ETV Bharat / state

ಗದಗದಲ್ಲಿ ನಡೆಯುತ್ತಿದೆಯಾ ಅಕ್ರಮ ಕಲ್ಲು ಗಣಿಗಾರಿಕೆ... ಅಧಿಕಾರಿಗಳು ಹೇಳೋದೇನು? - stone Blasting in Gadag without permission

ಗದಗದ 49 ಕ್ವಾರಿಗಳ ಪೈಕಿ ಕೇವಲ 23 ಕ್ವಾರಿ ಮಾಲೀಕರು ಮಾತ್ರ ಬ್ಲಾಸ್ಟಿಂಗ್ ಅಗ್ರಿಮೆಂಟ್ ಪತ್ರ ನೀಡಿದ್ದಾರೆ. ಇನ್ನುಳಿದ 26 ಕ್ವಾರಿ ಮಾಲೀಕರು ಪತ್ರ ನೀಡಿಲ್ಲ ಎಂದು ಗಣಿ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

Illegal stone mining in Gadag
ಗದಗದಲ್ಲಿ ಅಕ್ರಮ ಕಲ್ಲು ಗಣಿಗಾರಿಗೆ..?
author img

By

Published : Feb 26, 2021, 10:12 PM IST

ಗದಗ: ರಾಜ್ಯದಲ್ಲಿ ಅಕ್ರಮ ಕಲ್ಲು ಗಣಿಗಾರಿ ಎಗ್ಗಿಲ್ಲದೆ ನಡೆಯುತ್ತಿದೆ ಎನ್ನುವುದು ಶಿವಮೊಗ್ಗ ದುರಂತದ ಬಳಿಕ ಒಂದೊಂದಾಗಿ ಬಯಲಾಗುತ್ತಿವೆ. ಭಾರೀ ಪ್ರಮಾಣದಲ್ಲಿ ಅಕ್ರಮ ಕಲ್ಲು ಗಣಿಗಾರಿ ಮಾಡುವ ಮೂಲಕ ಕ್ವಾರಿ ಮಾಲೀಕರು ಸರ್ಕಾರಕ್ಕೆ ಕೋಟಿ ಕೋಟಿ ರೂ. ಪಂಗನಾಮ ಹಾಕಿದ್ದಾರೆ. ಗದಗ ಜಿಲ್ಲೆಯಲ್ಲೂ ಸಕ್ರಮದ ನೆರಳಲ್ಲಿ ಎಗ್ಗಿಲ್ಲದೆ ಅಕ್ರಮ ಕಲ್ಲು ಲೂಟಿ ನಡೆಯುತ್ತಿರುವುದನ್ನು ಸ್ವತಃ ಗಣಿ ಇಲಾಖೆಯೇ ಬಯಲು ಮಾಡಿದೆ.

ಜಿಲ್ಲೆಯ ಶಿರಹಟ್ಟಿ, ಮುಂಡರಗಿ, ಗದಗ, ಲಕ್ಷ್ಮೇಶ್ವರ ತಾಲೂಕಿನಲ್ಲಿ ಒಟ್ಟು 49 ಸಕ್ರಿಯ ಕಲ್ಲು ಕ್ವಾರಿಗಳು ಇವೆ. ಎಲ್ಲವೂ ಬ್ಲಾಸ್ಟಿಂಗ್ ಮಾಡಿ ಗಣಿಗಾರಿಕೆ ಮಾಡುವುದಾಗಿ ಅನುಮತಿ ಪಡೆದಿವೆ. ಅನುಮತಿ ಪಡೆದ ಬಳಿಕ ಸರ್ಕಾರದ ಅನುಮೋದಿತ ಬ್ಲಾಸ್ಟಿಂಗ್ ಕಂಪನಿ ಜೊತೆ ಕಲ್ಲಿನ ಕ್ವಾರಿ ಮಾಲೀಕರು ಅಗ್ರಿಮೆಂಟ್ ಮಾಡಿಕೊಳ್ಳಬೇಕು. ಆಗ ಬ್ಲಾಸ್ಟಿಂಗ್ ಕಂಪನಿಯವರು ಸ್ಥಳಕ್ಕೆ ಬಂದು ಬ್ಲಾಸ್ಟಿಂಗ್ ಮಾಡಿ ಹೋಗುತ್ತಾರೆ. ಆದರೆ, ಗದಗ ಜಿಲ್ಲೆಯಲ್ಲಿ 49 ಅನುಮತಿ ಪಡೆದ ಕಲ್ಲಿನ ಕ್ವಾರಿ ಮಾಲೀಕರಲ್ಲಿ ಕೇವಲ 23 ಕ್ವಾರಿ ಮಾಲೀಕರು ಮಾತ್ರ ಬ್ಲಾಸ್ಟಿಂಗ್ ಕಂಪನಿ ಜೊತೆ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ ಎಂದು ಗಣಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಗದಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ?

