ETV Bharat / state

ಕಷಾಯ ಕುಡಿಯೋಣ ಬಾರಾ..ಗದಗದ ಗ್ರಾ.ಪಂಯಿಂದ ಉಚಿತ ಕಷಾಯ ವಿತರಣೆ

ಕೊರೊನಾ ಸೋಂಕು ನಿರ್ಮೂಲನೆಗೆ ಉಚಿತ ಕಷಾಯ ನೀಡುವ ಮೂಲಕ ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿಯ ಗ್ರಾಮ ಪಂಚಾಯತಿ ವಿನೂತನ ಪ್ರಯತ್ನ ಮಾಡುತ್ತಿದೆ.

gadag
ಗ್ರಾ.ಪಂಯಿಂದ ಉಚಿತ ಕಷಾಯ ವಿತರಣೆ..
author img

By

Published : Jun 16, 2021, 9:31 AM IST

ಗದಗ: ಕೊರೊನಾ ನಿರ್ಮೂಲನೆಗೆ ಗ್ರಾಮ ಪಂಚಾಯತಿಯೊಂದು ವಿಭಿನ್ನ ಹಾಗೂ ವಿನೂತನ ಪ್ರಯತ್ನ ನಡೆಸಿದೆ. ಈಗಾಗಲೇ ರಾಜ್ಯದಲ್ಲಿ ಹಲವು ಗ್ರಾಮ‌ ಪಂಚಾಯತಿಗಳು ಕೊರೊನಾ ನಿರ್ಮೂಲನೆಗೆ ವಿನೂತನ ಕಾರ್ಯಗಳನ್ನ ಮಾಡಿ ಮಾದರಿ ಎ‌ನಿಸಿಕೊಂಡಿವೆ.

ಗ್ರಾ.ಪಂಯಿಂದ ಉಚಿತ ಕಷಾಯ ವಿತರಣೆ..

ಅದೇ ರೀತಿ ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮ ಪಂಚಾಯತಿ ಸಹ ಕೊರೊನಾ ತಡೆಗೆ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಗ್ರಾಮದ ಪ್ರತಿ ಚಹಾದ‌ ಅಂಗಡಿಗೆ ಬರುವ ಗ್ರಾಹಕರಿಗೆ ಉಚಿತ ಕಷಾಯ ನೀಡಲು ಮುಂದಾಗಿದ್ದಾರೆ. ಈ ಪ್ರಯತ್ನವೇನು ಹೇಳಿಕೊಳ್ಳುವಷ್ಟು ಹೊಸದಾಗಿ‌ ಅಲ್ಲದೇ ಇದ್ದರೂ ಗ್ರಾಮ‌ ಪಂಚಾಯತಿ ಆಸಕ್ತಿ ಹಾಗೂ ಜನರ ಸಹಕಾರ ಇಲ್ಲಿ ಪ್ರಮುಖವಾಗಿದೆ. ಈ ಬಗ್ಗೆ ಚಹಾ ಅಂಗಡಿ ಮಾಲೀಕರ ಸಭೆ ಕರೆದು ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ.

ಕೊರೊನಾ ತಡೆಗಟ್ಟುವಿಕೆಗೆ ಕಷಾಯ ಸೇವನೆ ಒಳ್ಳೆಯದು ಎಂಬ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಕೋವಿಡ್ ಕಾರ್ಯಪಡೆ ಕೊರೊನಾ ತಡೆಯಲು ಈ ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದೆ. ಪ್ರತಿ ಚಹಾ ಅಂಗಡಿಯಲ್ಲಿ ಉಚಿತವಾಗಿ ಕಷಾಯ ವಿತರಣೆಯನ್ನು ಪಂಚಾಯತಿ ಸಿಬ್ಬಂದಿ ಅಂಗಡಿಗಳಿಗೆ ತೆರಳಿ ಪರಿಶೀಲಿಸಲಿದ್ದಾರೆ.

ಗ್ರಾಮದಲ್ಲಿ ವೃದ್ಧರು, ಯುವಕರು ಸೇರಿದಂತೆ ಚಹಾದ ಅಂಗಡಿಗೆ ಬರುವ ಪ್ರತಿ ಗ್ರಾಹಕರು ಕಷಾಯ ಕುಡಿಯುತ್ತಿದ್ದಾರೆ. ಗ್ರಾಮ ಪಂಚಾಯತಿ ಈ ನಿರ್ಧಾರಕ್ಕೆ ಗ್ರಾಮಸ್ಥರು ಹಾಗೂ ಅಂಗಡಿ ಮಾಲೀಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ತಾಲೂಕಿನ ಅಸುಂಡಿ ಗ್ರಾಮ ಪಂಚಾಯಿತಿ ವತಿಯಿಂದ ಸುಮಾರು 10 ಸಾವಿರ ಮಾಸ್ಕ್ ಮತ್ತು ಕಷಾಯ ಹಂಚಿಕೆ ಮಾಡಲಾಗಿದೆ. ಗದಗ ನಗರಕ್ಕೆ ಹೊಂದಿಕೊಂಡಿರುವ ಈ ಪಂಚಾಯತಿ ವ್ಯಾಪ್ತಿಯಲ್ಲಿ ಆರಂಭದಲ್ಲಿ ಕೊರೊನಾ ಅಟ್ಟಹಾಸ ಮೆರೆದಿತ್ತು. ಅಸುಂಡಿ ಮತ್ತು ಮಲ್ಲ ಸಮುದ್ರ ಗ್ರಾಮಗಳಲ್ಲಿ ಸುಮಾರು 70 ಕೋವಿಡ್​​ ಕೇಸ್​​ಗಳು ಪತ್ತೆಯಾಗಿದ್ದವು. ಆದರೆ ಆರಂಭದಿಂದಲೇ ಹಳ್ಳಿಗಳಲ್ಲಿ ಸಮರೋಪಾದಿಯಲ್ಲಿ ಜಾಗೃತಿ ಮೂಡಿಸಿದ್ದರಿಂದ ಸದ್ಯ ಎರಡು ಗ್ರಾಮಗಳು ಕೊರೊನಾ ಮುಕ್ತವಾಗಿದೆ.

ಪ್ರತಿ ದಿನ ಗ್ರಾಮದಲ್ಲಿ ಸ್ಯಾನಿಟೈಸರ್ ಸಿಂಪಡಣೆ, ಜನ ಗುಂಪು ಸೇರುವುದನ್ನು ತಡೆಗಟ್ಟಲು ಪ್ರಯತ್ನಿಸಲಾಗುತ್ತಿದೆ. ಅಲ್ಲದೇ ಲಾಕ್ ಡೌನ್ ಸಡಿಲಿಕೆ ಇದ್ದರೂ ಸಹ ಜಾಗೃತಿ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.