ETV Bharat / state

ಐತಿಹಾಸಿಕ ಲಕ್ಕುಂಡಿ ಉತ್ಸವಕ್ಕೆ ಭರದ ಸಿದ್ಧತೆ: ಕಲಾ ಸೊಬಗು ಸವಿಯಲು ಈ ಬಾರಿ ಸುವರ್ಣಾವಕಾಶ - details of Lakkundi utsava

ಲಕ್ಕುಂಡಿ ಉತ್ಸವ ಫೆ.10,11,12 ರಂದು ನಡೆಯಲ್ಲಿದ್ದು, ಮೂರು ದಿನದದ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡೆ, ನಾಟಕ ಸೇರಿದಂತೆ ಹಲವಾರು ಕಾರ್ಯಕ್ರಮಗಳು ನಡೆಯಲಿವೆ ಎಂದು ಗದಗ್​ ಜಿಲ್ಲಾಡಳಿತ ತಿಳಿಸಿದೆ.

ಲಕ್ಕುಂಡಿ ಉತ್ಸವ 2023
ಲಕ್ಕುಂಡಿ ಉತ್ಸವ 2023
author img

By

Published : Feb 6, 2023, 10:03 PM IST

ಗದಗ: ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಐತಿಹಾಸಿಕ ಲಕ್ಕುಂಡಿ ಉತ್ಸವವು ಫೆಬ್ರವರಿ 10,11,12 ರಂದು ನಡೆಯಲಿದೆ. ಉತ್ಸವದ ಮೊದಲನೇ ದಿನವಾದ ಫೆಬ್ರುವರಿ 10 ರಂದು ಬೆಳಗ್ಗೆ 10 ಗಂಟೆಗೆ ಲಕ್ಕುಂಡಿಯ ಸರ್ಕಾರಿ ಮಾದರಿ ಪ್ರೌಢಶಾಲೆ ಆವರಣದಲ್ಲಿ ಜಾನಪದ ಕಲಾವಾಹಿನಿ ಮೆರವಣಿಗೆಯ ಉದ್ಘಾಟನೆ ಜರುಗಲಿದೆ ಎಂದು ಜಿಲ್ಲಾಡಳಿತ ಪ್ರಕಟನೆಯಲ್ಲಿ ತಿಳಿಸಿದೆ. ಮೆರವಣಿಗೆಯು ವಿವಿಧ ಜನಪದ ಕಲಾ ತಂಡಗಳೊಂದಿಗೆ ಸರ್ಕಾರಿ ಪ್ರೌಢ ಶಾಲೆ ಆವರಣದಿಂದ ಪ್ರಾರಂಭಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ದಾನಚಿಂತಾಮಣಿ ಅತ್ತಿಮಬ್ಬೆ ವೇದಿಕೆಗೆ ಆಗಮಿಸಲಿದೆ.

ಲೋಕೋಪಯೋಗಿ ಇಲಾಖೆ ಸಚಿವ ಸಿಸಿ ಪಾಟೀಲ್​​ ಜಾನಪದ ಕಲಾವಾಹಿನಿಯ ಮೆರವಣಿಗೆಯನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಎಂಸಿಎ ನಿಗಮದ ಅಧ್ಯಕ್ಷ ಎಂ.ಎಸ್.ಕರಿಗೌಡ್ರ, ಲಕ್ಕುಂಡಿ ಗ್ರಾಮ ಪಂಚಾಯತ್​ ಅಧ್ಯಕ್ಷೆ ಲಲಿತಾ ಅಶೋಕ ಗದಗಿನ, ಉಪಾಧ್ಯಕ್ಷ ರೇವಣಸಿದ್ದಪ್ಪ ಶೇಖಪ್ಪ ಮುಳಗುಂದ ಹಾಗೂ ಲಕ್ಕುಂಡಿ ಗ್ರಾಮ ಪಂಚಾಯತ್​ ಸರ್ವ ಸದಸ್ಯರು, ಸ್ತ್ರೀಶಕ್ತಿ ಸಂಘ, ಯುವಕ ಮಂಡಳಿಗಳು ಗ್ರಾಮದ ಗುರು-ಹಿರಿಯರು ಹಾಗೂ ಸಾರ್ವಜನಿಕರು ಇದರಲ್ಲಿ ಭಾಗವಹಿಸಲಿದ್ದಾರೆ.

