ETV Bharat / state

ಗದಗ-ಬೆಟಗೇರಿ ನಗರಸಭೆಯ ವ್ಯಾಪ್ತಿಯ ಹಲವೆಡೆ ಪೂರೈಕೆಯಾಗದ ನೀರು: ಸ್ಥಳೀಯರಿಂದ ಪ್ರತಿಭಟನೆ - etv bharat kannada

ಗದಗ-ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಹಲವು ಕಡೆ ಸರಿಯಾದ ಸಮಯಕ್ಕೆ ನೀರು ಪೂರೈಕೆಯಾಗುತ್ತಿಲ್ಲ ಎಂದು ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.

Etv BharatLocals protested  for  water  in  Gadag and Betageri Municipality
ಗದಗ-ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಹಲವು ಕಡೆ ಪೂರೈಕೆಯಾಗದ ನೀರು: ಸ್ಥಳೀಯರಿಂದ ಪ್ರತಿಭಟನೆ
author img

By

Published : Jun 14, 2023, 10:50 PM IST

ಗದಗ: ಗದಗ- ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಹಲವು ಕಡೆ ಸರಿಯಾದ ಸಮಯಕ್ಕೆ ಕುಡಿಯುವ ನೀರು ಬಾರದೇ ಜನರು ಹೈರಾಣಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ. ಪಾಟೀಲ್ ಅವರ ತವರು ಕ್ಷೇತ್ರವಾಗಿರುವ ಗದಗ-ಬೆಟಗೇರಿ ನಗರಕ್ಕೆ 24x7 ಕಾಲವಧಿಯಲ್ಲಿ ಕುಡಿಯುವ ನೀರಿನ ಯೋಜನೆ ಜಾರಿಯಾಗಿ ದಶಕಗಳೇ ಕಳೆದರೂ ಇಂದಿಗೂ ನಗರದ ಹಲವಾರು ವಾರ್ಡ್​ಗಳಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ನೀರಿನ ಸಮಸ್ಯೆಯಿಂದ ಬೇಸತ್ತ ನೇಕಾರ ಕಾಲೋನಿ ನಿವಾಸಿಗಳು ನೀರಿಗಾಗಿ ನಗರಸಭೆ ಮುಂದೆ ಇಂದು ಪ್ರತಿಭಟನೆ ನಡೆಸಿದರು. ಕಳೆದ ಎರಡು ವರ್ಷಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರ ಇದೆ. ತಿಂಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಅದು ಕೆಲವೆಡೆ ಮಾತ್ರ, ಕುಡಿಯುವ ನೀರಿಗೆ ಜಗಳ - ಹೊಡೆದಾಟಗಳು ನಡೆದಿದೆ. ನಲ್ಲಿ ಇದ್ದರೂ ನೀರು ಸರಬರಾಜು ಆಗುತ್ತಿಲ್ಲ. ನಾವೆಲ್ಲ ಕೂಲಿ ಕೆಲಸ ಮಾಡಿ ಜೀವನ ನಡೆಸುವವರು, ನಮ್ಮ ಸಮಸ್ಯೆಗೆ ನಗರಸಭೆ ಯಾವ ಸದಸ್ಯರು ಅಧಿಕಾರಿಗಳು ಸ್ಪಂದಿಸಿಲ್ಲ. ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ನಮ್ಮ ಸಮಸ್ಯೆಯನ್ನು ಬಗೆಹರಿಸಿ ಎಂದು ವಾರ್ಡಿನ ಸ್ಥಳೀಯರು ಆಗ್ರಹಿಸಿದರು.

