ETV Bharat / state

ಗರಸು ಹೇರುವ ನೆಪದಲ್ಲಿ ಜಿಂದಾಲ್ ಕಂಪನಿಗೆ ಕಪ್ಪತ್ತಗುಡ್ಡದ ಅದಿರು ಸಾಗಣೆ? - ore transportation in kapattagudda

ಗದಗ ತಾಲೂಕಿನ ಕಳಸಾಪೂರ ಗ್ರಾಮ ಪಂಚಾಯತ್​ ವ್ಯಾಪ್ತಿಯ ಹುಯಿಲಗೋಳದವರ ಗುಡ್ಡ ಎಂಬ ಹೆಸರಿನ ಬೆಟ್ಟದಲ್ಲಿ ಒಂದು ವರ್ಷದಿಂದ ಲೂಟಿ ನಡೆಯುತ್ತಿದೆ. ಕಪ್ಪತ್ತಗುಡ್ಡದಲ್ಲಿನ ಕಬ್ಬಿಣದ ಅದಿರು, ಅಮೂಲ್ಯ ಖನಿಜಾಂಶಗಳಗಳನ್ನ ಹೊಂದಿರುವ ಮಣ್ಣನ್ನು ಅಕ್ರಮವಾಗಿ ಸಾಗಿ ಮಾಡಲಾಗ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.

Iron ore illegal transportation to Jindal Company from Kappatthagudda
ಗರಸು ಹೇರುವ ನೆಪದಲ್ಲಿ ಜಿಂದಾಲ್ ಕಂಪನಿಗೆ ಕಪ್ಪತ್ತಗುಡ್ಡದ ಅದಿರು ಸಾಗಾಟ..?
author img

By

Published : Aug 28, 2020, 3:25 PM IST

ಗದಗ: ಅಮೂಲ್ಯ ಖನಿಜಾಂಶಗಳಗಳನ್ನ ಹೊಂದಿರುವ ಕಪ್ಪತ್ತಗುಡ್ಡದಲ್ಲಿನ ಕಬ್ಬಿಣದ ಅದಿರನ್ನು ಅಕ್ರಮವಾಗಿ ಸಾಗಿಸಲಾಗ್ತಿದೆ ಎಂಬ ಆರೋಪಗಳು ಜಿಲ್ಲೆಯಲ್ಲಿ ಕೇಳಿಬಂದಿವೆ.

ಕಪ್ಪತ್ತಗುಡ್ಡದ ಸೆರಗಿನಲ್ಲಿರುವ ಖನಿಜಯುಕ್ತ ಗರಸು ಮಣ್ಣನ್ನು ತೆಗೆದುಕೊಳ್ಳಲು ಗುತ್ತಿಗೆ ಪಡೆದ ಕಾಂಟ್ರಾಕ್ಟರ್ ಒಬ್ಬರು, ತಮಗೆ ಸಿಕ್ಕ ಅನುಮತಿ ಉಲ್ಲಂಘಿಸಿ ಅದೇ ಗುಡ್ಡದ ಮೇಲ್ಭಾಗದ ಕಬ್ಬಿಣದ ಅದಿರು ಸಾಂದ್ರೀಕೃತವಾಗಿರುವ ಮಣ್ಣನ್ನು ಹೇರಿ ಹಗಲು ದರೋಡೆ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳಿವೆ.

ಗರಸು ಹೇರುವ ನೆಪದಲ್ಲಿ ಜಿಂದಾಲ್ ಕಂಪನಿಗೆ ಕಪ್ಪತ್ತಗುಡ್ಡದ ಅದಿರು ಸಾಗಣೆ.?