ಮೆರವಣಿಗೆಯಲ್ಲಿ 25ಕ್ಕೂ ಅಧಿಕ ಕಲಾ ತಂಡಗಳ ಭಾಗಿಯಾಗಲಿವೆ: ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಯ ಕಲಾ ತಂಡಗಳು ಭಾಗವಹಿಸಲಿದ್ದು ಇದರಲ್ಲಿ, ಪೂಜಾ ಕುಣಿತ, ಪಟ ಕುಣಿತ, ಮಹಿಳಾ ವೀರಗಾಸೆ, ಮಹಿಳಾ ಚಂಡೆ ವಾದ್ಯ, ಚಿಲಿಪಿಲಿ ಗೊಂಬೆ, ನಂದಿಧ್ವಜ, ಜಗ್ಗಲಿಗೆ, ಕರಡಿ ಮಜಲು, ಜಾಂಜ್‍ಮೇಳ, ಡೊಳ್ಳು ಕುಣಿತ, ನಂದಿಕೋಲು, ಕೀಲು ಕುದುರೆ, ಕೋಲಾಟ ಜರುಗಲಿವೆ.

ಮಧ್ಯಾಹ್ನ 3 ಗಂಟೆಗೆ ವೇದಿಕೆ ಮೇಲೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು: ಮಂಗಲವಾದ್ಯ, ಸುಗಮ ಸಂಗೀತ, ತತ್ವಪದ, ನೃತ್ಯ, ದೊಡ್ಡಾಟ ಪದ, ಕೋಲಾಟ, ಹಿಂದೂಸ್ತಾನಿ ಸಂಗೀತ, ವಿದ್ಯಾರ್ಥಿಗಳ ಸಮೂಹ ನೃತ್ಯ, ಸುಗಮ ಸಂಗೀತ, ಡೊಳ್ಳಿನಪದ, ಶಾಸ್ತ್ರೀಯ ಸಂಗೀತ, ಜನಪದ ನೃತ್ಯ, ಜನಪದ ಸಂಗೀತ, ನಾಡಗೀತೆ, ಮಲ್ಲಗಂಭ ಪ್ರದರ್ಶನ, ದೀಪ ನೃತ್ಯ, ಯಕ್ಷಗಾನ ನಂತರ ಲೇಜರ್ ಶೋ ಜರುಗಲಿದೆ.

ಬಿ.ಎಚ್.ಪಾಟೀಲ್​​ ಪ್ರೌಢಶಾಲೆ ಅವರಣದಲ್ಲಿ ರಾತ್ರಿ 9 ಗಂಟೆಗೆ ಧಾರವಾಡದ ರಂಗಾಯಣದವರಿಂದ 'ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ' ನಾಟಕ ಪ್ರದರ್ಶನ ಜರುಗಲಿದೆ. ಉತ್ಸವದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಜಿಲ್ಲಾ ಮಟ್ಟದ ಕ್ರೀಡೆಗಳನ್ನು ಆಯೋಜಿಸಲಾಗಿದ್ದು, ಫೆ. 11 ರಂದು ಬೆಳಗ್ಗೆ 10 ಗಂಟೆಗೆ ಇದೇ ಪ್ರೌಢಶಾಲೆಯ ಮೈದಾನದಲ್ಲಿ ಕ್ರೀಡಾ ಸ್ಪರ್ಧೆಗಳ ಉದ್ಘಾಟನೆ ಕಾರ್ಯಕ್ರಮ ಕೂಡ ಜರುಗಲಿದೆ.

ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ, ಕುಸ್ತಿ, ಪಾರಂಪರಿಕ ನಡಿಗೆ, ಮಲ್ಲಗಂಬ ಪ್ರದರ್ಶನ, ಯೋಗ, ರಂಗೋಲಿ, ಚಿತ್ರಕಲಾ ಸ್ಪರ್ಧೆ, ಬೋಟಿಂಗ್, ಕೂಕ್​ ವಿತೌಟ್​ ಫೈರ್​ ಜರುಗಲಿವೆ ಎಂದು ಜಿಲ್ಲಾಡಳಿತವು ಪ್ರಕಟನೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ದೂರವಾಣಿ ಸಂಖ್ಯೆ 08372-238345 ಸಂಪರ್ಕಿಸಬಹುದಾಗಿದೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.

ಇದನ್ನೂ ಓದಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಳೆ 108 ನಮ್ಮ ಕ್ಲಿನಿಕ್​ಗಳಿಗೆ ಸಿಎಂ ಬೊಮ್ಮಾಯಿ ಚಾಲನೆ: 15 -20 ಸಾವಿರ ಜನಸಂಖ್ಯೆಗೆ ಒಂದು ಕ್ಲಿನಿಕ್..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.