ETV Bharat / state

ಮಿಷನ್​ ಅಂತ್ಯೋದಯ: ದೇಶಕ್ಕೆ ಪ್ರಥಮ ಸ್ಥಾನ ಪಡೆದ ರಾಜ್ಯದ ಹುಲಕೋಟಿ ಗ್ರಾಮ - ಅಭಿವೃದ್ಧಿ ಹೊಂದಿದ ದೇಶದ ಮೊದಲ ಹಳ್ಳಿ ಹುಲಕೋಟಿ ಗ್ರಾಮ

ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಕೈಗೊಂಡ ಮಿಷನ್ ಅಂತ್ಯೋದಯ-2020ರ ಸಮೀಕ್ಷೆಯಲ್ಲಿ ಹುಲಕೋಟಿ ಗ್ರಾಮ ಪ್ರಥಮ ಸ್ಥಾನ ಪಡೆದಿದೆ.

Hulakoti village became the country's first in development
ಹುಲಕೋಟಿ ಗ್ರಾಮ
author img

By

Published : Jan 6, 2021, 7:57 PM IST

Updated : Jan 6, 2021, 11:02 PM IST

ಗದಗ: ಕುಡಿಯಲು ನೀರು, ರಸ್ತೆ, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ವಿವಿಧ ಮೂಲಭೂತ ಸಮಸ್ಯೆಗಳಿಂದ ಬಳಲುತ್ತಿದ್ದ ಆ ಗ್ರಾಮ ಇಂದು ಯಾವ ಗ್ರಾಮಕ್ಕೂ ಕಡಿಮೆ ಇಲ್ಲವೆಂಬಂತೆ ಹೈಟೆಕ್​ ಆಗಿ ಪರಿವರ್ತನೆಗೊಂಡಿದೆ. ಅದಕ್ಕೆಲ್ಲಾ ಕಾರಣ ಇಲ್ಲಿನ ಜನಪ್ರತಿನಿಧಿಗಳ ಒಗ್ಗಟ್ಟಿನ ಮಂತ್ರ. ಜನಸಾಮಾನ್ಯರ ಹೃದಯವಂತಿಕೆ. ಹಾಗಾಗಿ ಈ ಹಳ್ಳಿ ಯಾವುದೇ ಸಮಸ್ಯೆಯಿಲ್ಲದೆ ಕಂಗೊಳಿಸುತ್ತಿದೆ.

ಇದನ್ನೂ ಓದಿ...ಅನಾರೋಗ್ಯದಿಂದ ಬಳಲುತ್ತಿದ್ದ ಒಂದು ಹಸು ತಂದು ಸಾಕಿದ ನಾಗಮ್ಮ ಈಗ 80 ಹಸುಗಳ "ಗೋಮಾತೆ"

ಸುಸಜ್ಜಿತ ರಸ್ತೆಗಳು, ಎಲ್ಲೆಂದರಲ್ಲಿ ತಲೆ ಎತ್ತಿರುವ ಶುದ್ಧ ಕುಡಿಯುವ ನೀರಿನ ಘಟಕಗಳು, ಸುತ್ತಲೂ ಕಂಗೊಳಿಸುವ ಹಸಿರು, ಖಾಸಗಿ ಶಾಲೆಗಳನ್ನೂ ಮೀರಿಸುವ ಸರ್ಕಾರಿ ಶಾಲೆಗಳು. ಇದು ಗದಗ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ಕಂಡು ಬಂದ‌ ದೃಶ್ಯಗಳು. ಈ ಗ್ರಾಮ ಅಭಿವೃದ್ಧಿ ಹೊಂದಿದ ದೇಶದ ಮೊದಲ ಹಳ್ಳಿ ಎಂಬ ದಾಖಲೆ ಬರೆದಿದೆ. ಪಂಚಾಯಿತಿ ಸಿಬ್ಬಂದಿ ಮತ್ತು ಸದಸ್ಯರು ಒಗ್ಗೂಡಿ ಕೈಗೊಂಡ ಅಭಿವೃದ್ಧಿ ಕೆಲಸಗಳೇ ಇದಕ್ಕೆ ಕಾರಣ.

ನೂರಕ್ಕೆ 90 ಅಂಕ: ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಕೈಗೊಂಡ ಮಿಷನ್ ಅಂತ್ಯೋದಯ-2020ರ ಸಮೀಕ್ಷೆಯಲ್ಲಿ ಹುಲಕೋಟಿ ಗ್ರಾಮ ಪ್ರಥಮ ಸ್ಥಾನ ಪಡೆದಿದೆ. ಬಡತನ ನಿರ್ಮೂಲನೆಗೆ ಗ್ರಾಮ ಪಂಚಾಯಿತಿಗಳು ಕೈಗೊಂಡ ಉಪಕ್ರಮಗಳ ಕುರಿತು ‌ನಡೆಸಿದ ಸಮೀಕ್ಷೆಯಲ್ಲಿ ಕರ್ನಾಟಕದಿಂದ ಹುಲಕೋಟಿ ಗ್ರಾಮ ಪ್ರಥಮ ಸ್ಥಾನ ಪಡೆದರೆ, ಮೊದಲ 10ರಲ್ಲಿ ಬೆಳಗಾವಿಯ ಎರಡು ಹಳ್ಳಿಗಳಿಗೆ 2ನೇ ಸ್ಥಾನ ಲಭಿಸಿದೆ. ಅಕ್ಟೋಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಒಟ್ಟು 141 ಪ್ರಶ್ನಾವಳಿಗಳಲ್ಲಿ 100ಕ್ಕೆ 90 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಅಲಂಕರಿಸಿದೆ.

