ಗದಗ: ಲಾಕ್ಡೌನ್ ಸಡಲಿಕೆ ಮಾಡಿದರೂ ಕೆಲ ಕಡ್ಡಾಯ ನಿಯಮಗಳನ್ನು ಪಾಲಿಸಲೇಬೇಕೆಂದು ಸರ್ಕಾರ ಆದೇಶ ನೀಡಿದ್ದರೂ ಇಲ್ಲಿನ ಜನ ಮಾತ್ರ ತಲೆ ಕಡಿಸಿಕೊಳ್ಳುತ್ತಿಲ್ಲ.
ಗದಗದಲ್ಲಿ ಈಗಾಗಲೇ 20 ಕೊರೊನಾ ಪಾಸಿಟಿವ್ ಪ್ರಕರಣಗಳಿವೆ. ಆದರೆ ಇಲ್ಲಿನ ಜನ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ನಗರದ APMC ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಅನ್ನೋದೆ ಮಾಯಾವಾಗಿದೆ. ಅಂತರ ಕಾಯ್ದುಕೊಳ್ಳದೇ ದಲ್ಲಾಳಿಗಳು ಮತ್ತು ಖರೀದಿದಾರರು ವ್ಯಾಪಾರ ಮಾಡುತ್ತಿದ್ದಾರೆ.
ವೃದ್ಧರು, ಮಕ್ಕಳ ಸಮೇತ ಮಾರುಕಟ್ಟೆಯಲ್ಲಿ ಹಣ್ಣು ಖರೀದಿಗೆ ನಿಂತಿದ್ದಾರೆ. ಅದರಲ್ಲೂ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿರ್ಲಕ್ಷ್ಯ ತೋರುತ್ತಿದ್ದಾರೆ.