ETV Bharat / state

ಸಚಿವ ಸಿ.ಸಿ. ಪಾಟೀಲ್ ಆರೋಗ್ಯದಲ್ಲಿ ದಿಢೀರ್​ ಏರುಪೇರು

author img

By

Published : Jan 26, 2020, 9:18 PM IST

ಗದಗ ಜಿಲ್ಲಾ ಉಸ್ತುವಾರಿ ಹಾಗೂ ಗಣಿ ಮತ್ತು ಭೂವಿಜ್ಞಾನ, ಪರಿಸರ ಇಲಾಖೆ ಸಚಿವ ಸಿ‌.ಸಿ. ಪಾಟೀಲ್ ಆ್ಯಸಿಡಿಟಿ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಡಿಸ್ಚಾರ್ಜ್​ ಆಗಿರುವ ಸಚಿವರು ವೈದ್ಯರ ಸಲಹೆ ಮೇರೆಗೆ ಗ್ರಾಮ ನರಗುಂದಕ್ಕೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಸಿ.ಸಿ ಪಾಟೀಲ್
CC Patil

ಗದಗ: ಸಚಿವ ಸಿ.ಸಿ. ಪಾಟೀಲ್ ಆರೋಗ್ಯದಲ್ಲಿ ದಿಢೀರ್​ ಏರುಪೇರು ಉಂಟಾಗಿ ಆಸ್ಪತ್ರೆಗೆ ದಾಖಲಾಗಿ ಡಿಸ್ಚಾರ್ಜ್​ ಆಗಿರುವ ವಿಚಾರ ಬೆಳೆಕಿಗೆ ಬಂದಿದೆ.

ಗದಗ ಜಿಲ್ಲಾ ಉಸ್ತುವಾರಿ ಹಾಗೂ ಗಣಿ ಮತ್ತು ಭೂವಿಜ್ಞಾನ, ಪರಿಸರ ಇಲಾಖೆ ಸಚಿವ ಸಿ‌.ಸಿ ಪಾಟೀಲ್ ಆ್ಯಸಿಡಿಟಿ ಹಾಗೂ ಹೈಬಿಪಿ ಸಮಸ್ಯೆಯಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿರಾಯು ಖಾಸಗಿ ಆಸ್ಪತ್ರೆ ವೈದ್ಯರಾದ ಡಾಕ್ಟರ್ ಶ್ವೇತಾ ಸಂಕನೂರ, ಗದಗ ಜಿಮ್ಸ್ ಆಸ್ಪತ್ರೆಯ ಫಿಜಿಸಿಯನ್ ಸಂಗಮೇಶ ಅಸೂಟಿ, ಸರ್ಜನ್ ಡಾ. ಬಸನಗೌಡ ಕರಿಗೌಡ್ರ ಅವರು ಸಚಿವರಿಗೆ ಚಿರಾಯು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದಾರೆ.

ಸಚಿವರ ಆರೋಗ್ಯದಲ್ಲಿ ಯಾವುದೇ ಅಪಾಯವಿಲ್ಲ. ಸದ್ಯ ಗುಣಮುಖರಾಗಿದ್ದಾರೆ ಎಂದು ವೈದ್ಯಕೀಯ ಮೂಲಗಳು ದೃಢಪಡಿಸಿವೆ. ಇನ್ನು ಚಿಕಿತ್ಸೆ ಪಡೆದು ವೈದ್ಯರ ಸಲಹೆ ಮೇರೆಗೆ ಸಚಿವ ಸಿ.ಸಿ. ಪಾಟೀಲ್ ಸ್ವಗ್ರಾಮ ನರಗುಂದಕ್ಕೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ.

Intro:ಸಚಿವ ಸಿ.ಸಿ ಪಾಟೀಲ್ ಆರೋಗ್ಯದಲ್ಲಿ ಏರುಪೇರು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು

ಆ್ಯಂಕರ್ :- ಸಚಿವ ಸಿ.ಸಿ ಪಾಟೀಲ್ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಆಸ್ಪತ್ರೆಗೆ ದಾಖಲಾಗಿ ಡಿಸ್ಚಾರ್ಜ ಆದ ಘಟನೆ ಗದಗನಲ್ಲಿ ನಡೆದಿದೆ. ಗದಗ ಜಿಲ್ಲಾ ಉಸ್ತುವಾರಿ ಹಾಗೂ ಗಣಿ ಮತ್ತು ಭೂವಿಜ್ಞಾನ, ಪರಿಸರ, ಜೀವಶಾಸ್ತ್ರ ಇಲಾಖೆ ಸಚಿವ ಸಿ‌.ಸಿ ಪಾಟೀಲ್ ಆಸಿಡೆಟಿ ಹಾಗೂ ಹೈಬಿಪಿ ಸಮಸ್ಯೆಯಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿರಾಯು ಖಾಸಗಿ ಆಸ್ಪತ್ರೆ ವೈದ್ಯರಾದ ಡಾಕ್ಟರ್ ಸ್ವೇತಾ ಸಂಕನೂರ, ಗದಗ ಜಿಮ್ಸ್ ಆಸ್ಪತ್ರೆಯ ಫಿಜಿಸಿಯನ್ ಡಾಕ್ಟರ್ ಸಂಗಮೇಶ ಅಸೂಟಿ, ಸರ್ಜನ್ ಡಾ, ಬಸನಗೌಡ ಕರಿಗೌಡ್ರ ಸೇರಿ ಚಿರಾಯು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದಾರೆ. ಸಚಿವ ಸಿ.ಸಿ ಪಾಟೀಲ್ ೧೮೦/೧೦೦ ವರೆಗೆ ಹೈಬಿಪಿ ಏರಿಕೆಯಾಗಿತ್ತು. ಆಸಿಡೆಟಿಗೆ ಪ್ಯಾನಡಿ ಮಾತ್ರೆ, ಬಿಪಿಗೆ ಎನ್ವಾಸ್ ಮಾತ್ರೆ, ಅಮ್ಲೋಡಿಪಿನ್ ೫ ಎಮ್.ಜಿ ಎಂಬ ಮಾತ್ರೆಯನ್ನ ವೈದ್ಯರು ನೀಡಿದ್ದಾರೆ. ಯಾವುದೆ ಅಪಾಯವಿಲ್ಲಾ, ಸಧ್ಯ ಗುಣಮುಖರಾಗಿದ್ದಾರೆ ಎಂದು ವೈದ್ಯಕೀಯ ಮೂಲಗಳಿಂದ ದೃಡಪಟ್ಟಿದೆ. ಚಿಕಿತ್ಸೆ ಪಡೆದು ವೈದ್ಯರುಗಳ ಸಲಹೆ ಮೇರೆಗೆ ಸ್ವಗ್ರಾಮ ನರಗುಂದಕ್ಕೆ ತೆರಳಿ ವಿಶ್ರಾಂತಿ ಪಡೆಯಲಿದ್ದಾರೆ....Body:GConclusion:G
ETV Bharat Logo

Copyright © 2024 Ushodaya Enterprises Pvt. Ltd., All Rights Reserved.