ಗದಗ: ನಗರದ ಜಿಲ್ಲಾಡಳಿತ ಭವನದ ನೌಕರರು ಕಂದಾಯ ದಿನಾಚರಣೆ ಕಾರ್ಯಕ್ರಮವನ್ನು ಹಳ್ಳಿ ಹಬ್ಬವಾಗಿ ಆಚರಣೆ ಮಾಡಿದರು.
ಹಳ್ಳಿ ಸೊಗಡಿನ ಹಾಡು ಹಾಡಿದರು. ಎಲ್ಲ ಮಹಿಳಾ ಅಧಿಕಾರಿಗಳು, ನೌಕರರು ಇಳಕಲ್ ಸೀರೆ, ಮೊಳಕಾಲ್ಮೂರು ಸೀರೆ ಉಟ್ಟಿದ್ದರು. ನಿತ್ಯ ಸೂಟು, ಬೂಟು, ಪ್ಯಾಂಟ್, ಶರ್ಟ್ ಹಾಕಿಕೊಂಡು ಕಚೇರಿಗೆ ಬರುವ ಅಧಿಕಾರಿಗಳು, ನೌಕರರು ಇವತ್ತು ಫುಲ್ ಡಿಫರೆಂಟ್ ಗೆಟಪ್ ನಲ್ಲಿ ಆಗಮಿಸಿ ಗಮನ ಸೆಳೆದ್ರು.
ಸಾಂಪ್ರದಾಯಿಕ ಉಡುಗೆ ತೊಟ್ಟು ಕಚೇರಿಗೆ ಬರುವ ಮೂಲಕ ಕಂದಾಯ ದಿನಾಚಣೆಯನ್ನು ವಿಶಿಷ್ಠ ಹಾಗೂ ವಿಭಿನ್ನವಾಗಿ ಆಚರಿಸಿದ್ರು. ಮಹಿಳಾ, ಪುರುಷ ಅಧಿಕಾರಿಗಳು, ನೌಕರರು ಭಾವ ಗೀತೆ, ಭಕ್ತಿ, ಜಾನಪದ, ಚಲನಚಿತ್ರ ಗೀತೆ ಹಾಡಿ ಎಂಜಾಯ್ ಮಾಡಿದ್ರು. ಹಾಡಿಗೆ ನೆರೆದ ನೂರಾರು ನೌಕರರು ಚಪ್ಪಾಳೆ ತಟ್ಟಿ ಎಂಜಾಯ್ ಮಾಡಿದ್ರು.
ಇನ್ನು ಜಿಲ್ಲೆಯ ವಿವಿಧ ತಾಲೂಕಿನಿಂದ ಆಗಮಿಸಿದ ನೂರಾರು ನೌಕರರಿಗೆ ಪಾಯಸ, ಅನ್ನ, ಸಾರು, ಮೊಸರನ್ನ ಊಟದ ವ್ಯವಸ್ಥೆ ಮಾಡಲಾಗಿತ್ತು.