ಇನ್ನೊಂದೆಡೆ, ಇದೇ ಗದಗ - ಬೆಟಗೇರಿ ಕುಡಿಯುವ ನೀರು ಎಲ್ಲೆಂದರಲ್ಲಿ ಪೋಲಾಗುತ್ತಿರುವುದು ಇಲ್ಲಿನ ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದೆ. ಗದಗ ನಗರದ ಟಿಪ್ಪು ಸುಲ್ತಾನ್ ಸರ್ಕಲ್ ಬಳಿ ಇರುವ ಸಮೃದ್ಧಿ ಹೋಟೆಲ್ ಬಳಿ ದೊಡ್ಡಮಟ್ಟದಲ್ಲಿ ನೀರು ಪೋಲಾಗ್ತಿದೆ. ಪೈಪ್ ಲೈನ್ ಒಡೆದು ಸಾವಿರಾರು ಲೀಟರ್ ನಷ್ಟು ನೀರು‌ ಹರಿದು ಚರಂಡಿ ಸೇರುತ್ತಿದೆ. ಇದಷ್ಟೇ ಅಲ್ಲ ನಗರದ ಬಹುತೇಕ ಕಡೆಗಳಲ್ಲಿ ಪೈಪ್​ಗಳು ಒಡೆದು ದಿನನಿತ್ಯ ಸಾವಿರಾರು ಲೀಟರ್ ನೀರು ಹರಿದು ಹೋಗಿ ವ್ಯರ್ಥವಾಗುತ್ತಿದೆ. ಹೀಗಾಗಿ ಒಡೆದ ಪೈಪ್ ಲೈನ್​ಗಳನ್ನ ಬೇಗ ದುರಸ್ತಿ ಮಾಡಿ ಎಂದು ಅಧಿಕಾರಿಗಳಿಗೆ ಸ್ಥಳೀಯರು ಒತ್ತಾಯಿಸಿದರು.

ಇದನ್ನೂ ಓದಿ: ಕಲುಷಿತ ನೀರು ಪೂರೈಕೆ ಪ್ರಕರಣ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಿಫಾರಸು: ಸಚಿವ ಶಿವರಾಜ ತಂಗಡಗಿ

ಕುಡಿಯುವ ನೀರಿನ ಸಮಸ್ಯೆ ಕುರಿತು ಎಚ್ಚರಿಕೆಯಿಂದ ಕೆಲಸ ಮಾಡಬೇಕು - ಸಿಎಂ: ಇತ್ತೀಚಿಗೆ ರಾಜ್ಯದ 8 ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಜಲಜೀವನ್‌ ಮಿಷನ್ ಯೋಜನೆಯ ಪ್ರಗತಿಯ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಕುಡಿಯುವ ನೀರಿನ ಸಮಸ್ಯೆ ಕುರಿತು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ನೀರಿನ ಸಮಸ್ಯೆ ಉದ್ಭವಿಸಿದ 24 ಗಂಟೆಯೊಳಗೆ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳೂ ಸಹ ಈ ಕುರಿತು ಮುನ್ನೆಚ್ಚರಿಕೆ ವಹಿಸಲು ಸಿಎಂ ಸೂಚಿದ್ದರು.

ಯಾವುದೇ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವ ಆಗಿದ್ದರೆ, ಕೂಡಲೇ ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಆಡಳಿತಾತ್ಮಕ ವಿಚಾರಗಳಿಗೆ ವಿಳಂಬ ಧೋರಣೆ ಸರಿಯಲ್ಲ. ಜಲಜೀವನ್‌ ಮಿಷನ್‌ ಮೂಲಕ ನೀರು ಒದಗಿಸಿದ ಗ್ರಾಮಗಳಲ್ಲಿ ಇಒ, ಎಂಜಿನಿಯರುಗಳು ತಪಾಸಣೆ ನಡೆಸಿ, ಪೈಪ್‌ ಲೈನ್​ಗಳನ್ನು ಪರಿಶೀಲಿಸಿ, ಸಮಸ್ಯೆಗಳಿದ್ದಲ್ಲಿ ಸರಿ ಪಡಿಸಬೇಕು. ಕಲುಷಿತ ನೀರು ಸೇವನೆ ಪ್ರಕರಣಗಳು ಮರುಕಳಿಸಬಾರದು ಎಂದು ಎಚ್ಚರಿಕೆ ನೀಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.