ETV Bharat / state

ಮೂರು ವರ್ಷಕ್ಕೊಮ್ಮೆ ನಡೆಯುವ ದ್ಯಾಮವ್ವ ಜಾತ್ರೆ: ಹಿಂದೂ- ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿ

ಮೂರು ವರ್ಷಕ್ಕೊಮ್ಮೆ ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದ ಗ್ರಾಮ ದೇವತೆಯಾದ ದ್ಯಾಮವ್ವ ದೇವಿಯ ಜಾತ್ರೆ ನಡೆದಿದೆ. ಇದು ಹಿಂದೂ- ಮುಸ್ಲಿಂ ಸೇರಿದಂತೆ ಎಲ್ಲ ಸಮುದಾಯದ ಭಕ್ತರು ಸೇರುವ ಜಾತ್ರೆಯಾಗಿದೆ.

gadag
ದ್ಯಾಮವ್ವ ಜಾತ್ರೆ
author img

By

Published : Jan 29, 2021, 6:56 AM IST

Updated : Jan 29, 2021, 10:28 AM IST

ಗದಗ: ಜಿಲ್ಲೆಯ ಶಿರಹಟ್ಟಿ ಪಟ್ಟಣದ ಗ್ರಾಮ ದೇವತೆಯಾದ ದ್ಯಾಮವ್ವ ದೇವಿಯ ಜಾತ್ರೆಯನ್ನು ಮೂರು ವರ್ಷಕ್ಕೆ ಒಂದು ಸಾರಿ ಮಾಡಲಾಗುತ್ತದೆ. ಹಿಂದೂ- ಮುಸ್ಲಿಂ ಸೇರಿದಂತೆ ಎಲ್ಲಾ ಸಮುದಾಯದ ಭಕ್ತರು ಈ ಜಾತ್ರೆಯಲ್ಲಿ ಭಾಗಿಯಾಗುವುದು ವಿಶೇಷತೆ.

ಮೂರು ವರ್ಷಕ್ಕೊಮ್ಮೆ ದೇವಿಯ ಮೂರ್ತಿಗೆ ಬಣ್ಣ ಹಚ್ಚುವ ಕಾರ್ಯ ನಡೆಯುತ್ತದೆ. ಆಗ ಇಡೀ ಗ್ರಾಮದ ಪ್ರತಿಯೊಂದು ಮನೆಗೆ ತೆರಳುತ್ತಾಳೆ. ಆ ಸಂದರ್ಭದಲ್ಲಿ ಭಕ್ತರು ಹಣ್ಣು, ಕಾಯಿ ಹೂ ಹಾಕಿ ದೇವಿಯ ದರ್ಶನ ಪಡೆಯುತ್ತಾರೆ. ಈ ಹಿಂದೆ ಐದು ವರ್ಷಕ್ಕೆ ಒಂದು ಸಾರಿ ದೇವಿಯ ಮೂರ್ತಿಯ ಉತ್ಸವ ಮಾಡಲಾಗುತ್ತಿತ್ತು. ಆದ್ರೆ ಕಳೆದ 20 ವರ್ಷಗಳಿಂದ ಮೂರು ವರ್ಷಕ್ಕೆ ಒಂದು ಸಾರಿ ದೇವಿಯ ಮೆರವಣಿಗೆ ಮಾಡಲಾಗುತ್ತದೆ.

ಗದಗ ದ್ಯಾಮವ್ವ ಜಾತ್ರೆ

ಇನ್ನು ಮೂರು ವರ್ಷಕ್ಕೆ ಒಂದು ಸಾರಿ ನಡೆಯುವ ಈ ವಿಶೇಷ ಜಾತ್ರೆಯೂ ಕೂಡ ಮೂರು ದಿನ ನಡೆಯುತ್ತದೆ. ಬಣ್ಣದ ಕಾರ್ಯ ಮುಗಿದ‌‌ ಮೇಲೆ ಶಿರಹಟ್ಟಿ ಫಕೀರೇಶ್ವರ ಮಠಕ್ಕೆ ತೆರಳಿ, ಅಲ್ಲಿಂದ ಎಲ್ಲರ ಮನೆ ಮನೆಗೆ ಹೋಗಿ ದೇವಿ ದರ್ಶನ ನೀಡುತ್ತಾಳೆ. ನಂತ್ರ ದೇವಾಲಯದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ, ಮೂರು ವರ್ಷಗಳ ಕಾಲ ದೇವಿ ಮೂರ್ತಿಗೆ ನಿತ್ಯ ಪೂಜೆ ಪುನಸ್ಕಾರ ಮಾಡಲಾಗುತ್ತದೆ. ಶಕ್ತಿ ದೇವತೆ ಜಾತ್ರೆಗಾಗಿ ಬಂಧು ಬಳಗವನ್ನು ಕರೆಸಿಕೊಂಡು ಪಟ್ಟಣದ ಜನರು ಅದ್ದೂರಿಯಾಗಿ ಜಾತ್ರೆಯನ್ನು ಮಾಡುತ್ತಾರೆ.

ಇನ್ನೂ ಕೊರೊನಾ ಮಧ್ಯೆ ಮುಂಜಾಗೃತಾ ಕ್ರಮ ಕೈಗೊಂಡು ಜಾತ್ರೆಯನ್ನು ಅದ್ದೂರಿಯಾಗಿ ಮಾಡಿದ್ದಾರೆ.

Last Updated : Jan 29, 2021, 10:28 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.