ಗದಗ: ತಾಲೂಕಿನ ಸೊರಟೂರ ಗ್ರಾಮದ ಜುಮ್ಮಾ ಮಸೀದಿಯಲ್ಲಿ ಆಚರಿಸಲಾದ ಖತಲ್ ರಾತ್ನಲ್ಲಿ ಮಂಗಗಳು ಭಾಗಿಯಾಗಿ ಅಚ್ಚರಿ ಮೂಡಿಸಿವೆ.

ಮೊಹರಂ ಹಬ್ಬದ ಹಿನ್ನೆಲೆ, ಖತಲ್ ರಾತ್ (ಕತ್ತಲ ರಾತ್ರಿ) ದಿನದಂದು ಹಿಂದೂ-ಮುಸ್ಲಿಂ ಬಾಂಧವರು ಮಸೀದಿಯಲ್ಲಿ ಪೂಜೆ ಸಲ್ಲಿಸುವುದು ವಾಡಿಕೆ. ಹೀಗಾಗಿ ಸೊರಟೂರ ಗ್ರಾಮದ ಜುಮ್ಮಾ ಮಸೀದಿಯಲ್ಲಿ ಲೋಬಾನ ಅರ್ಪಣೆಗೆ ಗ್ರಾಮಸ್ಥರು ಸೇರಿದ್ದರು. ಈ ವೇಳೆ ಜನಸಂದಣಿ ನಡುವೆ ತೂರಿಬಂದ ನಾಲ್ಕೈದು ಮಂಗಗಳು ಎಲ್ಲರಂತೆ ತಾವೂ ಲೋಬಾನ ಹಾಕಿರುವುದು ಕಂಡುಬಂತು.

ಕೆಲವರು ಮಂಗಗಳನ್ನು ಓಡಿಸಲು ಪ್ರಯತ್ನಿಸಿದರೂ ಸಹ ಅಲ್ಲಿಂದ ಕದಲಲ್ಲಿಲ್ಲ. ಲೋಬಾನ ಹೊಗೆ ಹಾಕಿ, ದುವಾ ಪಠಿಸಿದ ನಂತರ ಮಸೀದಿಯಿಂದ ಕಾಲ್ಕಿತ್ತಿವೆ.