ಗದಗ : ಮುಂಗಾರು ಮಳೆ ಆರಂಭದಲ್ಲಿಯೇ ಚೆನ್ನಾಗಿ ಸುರಿದ ಪರಿಣಾಮ ಜಿಲ್ಲೆಯ ರೈತರು ಬಿತ್ತನೆಯನ್ನೇನೋ ಮಾಡಿದ್ದರು. ಆದರೆ, ಈಗ ಬಿತ್ತದ ಬೀಜಗಳನ್ನೇ ಕೀಟಗಳು ತಿಂದು ಹಾಕಿದ ಕಾರಣ ಅಲ್ಲೋ ಇಲ್ಲೋ ಒಂದಿಷ್ಟು ಬೀಜಗಳು ಮೊಳಕೆ ಒಡೆದಿವೆ. ಇದರಿಂದಾಗಿ ರೋಣ ತಾಲೂಕಿನ ನರೇಗಲ್ ಗ್ರಾಮದ ಶ್ರೀಶೈಲಪ್ಪ ಬಂಡಿಹಾಳ ಎಂಬ ರೈತ ಟ್ರ್ಯಾಕ್ಟರ್ ಮೂಲಕ ಮೊಳಕೆಯೊಡದಿದ್ದ ಬೆಳೆಯನ್ನು ನಾಶ ಮಾಡಿದ್ದಾರೆ.
ಒಂದು ವಾರದ ಹಿಂದೆ ಬಿತ್ತಿದ್ದ ಬೀಜಗಳು ಮೊಳಕೆಯೊಡೆಯುವ ಮುನ್ನವೇ ಇಲಿ, ಜಿಂಕೆ, ಕೀಟಗಳು ಅವುಗಳನ್ನ ತಿಂದು ಹಾಕಿವೆ. ಇದರಿಂದ ಹೊಲದಲ್ಲಿ ಅಲ್ಲೊಂದು ಇಲ್ಲೊಂದು ಬೀಜ ಮೊಳಕೆಯೊಡೆದಿದೆ. ಹೆಸರು, ಮೆಕ್ಕೆಜೋಳ, ಶೇಂಗಾ ಬಿತ್ತಿದ್ದ ರೈತ ಸಂಪೂರ್ಣ ಬೆಳೆಯನ್ನು ಟ್ರ್ಯಾಕ್ಟರ್ನಿಂದ ಹರಗಿದ್ದಾನೆ.
ತಾಲೂಕಿನ ಹಲವು ಗ್ರಾಮಗಳಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವೇನಿಲ್ಲ. ಪ್ರತಿ ವರ್ಷ ಮುಂಗಾರು ಹಾಗೂ ಹಿಂಗಾರಿನಲ್ಲಿ ಜಿಂಕೆ ಹಾವಳಿಯೂ ಹೆಚ್ಚಿರುತ್ತೆ.