ETV Bharat / state

ಜಾತಿ, ದುಡ್ಡು, ಗೂಂಡಾ ರಾಜಕಾರಣ ಯಾವುದೂ ನಡೆಯಲ್ಲ: ಸಚಿವ ಕೆ.ಎಸ್. ಈಶ್ವರಪ್ಪ - ಕೆಎಸ್ ಈಶ್ವರಪ್ಪ ಲೆಟೆಸ್ಟ್ ನ್ಯೂಸ್

ಹಿಂದಿನಿಂದಲೂ ಜನರ ದಿಕ್ಕು ತಪ್ಪಿಸುವ ಕೆಲಸ ಕಾಂಗ್ರೆಸ್ ಮಾಡುತ್ತಾ ಬಂದಿದೆ. ಇನ್ನು ಮುಂದಾದರು ಜನರ ದಿಕ್ಕು ತಪ್ಪಿಸುವ ಕೆಲಸ ನಿಲ್ಲಿಸಿ, ನಾವು ಮಾಡಿದ್ದು ತಪ್ಪು ಅಂತಾ ಜನರಲ್ಲಿ ಕ್ಷಮೆ ಕೇಳಿ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಕಿಡಿಕಾರಿದರು.

k s eshwarappa
ಸಚಿವ ಕೆ.ಎಸ್. ಈಶ್ವರಪ್ಪ
author img

By

Published : Nov 11, 2020, 3:14 PM IST

ಗದಗ: ಜಾತಿ ರಾಜಕಾರಣ, ಗೂಂಡಾ ರಾಜಕಾರಣ ಇದ್ಯಾವುದು ಕೂಡ ರಾಜ್ಯದಲ್ಲಿ ನಡೆಯೋದಿಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಗದಗದಲ್ಲಿ ನಡೆದ ಸಾಬರಮತಿ ಆಶ್ರಮ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಈ ರೀತಿಯ ಬೆಳವಣಿಗೆಯನ್ನು ಉಪಚುನಾವಣೆ ಫಲಿತಾಂಶದಲ್ಲಿ ಕಾಣುತ್ತಿದ್ದೇವೆ ಎಂದರು.‌ ಡಿಕೆ ಶಿವಕುಮಾರ್​, ಸಿದ್ದರಾಮಯ್ಯ ಸುಳ್ಳಿನ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ನಾವು ಗೆಲ್ಲುತ್ತೇವೆ, ಚುನಾವಣೆ ನಂತರ ಯಡಿಯೂರಪ್ಪ ಬದಲಾವಣೆ ಆಗ್ತಾರೆ ಅಂತಾ ಹೇಳುತ್ತಲೇ ಬಂದರು. ಹಿಂದಿನಿಂದಲೂ ಜನರ ದಿಕ್ಕು ತಪ್ಪಿಸುವ ಕೆಲಸ ಕಾಂಗ್ರೆಸ್ ಮಾಡುತ್ತಾ ಬಂದಿದೆ. ಇನ್ನು ಮುಂದಾದರು ಜನರ ದಿಕ್ಕು ತಪ್ಪಿಸುವ ಕೆಲಸ ನಿಲ್ಲಿಸಿ, ನಾವು ಮಾಡಿದ್ದು ತಪ್ಪು ಅಂತಾ ಜನರಲ್ಲಿ ಕ್ಷಮೆ ಕೇಳಿ ಎಂದು ಕಿಡಿಕಾರಿದರು.

ಸಚಿವ ಕೆ.ಎಸ್. ಈಶ್ವರಪ್ಪ

ಕಾಂಗ್ರೆಸ್​​ನಲ್ಲಿ ಮುಂದಿನ ಸಿಎಂ ವಿಚಾರವಾಗಿ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರ ನಡುವಿನ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿ, ಇವರು ಪಾಠ ಕಲಿಯುವರಲ್ಲಾ. ಗುಂಡಾಗಿರಿ, ಸುಳ್ಳು ಹೇಳುವುದು ರಕ್ತಗತವಾಗಿ ಬಂದಿದೆ. ಇವರು ಸೋತರೂ ಕೂಡ ಪಾಠ ಕಲ್ಲಿಯುವುದಿಲ್ಲ. ಜನರೇ ಇವರನ್ನು ಮೂಲೆಗೆ ತಳ್ಳತ್ತಾರೆ. ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿ ಮೊದಲ‌ ಚುನಾವಣೆ ಎದುರಿಸಲಾಗಲಿಲ್ಲ. ದುಡ್ಡು, ಜಾತಿ ಹೆಸರಲ್ಲಿ ಜನರ ದಿಕ್ಕುಗೆಡಿಸುವ ಪ್ರಯತ್ನ ಮಾಡಿ ಸೋಲು ಕಂಡಿದ್ದಾರೆ. ಸೋಲಾದ ನಂತರವೂ ಧೃತಿಗೆಡುವ ಅವಶ್ಯಕತೆ ಇಲ್ಲಾ ಅಂತ ಹೇಳ್ತಿದಾರೆ.

ಇನ್ನು ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಅವರು ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಹಾಗೂ ಕೇಂದ್ರ ನಾಯಕರಿಗೆ ಸಂಬಂಧಿಸಿದ್ದು ಕೇಂದ್ರದ ನಾಯಕರು ತೆಗೆದುಕೊಂಡು ನಿರ್ಧಾರಕ್ಕೆ ರಾಜ್ಯದ ಎಲ್ಲಾ ಶಾಸಕರು ಬದ್ಧರಾಗಿರುತ್ತೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.