ETV Bharat / state

ರಾತ್ರಿಯ ಪಾರ್ಟಿ.. ತೆಂಗಿನ ಗಿಡ.. ಕೊಡಲಿಯೇಟು.: ಅನೋನ್ಯವಾಗಿದ್ದ ವ್ಯಕ್ತಿಯನ್ನೇ ಕೊಲೆ ಮಾಡಿದ ಹಂತಕ - ಪಾರ್ಟಿ ಮಾಡುತ್ತಿದ್ದ ವೇಳೆ ಕೊಲೆ

ವಿವಾಹೇತರ ಸಂಬಂಧವೇ ಕೊಲೆಗೆ ಕಾರಣವಿರಬಹುದು ಎಂದು ಪೊಲೀಸರು ಊಹಿಸಿದರೆ, ಹಣಕಾಸಿನ ವಿಚಾರಕ್ಕೆ ಕೊಲೆಯಾಗಿರಬಹುದು ಎಂದು ಸಿದ್ದಲಿಂಗಪ್ಪನ ಸಂಬಂಧಿಯೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ.

murder-in-gadag-one-arrest-in-gadag
ರಾತ್ರಿಯ ಪಾರ್ಟಿ.. ತೆಂಗಿನ ಗಿಡ.. ಕೊಡಲಿಯೇಟು.: ಅನೋನ್ಯವಾಗಿದ್ದ ವ್ಯಕ್ತಿಯನ್ನೇ ಕೊಲೆ ಮಾಡಿದ ಹಂತಕ
author img

By

Published : Oct 24, 2021, 2:51 AM IST

Updated : Oct 24, 2021, 7:07 AM IST

ಗದಗ : ರಾತ್ರಿ ಪಾರ್ಟಿ ಮಾಡುತ್ತಿದ್ದ ವೇಳೆ ಇಬ್ಬರು ಯುವಕರು ಓರ್ವನನ್ನು ಕೊಲೆ ಮಾಡಿ, ಹಳ್ಳವೊಂದರಲ್ಲಿ ಮೃತದೇಹವನ್ನು ಮುಚ್ಚಿಟ್ಟಿದ್ದ ಘಟನೆ ಗದಗ್​ ಜಿಲ್ಲೆಯ ರೋಣ ತಾಲೂಕಿನ ಕೊತಬಾಳ ಗ್ರಾಮದಲ್ಲಿ ನಡೆದಿದೆ.

ಸಿದ್ದಲಿಂಗಪ್ಪ (52) ಕೊಲೆಯಾದ ವ್ಯಕ್ತಿಯಾಗಿದ್ದು, ಅದೇ ಗ್ರಾಮದ ಮಹಾಂತೇಶ, ಮತ್ತು ಶಿವಕುಮಾರ ಎಂಬ ಯುವಕರು ಆತನನ್ನು ಕೊಲೆ ಮಾಡಿದ್ದಾರೆ. ಕೊತಬಾಳ ಗ್ರಾಮದ ಹೊರ ವಲಯದಲ್ಲಿರುವ ಆರೋಪಿಯ ಜಮೀನಿನಲ್ಲಿ ಮೂವರೂ ಚಿಕನ್ ತಯಾರಿಸಿ, ಮದ್ಯ ಸೇವನೆ ಮಾಡಿದ್ದರು. ಸಿದ್ದಲಿಂಗಪ್ಪ ಕೂಡಾ ಈ ಪಾರ್ಟಿಯಲ್ಲಿ ಭಾಗವಹಿಸಿದ್ದನು.

ತೆಂಗಿನ ಗಿಡ ನೆಡುವಂತೆ ಹೇಳಿದ್ದರು..

