ETV Bharat / state

ಸಿದ್ದರಾಮಯ್ಯ ಮನೆಯಿಂದ ಸಂದೇಶ ಬಂದಿದೆ ಎಂದು ಜಿಲ್ಲೆಯ ಜನರ ದಾರಿ ತಪ್ಪಿಸಬೇಡಿ: ಸಿ.ಸಿ.ಪಾಟೀಲ್

ಹುಲಕೋಟಿ ಆಸ್ಪತ್ರೆಯಿಂದ ಜಿಮ್ಸ್ ಆಸ್ಪತ್ರೆಗೆ ಎಷ್ಟು ರೋಗಿಗಳು ಬಂದಿದ್ದಾರೆ ಎಂದು ಎಚ್.ಕೆ.ಪಾಟೀಲ್ ಹೇಳಬೇಕು. ಸಿದ್ದರಾಮಯ್ಯ ಮನೆಯಿಂದ ಸಂದೇಶ ಬಂದಿದೆ ಅಂತ ಹೇಳಿ ಗದಗ ಜಿಲ್ಲೆಯ ಜನರ ದಾರಿ ತಪ್ಪಿಸಬೇಡಿ ಎಂದು ಸಿ.ಸಿ.ಪಾಟೀಲ್ ಅವರು ಎಚ್‌.ಕೆ ಪಾಟೀಲ್​ ವಿರುದ್ಧ ಕಿಡಿಕಾರಿದರು.

Minister C C Patil News conference in Gadag
ಸಚಿವ ಸಿ ಸಿ ಪಾಟೀಲ್ ಸುದ್ದಿಗೋಷ್ಠಿ
author img

By

Published : May 18, 2021, 7:33 AM IST

ಗದಗ : ಪಿಎಂ ಕೇರ್‌ ನಿಧಿಯಿಂದ ಬಂದ ವೆಂಟಿಲೇಟರ್ ಕಳಪೆಯಾಗಿವೆ ಎಂದು ಹೇಳಿಕೆ ನೀಡಿದ್ದ ಶಾಸಕ ಹೆಚ್.ಕೆ.ಪಾಟೀಲ ಅವರಿಗೆ, ಸಚಿವ ಸಿ.ಸಿ ಪಾಟೀಲ್ ತಿರುಗೇಟು ನೀಡಿದ್ದಾರೆ.

ಸಚಿವ ಸಿ.ಸಿ ಪಾಟೀಲ್ ಸುದ್ದಿಗೋಷ್ಠಿ

ಜಿಲ್ಲಾಡಳಿತ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಎಚ್.ಕೆ ಪಾಟೀಲ್ ಸುದ್ದಿಗೋಷ್ಠಿ ನೋಡಿ ನಿಜವಾಗಲೂ ಶಾಕ್ ಆಯ್ತು. ಈಗಾಗಲೇ ಜಿಲ್ಲೆಗೆ 50 ವೆಂಟಿಲೇಟರ್ ಬಂದಿದ್ದು ಅವರು 25 ವೆಂಟಿಲೇಟರ್ ಬಂದಿದೆ ಅಂತ ಹೇಳಿದ್ದಾರೆ ಎಂದರು.

ದಿನನಿತ್ಯ 10 ರಿಂದ 18 ಜನ ಕೋವಿಡ್‌ನಿಂದ ಸಾಯುತ್ತಿದ್ದಾರೆ. ಆದರೆ ಗದಗನಲ್ಲಿ ಈ ವಿಷಯವನ್ನು ಮುಚ್ಚಿಡಲು ಪ್ರಯತ್ನಿಸಲಾಗಿದೆ ಅಂತ ಆರೋಪಿಸಿದ್ದ ಹೆಚ್.ಕೆ. ಪಾಟೀಲ್‌ಗೆ, ಸಾವು ಸಂಭವಿಸುತ್ತಿರೋದು ನಿಜ. ಚಿಕಿತ್ಸೆ ನೀಡಿದ ಎಲ್ಲ ರೋಗಿಗಳು ಗುಣಮುಖ ಆಗುತ್ತಾರೆ ಎಂದಲ್ಲ. ಹುಲಕೋಟಿ ಆಸ್ಪತ್ರೆಯಿಂದ ಜಿಮ್ಸ್ ಆಸ್ಪತ್ರೆಗೆ ಎಷ್ಟು ರೋಗಿಗಳು ಬಂದಿದ್ದಾರೆ ಎಂದು ಎಚ್.ಕೆ ಪಾಟೀಲ್ ಹೇಳಬೇಕು. ಸಿದ್ದರಾಮಯ್ಯ ಮನೆಯಿಂದ ಸಂದೇಶ ಬಂದಿದೆ ಅಂತ ಹೇಳಿ ಗದಗ ಜಿಲ್ಲೆಯ ಜನರ ದಾರಿ ತಪ್ಪಿಸಬೇಡಿ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.