ಗದಗ: ಕೊರೊನಾ ವೈರಸ್ನಿಂದ ಲಾಕ್ಡೌನ್ ಆದ ಹಿನ್ನೆಲೆ ಬಾಣಂತಿಗೆ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಹೋಗಲು ವಾಹನ ಸಿಗದೆ ಪರದಾಡಿದ ಘಟನೆ ಗದಗನಲ್ಲಿ ನಡೆದಿದೆ.
ಗದಗ ನಗರದ ಕಂಟೋನ್ಮೆಂಟ್ ಏರಿಯಾದ ಬಾಣಂತಿ ಪ್ರತಿಭಾ ಪೂಜಾರ ವಾಹನಕ್ಕಾಗಿ ಪರದಾಡಿದ್ದಾರೆ. ಪ್ರತಿಭಾಗೆ 8 ದಿನಗಳ ಹಿಂದೆ ಹೆರಿಯಾಗಿತ್ತು. ಇಂದು ಸ್ಟಿಚ್ ತೆಗೆಯುವುದಾಗಿ ವೈದ್ಯರು ದೃಢಪಡಿಸಿದ್ದರು. ಕಂಟೋನ್ಮೆಂಟ್ ಏರಿಯಾಗೆ 108 ವಾಹನ ಸಹ ಬಾರದ ಹಿನ್ನೆಲೆ, ಆಸ್ಪತ್ರೆಗೆ ಹೋಗಲು ವಾಹನ ಸಿಗದೆ 500 ಮೀಟರ್ ನಡೆದು ನಂತರ ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಹೋಗಿದ್ದಾಳೆ.
ಸರ್ಕಾರ ತುರ್ತು ಚಿಕಿತ್ಸೆಗೆ ಎಲ್ಲಾ ರೀತಿಯ ವೈದ್ಯಕೀಯ ವ್ಯವಸ್ಥೆ ಕೊರತೆಯಾಗಂತೆ ನೋಡಿಕೊಂಡಿದೆಯಾದರೂ ಬಾಣಂತಿಗೆ ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ವಾಹನ ಸಿಗದೆ ಪರದಾಡಿದ್ದು ವಿಪರ್ಯಾಸವಾಗಿದೆ.