ಗದಗ ತಾಲೂಕಿನ ಕಳಸಾಪೂರ ಗ್ರಾಮ ಪಂಚಾಯತ್​ ವ್ಯಾಪ್ತಿಯ ಹುಯಿಲಗೋಳದವರ ಗುಡ್ಡ ಎಂಬ ಹೆಸರಿನ ಬೆಟ್ಟದಲ್ಲಿ ಒಂದು ವರ್ಷದಿಂದ ಲೂಟಿ ನಡೆಯುತ್ತಿದೆ. ಗದಗ ನಗರದ ಕಾಂಗ್ರೆಸ್ ನಾಯಕ, ನಗರಸಭೆ ಮಾಜಿ ಸದಸ್ಯ ಶ್ರೀನಿವಾಸ ಹುಯಿಲಗೋಳ ಇದನ್ನು ಗುತ್ತಿಗೆ ಪಡೆದಿದ್ದಾರೆ. ರಸ್ತೆ ನಿರ್ಮಾಣಕ್ಕೆಂದು ಈ ಗುಡ್ಡದ ಸರ್ವೆ ನಂಬರ್ 109-ಎ ಪ್ರದೇಶದ 2.01 ಎಕರೆ ಜಾಗದಲ್ಲಿ 2019 ರ ಸೆಪ್ಟೆಂಬರ್ 4 ರಿಂದ 2020ರ ಸೆಪ್ಟೆಂಬರ್ 3ರವರೆಗೆ ಒಂದು ವರ್ಷದ ಮಟ್ಟಿಗೆ ಗುತ್ತಿಗೆ ಪಡೆದಿದ್ದಾರೆ. ಆದರೆ, ಅವರು ಆ ನಿರ್ದಿಷ್ಟ ಪ್ರದೇಶವನ್ನು ಮೀರಿ ಅತಿಕ್ರಮಣ ಮಾಡಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ.

Iron ore illegal transportation to Jindal Company from Kappatthagudda
ಗರಸು ಹೇರುವ ನೆಪದಲ್ಲಿ ಜಿಂದಾಲ್ ಕಂಪನಿಗೆ ಕಪ್ಪತ್ತಗುಡ್ಡದ ಅದಿರು ಸಾಗಣೆ?

ಇಲ್ಲಿಂದ ಶೇ.65 ಖನಿಜಾಂಶ ಇರುವ ಒಂದು ದೊಡ್ಡ ಗುಡ್ಡೆಗೆ ಕೈ ಹಾಕಿ ಅಲ್ಲಿಂದ ಮಣ್ಣಿನ ಬದಲು ಕಬ್ಬಿಣದ ಅದಿರನ್ನು ಸಾಗಿಸಲಾಗುತ್ತಿದೆ. ಮುಖ್ಯವಾಗಿ ಇಲ್ಲಿಂದ‌ ಗಿಣಿಗೇರಿಯ ಜಿಂದಾಲ್​ ಕಂಪನಿಗೆ ಸಾಗಿಸುತ್ತಿದ್ದಾರೆ ಎನ್ನಲಾಗ್ತಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಹ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ ಅಂತಿದ್ದಾರೆ ಜಿಲ್ಲೆಯ ಜನರು.

ಕಳಸಾಪೂರ, ನಾಗಾವಿ ಸುತ್ತಲಿನ ಗುಡ್ಡ ಪ್ರದೇಶದಲ್ಲಿ ಮಣ್ಣಿನ ಅಕ್ರಮ ಸಾಗಣೆ ಅವ್ಯಾಹತವಾಗಿ ನಡೆದಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಹಾಗಾಗಿ ಗರಸು ಮಣ್ಣು ಸಾಗಣೆ ಹೆಸರಲ್ಲಿ ಅದಿರು ಲೂಟಿ ನಡೆಯುತ್ತಿದ್ದರೂ ಯಾವ ಇಲಾಖೆಯೂ ಕೂಡ ಇದರ ವಿರುದ್ಧ ಕ್ರಮಕ್ಕೆ ಮುಂದಾಗಿಲ್ಲ ಎಂಬುದು ಜನರ ಮಾತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.