ETV Bharat / state

ಕಂಟೇನ್ಮೆಂಟ್ ಏರಿಯಾದಲ್ಲಿ ಹಾಲು, ತರಕಾರಿ ಮಾರಾಟಕ್ಕೆ ವ್ಯವಸ್ಥೆ.. ಈಟಿವಿ ಭಾರತ ಇಂಪ್ಯಾಕ್ಟ್

ಈಟಿವಿ ಭಾರತ ವರದಿಯಿಂದ ಎಚ್ಚೆತ್ತ ಗದಗ ಜಿಲ್ಲಾಡಳಿತ ಕಂಟೇನ್ಮೆಂಟ್ ಪ್ರದೇಶದಲ್ಲಿ ಹಾಲು ಹಾಗೂ ತರಕಾರಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಿದೆ.

milk,vegetable  available in gadag
ಹಾಲು, ತರಕಾರಿ ಮಾರಾಟಕ್ಕೆ ವ್ಯವಸ್ಥೆ
author img

By

Published : May 6, 2020, 12:02 PM IST

ಗದಗ:ಕಂಟೇನ್​​ಮೆಂಟ್ ಪ್ರದೇಶದವಾದ ಕೃಷ್ಣಾಪುರದಲ್ಲಿ ಜಿಲ್ಲಾಡಳಿತ ಹಾಲು ಹಾಗೂ ತರಕಾರಿ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದೆ.

ಹಾಲು, ತರಕಾರಿ ಮಾರಾಟಕ್ಕೆ ವ್ಯವಸ್ಥೆ

ಜಿಲ್ಲೆಯ ಕೃಷ್ಣಾಪುರದಲ್ಲಿ 25 ವರ್ಷದ ಗರ್ಭಿಣಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ, ಕೃಷ್ಣಾಪುರ ಗ್ರಾಮವನ್ನು ಕಂಟೇನ್​​ಮೆಂಟ್ ಪ್ರದೇಶ ಎಂದು ಘೋಷಿಸಲಾಗಿತ್ತು. ಈ ಹಿನ್ನೆಲೆ ಗದಗ ಜಿಲ್ಲೆಯ ರೋಣ ತಾಲೂಕಿನ ಕೃಷ್ಣಾಪುರದ ಗ್ರಾಮದಲ್ಲಿ ನಾಲ್ಕು ದಿನಗಳಲ್ಲಿ ಅಂಗಡಿಗಳು ಮುಚ್ಚಿದ್ದವು.

ಕೃಷ್ಣಾಪುರ ಗ್ರಾಮ ಸೀಲ್​ ಡೌನ್:​ ಹಾಲಿಗಾಗಿ ಮಕ್ಕಳ ಗೋಳಾಟ

ಈ ಹಿನ್ನೆಲೆ ಅಗತ್ಯ ವಸ್ತುಗಳಿಗಾಗಿ ಜನರು ಪರದಾಟ ನಡೆಸಿದ್ದರು. ಹಾಲಿಲ್ಲದೇ ಮಕ್ಕಳು ಗೋಳಾಡುತ್ತಿವೆ ಅಂತ ತಾಯಂದಿರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕುರಿತು ‌ಈಟಿವಿ ಭಾರತ ''ಕೃಷ್ಣಾಪುರ ಗ್ರಾಮ ಸೀಲ್​ ಡೌನ್:​ ಹಾಲಿಗಾಗಿ ಮಕ್ಕಳ ಗೋಳಾಟ'' ಎಂಬ ಶೀರ್ಷಿಕೆಯಡಿ ನಿನ್ನೆ ವರದಿ ಪ್ರಸಾರ ಮಾಡಿತ್ತು.‌ಈಗ ವರದಿಯಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತದಿಂದ ದಿನಸಿ ವ್ಯವಸ್ಥೆ ಮಾಡಲಾಗಿದೆ.

ಇಂದು ಬೆಳ್ಳಂಬೆಳಗ್ಗೆಯೇ ತರಕಾರಿ, ಹಾಲು ಮಾರಾಟಕ್ಕೆ ವ್ಯವಸ್ಥೆ ಮಾಡಿದ ಹಿನ್ನೆಲೆ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ತರಕಾರಿ, ಹಾಲು ಖರೀದಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.