ETV Bharat / state

ಗದಗದಲ್ಲಿ ಐಪಿಎಲ್ ಬೆಟ್ಟಿಂಗ್ ಹಾವಳಿ‌: ಮತ್ತೆ 9 ಜನರ ಬಂಧನ - Gadag latest news

ಐಪಿಎಲ್ ಬೆಟ್ಟಿಂಗ್ ಆಡುತ್ತಿದ್ದ ದಂಧೆಕೋರರ ಮೇಲೆ ದಾಳಿ ಮಾಡಿ ಗದಗ ನಗರದ ಪೊಲೀಸರು 9 ಜನರನ್ನು ಬಂಧಿಸಿದ್ದಾರೆ. ದಾಳಿ ವೇಳೆ ಓರ್ವ ಆರೋಪಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

IPL Betting: 9 accused arrested
ಸಾಂದರ್ಭಿಕ ಚಿತ್ರ
author img

By

Published : Apr 29, 2021, 4:44 PM IST

ಗದಗ: ನಗರದಲ್ಲಿ ಐಪಿಎಲ್ ಬೆಟ್ಟಿಂಗ್ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ದಿನವೂ ಸಣ್ಣ-ಪುಟ್ಟ ಬುಕ್ಕಿಗಳಿಗೆ ಗಾಳ ಹಾಕುತ್ತಿದ್ದ ಪೊಲೀಸರು ಇಂದು ಮತ್ತೆ 9 ಜನರನ್ನು ಬಂಧಿಸಿದ್ದಾರೆ.

ಇಲ್ಲಿನ ಪರಿಸರ ಲೇಔಟ್​ನಲ್ಲಿ ಐಪಿಎಲ್ ಬೆಟ್ಟಿಂಗ್ ದಂಧೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಗ್ರಾಮೀಣ ಠಾಣೆಯ ಪೊಲೀಸ್ ಸಿಬ್ಬಂದಿ ದಾಳಿ ಮಾಡಿದ್ದರು. ದಾಳಿ ವೇಳೆ ನಾಲ್ಕು ಜನ ವರ್ತಕರು, ಓರ್ವ ಫೋಟೋಗ್ರಾಫರ್ ಸೇರಿದಂತೆ 9 ಜನರನ್ನು ಬಂಧಿಸಲಾಗಿದೆ.

ಹುಲಕೋಟಿಯ ಕೆಎಚ್​​ಬಿ ಕಾಲೋನಿಯ ಪ್ರಕಾಶ್ ಕಲಬುರ್ಗಿ, ನಗರದ ಕಲಾಮಂದಿರ ರಸ್ತೆಯ ನಿವಾಸಿಯಾದ ಶ್ರೀಕಾಂತ್ ಸಿದ್ದಲಿಂಗಪ್ಪ ಪೂಜಾರ, ವೆಂಕಟೇಶ್ ದತ್ತೂಸಾ ಸಿದ್ಲಿಂಗ್, ಈರಪ್ಪ ಬೂದಪ್ಪ ಹನಮನಹಳ್ಳಿ, ಶಿವಶಂಕರ್ ರಾಜಶೇಖರ ಯಕಲಾಸಪೂರ, ಬಸವರಾಜ್ ಗುಂಡಪ್ಪ ಕೌಡಿ, ಗಂಗಾಪೂರ ಪೇಟೆಯವರಾದ ಮಲ್ಲೇಶ್ ಸಿದ್ದಪ್ಪ ಬಾರಕೇರ, ನಿಂಗಪ್ಪ ಭರಮಪ್ಪ ಮಡಿವಾಳರ, ಬೆಟಗೇರಿಯ ಕಬಾಡಿ ರಸ್ತೆಯ ತೆಗ್ಗಿನಪೇಟಿಯ ಪ್ರಮೋದ್ ಪ್ರಕಾಶ್ ಮಾನೇದ್​​ ಬಂಧಿತ ಆರೋಪಿಗಳು.

ಇನ್ನು ಪ್ರಮುಖ ಬುಕ್ಕಿ ಎಸ್​ಎಂ ಕೃಷ್ಣಾ ನಗರದ ಅನಿಲ ಪರಸಪ್ಪ ಸಿದ್ದಮ್ಮನಹಳ್ಳಿ ಎಂಬಾತ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಂಧಿತರಿಂದ 24 ಸಾವಿರ ರೂಪಾಯಿ ನಗದು, ಮತ್ತು ಒಂದು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.