ಗದಗ: ಖಾಸಗಿ ಆಸ್ಪತ್ರೆಯ ಯಡವಟ್ಟು ಹಾಗೂ ಗ್ರಾಮಸ್ಥರ ಅಮಾನವೀಯತೆಯಿಂದ ಕುಟುಂಬವೊಂದು ಗ್ರಾಮದ ಹೊರಗೆ ಸಂಬಂಧಿಯ ಶವ ಇಟ್ಟುಕೊಂಡು ಕಣ್ಣೀರು ಹಾಕುತ್ತಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಬಾಸಲಾಪುರ ಗ್ರಾಮದಲ್ಲಿ ನಡೆದಿದೆ.
ಬಾಸಲಾಪುರ ಗ್ರಾಮದ ವ್ಯಕ್ತಿಯೊಬ್ಬರು ಬಾದಾಮಿ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಆಸ್ಪತ್ರೆಯವರು ಕೋವಿಡ್ ನಿಯಮಾವಳಿ ಪಾಲಿಸದೇ ಕುಟುಂಬಕ್ಕೆ ಶವ ಹಸ್ತಾಂತರಿಸಿದ್ದಾರೆ. ಶವ ಗ್ರಾಮಕ್ಕೆ ಬರುತ್ತಿದ್ದಂತೆ ಗ್ರಾಮಸ್ಥರು ವ್ಯಕ್ತಿ ಕೋವಿಡ್ನಿಂದಲೇ ಮೃತಪಟ್ಟಿದ್ದಾನೆ. ಹೀಗಾಗಿ, ಗ್ರಾಮದ ಒಳಗೆ ಶವ ತರುವುದು ಬೇಡವೆಂದು ಹೊರಗಡೆಯೇ ನಿಲ್ಲಿಸಿದ್ದಾರೆ.
ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಸಲು ಸಹ ಬಿಡುತ್ತಿಲ್ಲ. ಇದರಿಂದಾಗಿ ಮೃತ ವ್ಯಕ್ತಿಯ ಕುಟುಂಬಸ್ಥರು ಊರ ಹೊರಗಡೆ ಆ್ಯಂಬುಲೆನ್ಸ್ನಲ್ಲಿಯೇ ಶವ ಇಟ್ಟುಕೊಂಡು ಕಣ್ಣೀರು ಹಾಕುತ್ತಿದ್ದಾರೆ.
ಓದಿ: ತುಂಬು ಗರ್ಭಿಣಿಯ ಪ್ರಾಣ ತೆಗೆಯಿತು ಕೊರೊನಾ: ಹೊಟ್ಟೆಯಲ್ಲಿದ್ದ ಮಗುವಿನ ಜೀವ ಉಳಿಸಿದ್ರು ವೈದ್ಯರು