ಗದಗ: ನಗರದ ಶ್ರೀ ತ್ರಿಕೂಟೇಶ್ವರ ದೇವಾಲಯದಲ್ಲಿ ಮಹಾ ಶಿವರಾತ್ರಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು, ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ.
ಈ ತ್ರಿಕೂಟೇಶ್ವರ ಐತಿಹಾಸಿಕ ದೇವಾಲಯವಾಗಿದ್ದು, ಬ್ರಹ್ಮ, ವಿಷ್ಣು, ಮಹೇಶ್ವರ ಎಂಬ ಮೂರು ಲಿಂಗಗಳು ಒಂದೇ ಗರ್ಭಗುಡಿಯಲ್ಲಿರುವುದು ಇಲ್ಲಿಯ ವಿಶೇಷ. ಹಾಗಾಗಿ ಗದಗ ಜಿಲ್ಲೆಯ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಶಿವರಾತ್ರಿ ಪೂಜೆಗೆ ಆಗಮಿಸುತ್ತಾರೆ.
ತ್ರಿಕೂಟೇಶ್ವರ ಶಿವಲಿಂಗಕ್ಕೆ ಶಿವರಾತ್ರಿ ದಿನದಂದು ವಿಶೇಷವಾಗಿ ರುದ್ರಾಭಿಷೇಕ ಹಾಗೂ ಯಾಮ ಪೂಜೆ ಮಾಡಲಾಗುತ್ತದೆ. ಜೊತೆಗೆ ಭಜನೆ, ಪಂಚಾಮೃತ ಅಭಿಷೇಕ, ಹಾಲಿನ ಅಭಿಷೇಕ, ರುದ್ರಾಭಿಷೇಕ, ಭಿಲ್ವಾರ್ಚನೆ ಹೀಗೆ ವಿವಿಧ ಬಗೆಯ ಪೂಜೆಗಳು ನೆರವೇರಿದವು.