ETV Bharat / state

ನವೀಕೃತಗೊಂಡ ಹಳೇ ಬಸ್ ನಿಲ್ದಾಣಕ್ಕೆ ಪಂ. ಪುಟ್ಟರಾಜ ಗವಾಯಿಗಳ ಹೆಸರಿಡಲು ಸರ್ಕಾರ ಗ್ರೀನ್ ಸಿಗ್ನಲ್! - Pandit Puttaraja gavayi

ಗವಾಯಿಗಳ ಅಸಂಖ್ಯಾತ ಭಕ್ತರ ಬೇಡಿಕೆಯನ್ನೂ ಈಡೇರಿಸಿದಂತಾಗಿದೆ ಎಂದು ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅಭಿಪ್ರಾಯಪಟ್ಟಿದ್ದಾರೆ

ಬಸ್ ನಿಲ್ದಾಣಕ್ಕೆ ಪಂ. ಪುಟ್ಟರಾಜ ಗವಾಯಿಗಳ ಹೆಸರು

author img

By

Published : Nov 25, 2020, 3:52 AM IST

ಗದಗ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ನವೀಕೃತಗೊಂಡಿರುವ ಗದಗ ನಗರದ ಹೃದಯ ಭಾಗದಲ್ಲಿರುವ ಹಳೆಯ ಬಸ್ ನಿಲ್ದಾಣಕ್ಕೆ ಗದಗಿನ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ಬಸ್ ನಿಲ್ದಾಣವೆಂದು ನಾಮಕರಣ ಮಾಡಲು ರಾಜ್ಯ ಸರ್ಕಾರ ಅಧಿಕೃತವಾಗಿ ಅನುಮೋದನೆಯನ್ನು ನೀಡಿದೆ.

ಪಂಡಿತ ಪುಟ್ಟರಾಜ ಗವಾಯಿ
ಪಂಡಿತ ಪುಟ್ಟರಾಜ ಗವಾಯಿ

ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ತಿಳಿಸಿದ್ದಾರೆ. ಹಳೆ ಬಸ್ ನಿಲ್ದಾಣಕ್ಕೆ ಪಂಡಿತ ಪುಟ್ಟರಾಜ ಗವಾಯಿಗಳ ಹೆಸರಿಡುವಂತೆ ವಿವಿಧ ಸಂಘಟನೆಗಳು ಅನೇಕ ದಿನಗಳಿಂದ ಹೋರಾಟ ನಡೆಸಿದ್ದವು. ಅಲ್ಲದೇ, ನಾಮಕರಣ ಮಾಡುವಂತೆ ರಾಜ್ಯ ಸರ್ಕಾರಕ್ಕ ಮನವಿ ಸಲ್ಲಿಸಿದ್ದವು. ಇದರ ಪ್ರತಿಫಲವಾಗಿ ಇಂದು ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ಬಸ್ ನಿಲ್ದಾಣವೆಂದು ರಾಜ್ಯ ಸರ್ಕಾರ ಅಧಿಕೃತವಾಗಿ ಅನುಮೋದನೆ ನೀಡಿದೆ.

ನವೀಕೃತಗೊಂಡ ಗದಗದ ಹಳೇ ಬಸ್ ನಿಲ್ದಾಣ

ಪಟ್ಟಣದ ನವೀಕೃತ ಬಸ್ ನಿಲ್ದಾಣಕ್ಕೆ ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿಗಳ ಹೆಸರಿಡುವುದಕ್ಕೆ ಸಾರಿಗೆ ಸಚಿವ ಲಕ್ಷಣ ಸವದಿ ಆದೇಶಿಸಿದ್ದರು. ಗವಾಯಿಗಳ ಅಸಂಖ್ಯಾತ ಭಕ್ತರ ಬೇಡಿಕೆಯನ್ನೂ ಈಡೇರಿಸಿದಂತಾಗಿದೆ ಎಂದು ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಈ ಬಗ್ಗೆ ಗದಗಿನ ಸಾರ್ವಜನಿಕರು, ಹೋರಾಟಗಾರರು ಮತ್ತು ಭಕ್ತ ಸಮೂಹ ಸಂತಸ ವ್ಯಕ್ತಪಡಿಸಿದೆ.

ಹಳೇ ಬಸ್ ನಿಲ್ದಾಣಕ್ಕೆ ಪಂ. ಪುಟ್ಟರಾಜ ಗವಾಯಿಗಳ ಹೆಸರಿಡಲು ಸರ್ಕಾರ ಅನುಮತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.