ETV Bharat / state

ಭಾರತಕ್ಕೆ ಮುಸ್ಲಿಂ ಪ್ರಧಾನಿ ಆಗ್ಬೇಕು ಅನ್ನೋದು ಹುಚ್ಚು ಕಲ್ಪನೆ: ಬಿ ಸಿ ಪಾಟೀಲ್ - ಸಿದ್ದರಾಮಯ್ಯ ವಿರುದ್ಧದ ಕಿಕ್ ಬ್ಯಾಕ್ ಆರೋಪ

ಭಾರತಕ್ಕೆ ಮುಸ್ಲಿಂ ಪ್ರಧಾನಿ ಆಗ್ಬೇಕು ಎನ್ನುವ ವಿಷಯದ ಕುರಿತು ನಡೆಯುತ್ತಿರುವ ಚರ್ಚೆಗೆ ಸಂಬಂಧಿಸಿದಂತೆ ಕೃಷಿ ಸಚಿವ ಬಿ ಸಿ ಪಾಟೀಲ್ ಪ್ರತಿಕ್ರಿಯೆ ನೀಡಿದರು.

bc patil
ಬಿ ಸಿ ಪಾಟೀಲ್
author img

By

Published : Oct 31, 2022, 4:01 PM IST

Updated : Oct 31, 2022, 4:24 PM IST

ಗದಗ: ಭಾರತಕ್ಕೆ ಮುಸ್ಲಿಂ ಪ್ರಧಾನಿ ಆಗ್ಬೇಕು ಅನ್ನೋದು ಹುಚ್ಚು ಕಲ್ಪನೆ. ಇದು ಕಲ್ಪನೆಯೇ ಹೊರತು, ಸಾಕಾರ ಆಗೋದಕ್ಕೆ ಸಾಧ್ಯವಿಲ್ಲ. ಇದು ಭಾರತ ದೇಶ. ಇಲ್ಲಿ ಮುಸ್ಲಿಂ ವ್ಯಕ್ತಿ ಪ್ರಧಾನಿ ಆಗೋದಕ್ಕೆ ಸಾಧ್ಯವೂ ಇಲ್ಲ ಎಂದು ಕೃಷಿ ಇಲಾಖೆ ಸಚಿವ ಬಿ ಸಿ ಪಾಟೀಲ್ ಅಭಿಪ್ರಾಯಪಟ್ಟರು.

ನಗರದಲ್ಲಿಂದು ಮಾಧ್ಯಮದವರು ಈ ವಿಷಯ ಕುರಿತು ಕೇಳಿದ ಪ್ರಶ್ನೆಗೆ ಸಚಿವ ಬಿ ಸಿ ಪಾಟೀಲ್ ಪ್ರತಿಕ್ರಿಯಿಸಿದರು. ಇದೇ ವೇಳೆ ಸಿದ್ದರಾಮಯ್ಯ ವಿರುದ್ಧದ ಕಿಕ್ ಬ್ಯಾಕ್ ಆರೋಪದ ಕುರಿತು ಮಾತನಾಡಿದ ಅವರು, ಹಿಂದೆ ಅವರ ಮೇಲಿನ ಆರೋಪಗಳಿಂದ ರಕ್ಷಣೆ ಪಡೆಯಲು ಸಿದ್ದರಾಮಯ್ಯ ಮುಂದಾಗಿದ್ದರು. ಲೋಕಾಯುಕ್ತ ಮುಚ್ಚಿ ಎಸಿಬಿ ರಚನೆ ಮಾಡಿದ್ದೇ, ಅದಕ್ಕೆ ಸಾಕ್ಷಿಯಾಗಿದೆ‌. ಸ್ಟೀಲ್ ಬ್ರಿಡ್ಜ್​​ ಯಾಕೆ ವಾಪಸ್ ಹೋಯ್ತು. ಆರೋಪ ಬಂದಿದ್ದಕ್ಕೆ ವಾಪಸ್ ಹೋಗಿದೆ ಎಂದರು.

ಗದಗದಲ್ಲಿ ಮಾತನಾಡಿದ ಕೃಷಿ ಸಚಿವ ಬಿ ಸಿ ಪಾಟೀಲ್

ಇದನ್ನೂ ಓದಿ: ಸಿದ್ದರಾಮಯ್ಯರನ್ನು ಜನ ಜಾಗ ಖಾಲಿ ಮಾಡಿಸಿದ್ದಾರೆ: ಬಿ ಸಿ ಪಾಟೀಲ್​

ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಸ್ವಪಕ್ಷದಿಂದ ಕಿರುಕುಳ ಆರೋಪ ಬಂದಿದೆ ಎಂಬುದರ ಕುರಿತು ಪ್ರತಿಕ್ರಿಯೆ ನೀಡಿ, ಅವೆಲ್ಲಾ ಸುಳ್ಳು. ಯಾರೂ ಕಿರುಕುಳ ಕೊಡಲ್ಲ, ಜನಾರ್ದನ್ ರೆಡ್ಡಿ ಆರಾಮಾಗಿದ್ದಾರೆ.‌ ಪಕ್ಷದಲ್ಲಿ ಆ ರೀತಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಕಾಂಗ್ರೆಸ್​ನವರಿಗೆ ಕಾಮಾಲೆ ಕಣ್ಣು, ಆ ಪಕ್ಷಕ್ಕೆ ಡೈವೋರ್ಸ್ ಕೊಟ್ಟು ಬಂದೆ‌: ಬಿ ಸಿ ಪಾಟೀಲ್

ಎಸ್​ಸಿ ಎಸ್​ಟಿ ಮೀಸಲಾತಿ ಕ್ರೆಡಿಟ್ ವಾರ್ ವಿಚಾರ ಕುರಿತು ಪ್ರತಿಕ್ರಿಯಿಸಿ, ಎಸ್​ಸಿ ಎಸ್ ಟಿ ಮೀಸಲಾತಿ ಹೆಚ್ಚಿಸಿದ್ದು ಬಿಜೆಪಿ. ಸುಮ್ಮನೆ ಆಯೋಗ ರಚನೆ ಮಾಡಿದ್ದೀವಿ ಅಂದ್ರೆ ಹೇಗೆ?, ಆಗಲೇ ಜಾರಿ ಮಾಡಬಹುದಿತ್ತಲ್ಲ, ಯಾಕೆ ಮಾಡಿಲಿಲ್ಲ. ಜನರ ಕಣ್ಣು ಒರೆಸೋದಕ್ಕೆ ಮಾಡ್ಕೊಂಡು ಬಂದ್ರು. ಸಾಮಾಜಿಕ ನ್ಯಾಯ ಕೊಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ಯಾರು ಮೀಸಲಾತಿ ಹೆಚ್ಚು ಮಾಡಿದ್ದಾರೆ ಅಂತ ಆ ಜನಾಂಗಕ್ಕೆ ಗೊತ್ತಿದೆ. ಭಾರತಕ್ಕೆ ಏಕರೂಪ ನಾಗರಿಕ ಸಂಹಿತೆ ಅವಶ್ಯಕತೆ ಇದೆ. ಮುಂದಿನ ದಿನದಲ್ಲಿ ಬರುತ್ತೆ ಎಂದು ಬಿ.ಸಿ ಪಾಟೀಲ್ ಹೇಳಿದರು.

Last Updated : Oct 31, 2022, 4:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.