ಗದಗ: ಗ್ಯಾಂಬ್ಲಿಂಗ್ ಅಡ್ಡೆ ನಡೆಸುತ್ತಿದ್ದ ಲಾಡ್ಜ್ ಮೇಲೆ ಗದಗ ಎಸ್ಪಿ ಶ್ರೀನಾಥ ಜೋಷಿ ನೇತೃತ್ವದಲ್ಲಿ ದಾಳಿ ನಡೆಸಿ 10 ಮಂದಿಯನ್ನು ಬಂಧಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಗದಗ ಎಸ್ಪಿ ಶ್ರೀನಾಥ ಜೋಷಿ ನೇತೃತ್ವದಲ್ಲಿ ವಿಶ್ವ ಎಂಬ ಲಾಡ್ಜ್ ಮೇಲೆ ದಾಳಿ ಮಾಡಿದ ಪೊಲೀಸರು, ಇಸ್ಪೀಟ್ ಆಡುತ್ತಿದ್ದ 10 ಜನ ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಹಲವು ದಿನಗಳಿಂದ ಲಾಡ್ಜ್ನಲ್ಲಿ ಗ್ಯಾಂಬ್ಲಿಂಗ್ ನಡೆಸುತ್ತಿದ್ದು, ಬಂಧಿತರು ಗದಗ ಮತ್ತು ಬೆಂಗಳೂರು ಮೂಲದವರು ಎಂದು ತಿಳಿದು ಬಂದಿದೆ.
ಈ ಕುರಿತು ಗದಗ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.