ದೇಶಕ್ಕೆ ಪ್ರಥಮ ಸ್ಥಾನ ಪಡೆದ ರಾಜ್ಯದ ಹುಲಕೋಟಿ ಗ್ರಾಮ

1500 ಮ್ಯಾನ್​ ಹೋಲ್​ ನಿರ್ಮಾಣ: ಗ್ರಾಮದಲ್ಲಿ 2 ಸಾವಿರಗಿಂತ ಹೆಚ್ಚು ಜನಸಂಖ್ಯೆ ಇದೆ. ಸುಮಾರು 6 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಜೊತೆಗೆ ಪ್ರಾಥಮಿಕ, ಪ್ರೌಢ ಶಾಲೆಗಳು, ಪಿಯುಸಿ ಮತ್ತು ಇಂಜಿನಿಯರಿಂಗ್ ಕಾಲೇಜ್​ಗಳಿಗೆ ನಿತ್ಯ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತದೆ. ಸರ್ಕಾರಿ ಆಸ್ಪತ್ರೆ, ಪ್ರತಿ ಬೀದಿಗಳಲ್ಲಿ ಸಿಸಿ ರಸ್ತೆ, ಡಾಂಬರು ರಸ್ತೆಗಳನ್ನು ನಿರ್ಮಿಸಲಾಗಿದೆ. ಜೊತೆಗೆ 42 ಕಿ.ಮೀ. ಉದ್ದದ ಒಳಚರಂಡಿ ವ್ಯವಸ್ಥೆ, 1,500 ಮ್ಯಾನ್​ ಹೋಲ್ ನಿರ್ಮಾಣದ ಒಳಚರಂಡಿ ಸಂಸ್ಕರಣ ಘಟಕಗಳನ್ನು ನಿರ್ಮಿಸಲಾಗಿದೆ. ಈ ಸಂಸ್ಕರಿಸಿದ ನೀರಿನಿಂದ ಸುಮಾರು 50 ಹೆಕ್ಟೇರ್ ತೋಟಗಾರಿಕೆ ಬೆಳೆಗಳಿಗೆ ನೀರು ಒದಗಿಸಲಾಗುತ್ತಿದೆ. ಇಲ್ಲಿನ ಮುಕ್ತಿವನ ಗ್ರಾಮದ ಸಂಸ್ಕೃತಿಯನ್ನು ಬಿಂಬಿಸುತ್ತಿದೆ. ಗ್ರಾಮದ ಇಕ್ಕೆಲಗಳಲ್ಲಿ ಗಿಡಗಳನ್ನು ನೆಡಲಾಗಿದ್ದು, ಹಲವು ಉದ್ಯಾನಗಳು ಗ್ರಾಮದ ಸೌಂದರ್ಯವನ್ನು ‌ ಮತ್ತಷ್ಟು ಹೆಚ್ಚಿಸಿವೆ.

ಹೆಚ್.ಕೆ.ಪಾಟೀಲ್ ಅವರ ಸ್ವಗ್ರಾಮ: ಇನ್ನು ಇಷ್ಟಕ್ಕೆಲ್ಲಾ ಕಾರಣ ಇಲ್ಲಿನ ಜನಪ್ರತಿನಿಧಿಗಳು ಮತ್ತು ಸಿಬ್ಬಂದಿ ವರ್ಗದ ಒಗ್ಗಟ್ಟಿನ ಮಂತ್ರ. ಶಾಸಕ ಹೆಚ್.ಕೆ.ಪಾಟೀಲ್ ಅವರ ಸ್ವಗ್ರಾಮವೂ ಹೌದು. ಹೆಚ್.ಕೆ.ಪಾಟೀಲ್ ಅವರು ಗ್ರಾಮೀಣ ಅಭಿವೃದ್ಧಿ ಸಚಿವರಾಗಿದ್ದ ವೇಳೆ ಹಲವು ಯೋಜನೆಗಳನ್ನು ಗ್ರಾಮಕ್ಕೆ ನೀಡಿದ್ದೂ ಸಹ ಸಹಕಾರಿಯಾಗಿದೆ. ಹುಟ್ಟಿನಿಂದ ಹಿಡಿದು ಸ್ಮಶಾನದವರೆಗೂ ಏನೆಲ್ಲಾ ಸೌಕರ್ಯಗಳು ಬೇಕೋ ಅದೆಲ್ಲವೂ ಈ ಗ್ರಾಮದಲ್ಲೇ ದೊರೆಯುತ್ತಿವೆ. ಒಟ್ಟಿನಲ್ಲಿ ಜನಸಾಮಾನ್ಯರಿಗೆ ಸರ್ಕಾರದಿಂದ ಸಿಗುವ ಎಲ್ಲಾ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದರೆ ದೇಶದಲ್ಲಿರುವ ಹಳ್ಳಿಗಳು ಹುಲಕೋಟಿಯಂತೆ ಕಂಗೊಳಿಸುವುದರಲ್ಲಿ ಅನುಮಾನವೇ ಇಲ್ಲ.

Last Updated : Jan 6, 2021, 11:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.