ಗದಗ: ಹಾವೇರಿ - ಗದಗ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳು ಆಯ್ಕೆಯಾಗಿದ್ದೇ ತಡ ಒಂದಡೆ ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಕರ್ತರು ತಮ್ಮ ನಾಯಕರ ಪರ ಭರ್ಜರಿ ಪ್ರಚಾರ ಆರಂಭಿಸಿದ್ರೆ ಮತ್ತೊಂದೆಡೆ ಯುವಕ-ಯುವತಿಯರು ಟ್ಯಾಟೂ ಟ್ರೆಂಡ್ ಶುರು ಮಾಡಿದ್ದಾರೆ.
ಹೌದು ಹಾವೇರಿ-ಗದಗ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳು ಆಯ್ಕೆಯಾಗಿದ್ದೆ ತಡ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಮತ್ತು ಕಾರ್ಯಕರ್ತರು ಪ್ರಚಾರ ಶುರು ಮಾಡಿದ್ದಾರೆ.
ಕೆಲವರು ವೈಯಕ್ತಿಕವಾಗಿ, ಇನ್ನು ಕೆಲವರು ಸಾಮೂಹಿಕವಾಗಿ ಪೋಸ್ಟ್ ಗಳನ್ನ ಶೇರ್ ಮಾಡಿದ್ರೆ ಮತ್ತೆ ಕೆಲವರು ತಮ್ಮ ಕೈಗಳಿಗೆ ವೋಟ್ ಫಾರ್ ಡಿ ಆರ್ ಪಾಟೀಲ್ ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದಕ್ಕೆ ಯುವತಿಯರು ಸಹ ಹೊರತಾಗಿಲ್ಲ.
ವೋಟ್ ಪಾರ್ ಡಿ ಆರ್ ಪಾಟೀಲ್ ಅಂತಾ ಯುವತಿ ಟ್ಯಾಟೂ ಹಾಕಿಸಿಕೊಂಡಿದ್ದು ಕಾಂಗ್ರೇಸ್ ನಾಯಕರ ಮತ್ತು ಕಾರ್ಯಕರ್ತರ ಮೆಚ್ಚುಗೆಗೆ ಪಾತ್ರವಾಗಿದೆ. ಇತ್ತ ಕಮಲ ಪಾಳಯದಲ್ಲೂ ಸಹ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರ ಪೋಸ್ಟ್ ಗಳಿಗೆ ಜೈ ಬಿಜೆಪಿ, ಜೈ ಉದಾಸಿ, ಜೈ ಮೋದಿ ಎಂದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಚಿಸಲು ಬಿಜೆಪಿಗೆ ಮತ ನೀಡಿ ಅಂತಾ ಪೋಸ್ಟ್ ಮಾಡಿದ್ದಾರೆ.
ಇನ್ನು ಕೆಲವರು ಪೋಲ್ಗಳನ್ನ ಕ್ರಿಯೇಟ್ ಮಾಡಿ ನಿಮ್ಮ ಮತ ಯಾರಿಗೆ ಅಂತಾ ಕೇಳುವ ಮೂಲಕ ಜನರ ಅಭಿಮತವನ್ನ ಕೇಳುತ್ತಿದ್ದಾರೆ. ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳಲ್ಲಿನ ಮನೆಮನೆಗೆ ತೆರಳಿ ಫೇಸ್ ಟು ಫೇಸ್ ಪ್ರಚಾರ ಮಾಡುವ ಮುನ್ನವೇ ಫೇಸ್ ಬುಕ್ ಪ್ರೇಮಿಗಳು ಮಾತ್ರ ಅದರಲ್ಲೇ ಪ್ರಚಾರ ನಡೆಸಿದ್ದಾರೆ. ಅಲ್ಲದೇ ಪರಸ್ಪರ ಫೇಸ್ ಬುಕ್ ವಾರ್ ನಡೆಸುತ್ತಿದ್ದಾರೆ. ಈ ವಾರ್ ಎಷ್ಟರ ಮಟ್ಟಿಗೆ ಫಲ ಕೊಡುತ್ತೆ ಅನ್ನುವುದು ಚುನಾವಣ ಫಲಿತಾಂಶ ಪ್ರಕಟಗೊಂಡ ಬಳಿಕವಷ್ಟೇ ಗೊತ್ತಾಗಲಿದೆ.