಳಿ ನಡೆಯಿತು.

ಇಲ್ಲಿನ ಮುಂಡರಗಿ ಡಿಪೋಗೆ ಸೇರಿದ್ದ ಬಸ್​, ಗದಗ್​​​​ನಿಂದ ಮುಂಡರಗಿ ಮಾರ್ಗವಾಗಿ ಸಂಚರಿಸುತ್ತಿತ್ತು. ಈ ವೇಳೆ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ.

ರಸ್ತೆ ಪಕ್ಕದ ಗುಂಡಿಗೆ ಉರುಳಿದ ಸರ್ಕಾರಿ ಬಸ್

ಬಸ್‌ ಮುಂದೆ ಚಲಿಸುತ್ತಿದ್ದ ಬೈಕ್​​​ ಅನ್ನು ಓವರ್‌ಟೇಕ್ ಮಾಡುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್‌ ರಸ್ತೆ ಪಕ್ಕದ ಗುಂಡಿಗೆ ಉರುಳಿದೆ. ಬಸ್​​ನಿಂದ ಪ್ರಯಾಣಿಕರು ಸುರಕ್ಷಿತವಾಗಿ ಹೊರಬಂದಿದ್ದಾರೆ. ಸಹ ಪ್ರಯಾಣಿಕರೇ ಸೇರಿ ಎಲ್ಲರನ್ನೂ ಬಸ್​​​ನಿಂದ ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನೊಂದೆಡೆ, ಧಾರವಾಡದ ವನಹಳ್ಳಿ ಬಳಿ ವಾಯುವ್ಯ ಸಾರಿಗೆ ಬಸ್​​ ರಸ್ತೆಯಿಂದ ಕೆಳಗಿಳಿದು ಪಕ್ಕದ ಚರಂಡಿಗೆ ಉರುಳಿತು. ಬಸ್​​ನ ಚಾಸಿ ಕಟ್​​ ಆಗಿದ್ದು ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಚಾಲಕ ಸೇರಿ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದೆ.

ರಸ್ತೆ ಪಕ್ಕದ ಗುಂಡಿಗೆ ಉರುಳಿದ ಸರ್ಕಾರಿ ಬಸ್

ಈ ಸಂದರ್ಭದಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಬಸ್​​​ನಲ್ಲಿ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ದೊರೆತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.