ಚಿಕನ್ ತಿಂದು ಮದ್ಯಸೇವನೆ ಮಾಡಿದ ಬಳಿಕ ಮಹಾತೇಂಶ ಸಿದ್ದಲಿಂಗಪ್ಪನಿಗೆ ತಮ್ಮ ಜಮೀನನಲ್ಲಿ ತೆಂಗಿನಗಿಡ ನೆಡುವಂತೆ ಕೇಳಿದ್ದಾನೆ. ಸಿದ್ದಲಿಂಗಪ್ಪ ತೆಂಗಿನ ಗಿಡ ನೆಡುತ್ತಿದ್ದಾಗ ಹಿಂಬದಿಯಿಂದ ಬಂದ ಮಹಾಂತೇಶ ಕೊಡಲಿಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ.

ಅನೋನ್ಯವಾಗಿದ್ದ ವ್ಯಕ್ತಿಯನ್ನೇ ಕೊಲೆ ಮಾಡಿದ ಹಂತಕ

ನಂತರ ಕೊಲೆ ಮಾಡಿದ ವಿಚಾರ ಯಾರಿಗೂ ಗೊತ್ತಾಗಬಾರದೆಂದು ಭಾವಿಸಿ, ಅಲ್ಲಿಯೇ ಇದ್ದ ಹಳ್ಳವೊಂದರಲ್ಲಿ ಮಣ್ಣನ್ನು ತೆಗೆದು ಮುಚ್ಚಿದ್ದಾರೆ. ನಂತರ ಮುಂಜಾನೆ ತಮಗೇನೂ ಗೊತ್ತಿಲ್ಲ ಎಂಬಂತೆ ನಡವಳಿಕೆ ಪ್ರದರ್ಶಿಸಿದ್ದಾರೆ.

ಕುರಿಕಾಯುತ್ತಿದ್ದ ಮಂದಿ ಊರಿನಲ್ಲಿ ವಿಚಾರ ತಿಳಿಸಿದ್ದು, ಗ್ರಾಮಸ್ಥರು ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ಕೊಲೆ ಯಾವ ಕಾರಣಕ್ಕಾಗಿ ನಡೆದಿದೆ ಎಂಬ ವಿಚಾರವಾಗಿ ಪೊಲೀಸರು ತನಿಖೆ ನಡೆಸಿದ್ದಾರೆ.

ಕಾರಣ ನಿಗೂಢ

ಕೊಲೆಯಾದ ಸಿದ್ದಲಿಂಗಪ್ಪ ಮತ್ತು ಆರೋಪಿ ಮಹಾಂತೇಶ ಜೊತೆಯಾಗಿಯೇ ಕೆಲಸ ಮಾಡುತ್ತಿದ್ದರು. ತುಂಬಾ ಅನೋನ್ಯವಾಗಿದ್ದು, ಯಾವ ಕಾರಣಕ್ಕಾಗಿ ಸಿದ್ದಲಿಂಗಪ್ಪನ ಕೊಲೆ ಮಾಡಲಾಗಿದೆ ಎಂದು ಗೊತ್ತಾಗುತ್ತಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ.

ವಿವಾಹೇತರ ಸಂಬಂಧವೇ ಕೊಲೆಗೆ ಕಾರಣವಿರಬಹುದು ಎಂದು ಪೊಲೀಸರು ಊಹಿಸಿದರೆ, ಹಣಕಾಸಿನ ವಿಚಾರಕ್ಕೆ ಕೊಲೆಯಾಗಿರಬಹುದು ಎಂದು ಸಿದ್ದಲಿಂಗಪ್ಪನ ಸಂಬಂಧಿಯೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನ ಕೊಲೆ ಮಾಡಲು ಎರಡ್ಮೂರು ಬಾರಿ ಮಹಾಂತೇಶ ಪ್ರಯತ್ನ ಪಟ್ಟಿದ್ದನು ಎನ್ನಲಾಗಿದೆ. ಮತ್ತೊಂದೆಡೆ ತಂದೆಯನ್ನು ಕಳೆದುಕೊಂಡ ಇಬ್ಬರು ಮಕ್ಕಳು ಹಾಗೂ ಪತಿಯನ್ನು ಕಳೆದುಕೊಂಡ ಮಹಿಳೆ ಕಂಗಾಲಾಗಿದ್ದಾರೆ.

Last Updated : Oct 24, 2021, 7:07 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.