ಓದಿ : ಬಳ್ಳಾರಿಯ ಅಧಿಕಾರಿಗಳು ವಿಜಯನಗರದ ಹೆಚ್ಚುವರಿ ಪ್ರಭಾರಿಯಾಗಿ ಕಾರ್ಯನಿರ್ವಹಿಸುವಂತೆ ಆದೇಶ

ಹಾಗಾದರೆ, 49 ಕ್ವಾರಿ ಮಾಲೀಕರಲ್ಲಿ ಇನ್ನುಳಿದ 26 ಕ್ವಾರಿ ಮಾಲೀಕರು ಬ್ಲಾಸ್ಟಿಂಗ್ ಕಂಪನಿ ಜೊತೆ ಅಗ್ರಿಮೆಂಟ್ ಮಾಡಿಕೊಂಡಿಲ್ವಾ ಎನ್ನುವ ಅನುಮಾನ ಮೂಡಿದೆ. ಕ್ವಾರಿ ಅನುಮತಿ ಪಡೆದ ಮಾಲೀಕರು ಬ್ಲಾಸ್ಟಿಂಗ್ ಕಂಪನಿ ಅಗ್ರಿಮೆಂಟ್ ಗಣಿ ಇಲಾಖೆಗೆ ಹಾಜರುಪಡಿಸಬೇಕು. ಆದರೆ, ಯಾರೊಬ್ಬರು ಬ್ಲಾಸ್ಟಿಂಗ್ ಅಗ್ರಿಮೆಂಟ್ ಗಣಿ ಇಲಾಖೆಗೆ ನೀಡಿಲ್ಲ. ಇಷ್ಟು ವರ್ಷ ಗಣಿ ಇಲಾಖೆಯೂ ಗಪ್ ಚುಪ್ ಆಗಿತ್ತು. ಆದ್ರೆ, ಶಿವಮೊಗ್ಗ ದುರಂತದ ಬಳಿಕ ಎಚ್ಚೆತ್ತುಕೊಂಡ ಗಣಿ ಇಲಾಖೆ ಅಧಿಕಾರಿಗಳು, ಈಗ ಎಲ್ಲಾ ಕ್ವಾರಿ ಮಾಲೀಕರಿಗೆ ಬ್ಲಾಸ್ಟಿಂಗ್ ಅಗ್ರಿಮೆಂಟ್ ಪತ್ರ ನೀಡುವಂತೆ ಸೂಚಿಸಿದ್ದಾರೆ. ಸದ್ಯ, 49 ಕ್ವಾರಿಗಳ ಪೈಕಿ ಕೇವಲ 23 ಗಣಿ ಮಾಲೀಕರು ಮಾತ್ರ ಬ್ಲಾಸ್ಟಿಂಗ್ ಅಗ್ರಿಮೆಂಟ್ ಪತ್ರ ನೀಡಿದ್ದಾರೆ. ಇನ್ನುಳಿದ 26 ಕ್ವಾರಿ ಮಾಲೀಕರು ಪತ್ರ ನೀಡಿಲ್ಲ ಎಂದು ಗಣಿ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಓದಿ : ಕುಡಿದು ಬಂದು ಕಾಡುತ್ತಿದ್ದ ಮಗನಿಗೆ 'ಅಂತ್ಯ' ಹಾಡಿದ ತಂದೆ!

ಬ್ಲಾಸ್ಟಿಂಗ್ ಕಂಪನಿ ಅಗ್ರಿಮೆಂಟ್ ಇಲ್ಲದಿದ್ದರೆ ಕಲ್ಲು ಸ್ಫೋಟ ಮಾಡುವಂತಿಲ್ಲ. ಅಂತಹ ಕ್ವಾರಿಗಳಿಗೆ ಅಧಿಕೃತವಾಗಿ ಸ್ಫೋಟಕ ಕಳಿಸುವಂತಿಲ್ಲ. ಹಾಗಾದರೆ, ಈ 26 ಕ್ವಾರಿ ಮಾಲೀಕರು ಇಷ್ಟು ವರ್ಷ ಬ್ಲಾಸ್ಟಿಂಗ್ ಮಾಡಿದ್ದಾದರೂ ಹೇಗೆ? ಈ ಕ್ವಾರಿಗಳಿಗೆ ಸ್ಫೋಟಕ ಬಂದಿದ್ದಾದರು ಎಲ್ಲಿಂದ ಎಂಬ ಪ್ರಶ್ನೆ ಕಾಡುತ್ತಿದೆ. ಇಷ್ಟು ವರ್ಷ ಜಿಲ್ಲೆಯಲ್ಲೂ ಅಕ್ರಮ ಸ್ಫೋಟಕದಿಂದಲೇ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತಾ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಈ ನಡುವೆ ಆಂಧ್ರ ಪ್ರದೇಶದಿಂದ ಜಿಲ್ಲೆಗೆ ಅಕ್ರಮ ಸ್ಫೋಟಕ ಸರಬರಾಜಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.

ಶಿವಮೊಗ್ಗ ದುರಂತದ ಬಳಿಕ ಗದಗ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಡಿಸಿ ಸುಂದರೇಶ ಬಾಬು, ಎಸ್ಪಿ ಯತೀಶ್ ನೇತೃತ್ವದಲ್ಲಿ ಗದಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಲ್ಲು ಗಣಿ ಮಾಲೀಕರ ಸುದೀರ್ಘ ಸಭೆ ನಡೆದಿದೆ. ಗಣಿ ಮಾಲೀಕರಿಗೆ ಸರ್ಕಾರದ ನಿಯಮದಂತೆ ಗಣಿಗಾರಿಕೆ ಮಾಡಿ. ಕಾನೂನು ಮೀರಿ ಗಣಿಗಾರಿಕೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಗಣಿ ಇಲಾಖೆ ಅಧಿಕಾರಿಗಳಿಗೆ ನಿರಂತರವಾಗಿ ನಿಗಾ ವಹಿಸುವಂತೆ ಸೂಚಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.