ಗದಗ : ವಿಷಪೂರಿತ ಸೌವತೆಕಾಯಿ ಬಳ್ಳಿ (ಇಸಬಳ್ಳಿ) ಆಹಾರ ಸೇವಿಸಿ 30 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ, ಜಿಲ್ಲೆಯ ರೋಣ ತಾಲೂಕಿನ ನರೆಗಲ್ಲ ಪಟ್ಟಣದಲ್ಲಿ ನಡೆದಿದೆ.
ಸಾವನ್ನಪ್ಪಿರುವ ಕುರಿಗಳು ಬಸಪ್ಪ ವೀರಪ್ಪ ಗಡ್ಡದ, ಯಲ್ಲಪ್ಪ ಹನುಮಪ್ಪ ಎಮ್ಮಿ ಹಾಗೂ ಕಳಕಪ್ಪ ರಾಮಜಪ್ಪ ರಾಠೂಡ ಎಂಬವರಿಗೆ ಸೇರಿವೆ. ಕಳೆದ ರಾತ್ರಿ ಘಟನೆ ನಡೆದಿದೆ.
ಬಂಡಿಹಾಳ ರಸ್ತೆ ಅಕ್ಕಪಕ್ಕದ ಜಮೀನಿನಲ್ಲಿ ಕುರಿಗಳನ್ನು ಮೇಯಿಸಿಕೊಂಡು ಬರುವಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.