ಗದಗ: ಕೋವಿಡ್-19 ಲಸಿಕೆ ಡೋಸ್ಗಳು ಸೂಕ್ತ ಭದ್ರತೆದೊಂದಿಗೆ ಹಾಗೂ ಪ್ರಬಾರಿ ಜಿಲ್ಲಾಧಿಕಾರಿ ಡಾ.ಆನಂದ್ ಕೆ ಸಮ್ಮುಖದಲ್ಲಿ ಜಿಲ್ಲಾ ಕೇಂದ್ರಕ್ಕೆ ಆಗಮಿಸಿತು.
ಜಿಲ್ಲೆಗೆ 5500 ರಷ್ಟು ಲಸಿಕೆ ಡೋಸ್ಗಳು ಬಂದಿದ್ದು, ಸರ್ಕಾರದ ಮಾರ್ಗಸೂಚಿಯಂತೆ ಜನವರಿ 16 ರಿಂದ ಮೊದಲ ಹಂತದ ಕೋವಿಡ್ ಲಸಿಕೆ ವಿತರಣೆಗೆ ಚಾಲನೆ ದೊರೆಯಲಿದೆ.
ಲಸಿಕೆ ಡೋಸ್ ಬಂದ ಸಂದರ್ಭದಲ್ಲಿ ವಾಹನಕ್ಕೆ ಕಾಯಿ,ಕರ್ಪೂರ ಬೆಳಗಿ ಪೂಜೆ ಮಾಡಿ ಜಿಲ್ಲಾಡಳಿತ ಭವನದ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಸುರಕ್ಷಿತವಾಗಿ ಶೇಖರಣೆ ಮಾಡಲಾಗಿದೆ. ಈ ವೇಳೆ ಜಿಲ್ಲಾ ಪಂಚಾಯಿತಿ ಸಿಇಓ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಸೇರಿ ಕೆಲ ಅಧಿಕಾರಿಗಳು ಹಾಜರಿದ್ದರು.