ಗದಗ: ನರಗುಂದ ತಾಲೂಕಿನ ಬೆನಕೊಪ್ಪದ ಕೋವಿಡ್ ಕೇಂದ್ರ ಅವ್ಯವಸ್ಥೆಯ ಆಗರವಾಗಿದ್ದು, ರೋಸಿ ಹೋಗಿರುವ ಸೋಂಕಿತರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.
ಕೋವಿಡ್ ಕೇಂದ್ರದಲ್ಲಿ ನೂರಾರು ಕೊರೊನಾ ಸೋಂಕಿತರಿದ್ದಾರೆ. ಇಲ್ಲಿ ಸರಿಯಾದ ಊಟೋಪಚಾರ, ಬೆಡ್, ನೀರು, ಶೌಚಾಲದಯ ವ್ಯವಸ್ಥೆಗಳಿಲ್ಲ. ಇರುವ ಶೌಚಾಲಯಗಳು ಸ್ಚಚ್ಚಗೊಳಿಸದೆ ಗಬ್ಬೆದ್ದು ನಾರುತ್ತಿದೆ. ಇನ್ನು ಶೌಚಾಲಯ, ಸ್ನಾನ ಗೃಹಗಳಿಗೆ ಬಾಗಿಲುಗಳು ಇಲ್ಲದೆ ಮಹಿಳೆಯರ ಪಾಡು ಹೇಳ ತೀರದ್ದಾಗಿದೆ.
ಈ ಕುರಿತು ತಹಶೀಲ್ದಾರ್ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿ ಇದ್ದರೆ ನಾವು ಗುಣಮುಖರಾಗುವುದಾದರೂ ಹೇಗೆ ಎಂದು ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದ್ದು. ಅವ್ಯವಸ್ಥೆಯ ಕುರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲಲ್ಲಿ ಹರಿಬಿಟ್ಟಿದ್ದಾರೆ.