ETV Bharat / state

ಕೋಟಿ ಕೋಟಿ ಖರ್ಚು ಮಾಡಿದ್ರೂ ವಿದ್ಯಾರ್ಥಿಗಳು ವಾಸಿಸುವಂತಿಲ್ಲ.. ಇದು ಗದಗ ವಸತಿ ನಿಲಯದ ದುಸ್ಥಿತಿ - hostel condition

ಹುಳು ತಿಂದು ಹೋಗಿರೋ ಬಾಗಿಲುಗಳು, ಒಡೆದು ಬಿದ್ದಿರೋ ಕಿಟಕಿ ಗಾಜುಗಳು, ತುಕ್ಕು ಹಿಡಿದಿರೋ ಹೈಟೆಕ್ ವಸ್ತುಗಳು, ಇದು ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿನ ಭೂತ ಬಂಗಲೆಯಂತೆ ಕಾಣ್ತಿರೋ ವಿದ್ಯಾರ್ಥಿಗಳ ವಸತಿ ನಿಲಯದ ದುಸ್ಥಿತಿ.

gadag students hostel is not capable for live
ಗದಗ ವಿದ್ಯಾರ್ಥಿಗಳ ವಸತಿ ನಿಲಯದ ದುಸ್ಥಿತಿ
author img

By

Published : Nov 7, 2021, 8:53 AM IST

Updated : Nov 7, 2021, 9:01 AM IST

ಗದಗ: ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಜನರಿಗೆ ಸರಿಯಾಗಿ ತಲುಪಿಸಿ ಸರ್ಕಾರಕ್ಕೆ ಹೆಸರನ್ನೂ ತರಬಹುದು, ಇಲ್ಲ ಅದೇ ಸರ್ಕಾರದ ಯೋಜನೆಯನ್ನು ಹಳ್ಳಹಿಡಿಸಿ ಕೆಟ್ಟ ಹೆಸರನ್ನೂ ತರಿಸಬಹಬಹದು. ಇದಕ್ಕೆ ತಾಜಾ ಉದಾಹರಣೆ, ಗಜೇಂದ್ರಗಡ ಪಟ್ಟಣದಲ್ಲಿ ನಾಲ್ಕು ವರ್ಷಗಳ ಹಿಂದೆ ಕೋಟಿ ಕೋಟಿ ಖರ್ಚು ಮಾಡಿ ಕಟ್ಟಿರುವ ಕಟ್ಟಡ. ಅಧಿಕಾರಿಗಳ ತಿಕ್ಕಾಟದಲ್ಲಿ ವಿದ್ಯಾರ್ಥಿಗಳ ವಸತಿ ನಿಲಯ ಈಗ ಭೂತಬಂಗಲೆಯಂತಾಗಿದೆ.

ಗದಗ ವಸತಿ ನಿಲಯದ ದುಸ್ಥಿತಿ - ಪ್ರತಿಕ್ರಿಯೆ

ಹೌದು, 2017-18ರ ಸಾಲಿನಲ್ಲಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬರೋಬ್ಬರಿ ಒಂದು ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ವಸತಿ ನಿಲಯ ನಿರ್ಮಾಣವಾಗಿತ್ತು. ಆದರೆ ಅಂದಿನಿಂದ ಈವರೆಗೂ ವಿದ್ಯಾರ್ಥಿಗಳ ಉಪಯೋಗಕ್ಕೆ ಹಸ್ತಾಂತರವಾಗಿಲ್ಲ. ಕಟ್ಟಡವನ್ನು ಉಪಯೋಗಿಸದೇ ಇರೋದ್ರಿಂದ ಇದು ಬಿದ್ದುಹೋಗೋ ಹಂತಕ್ಕೆ ತಲುಪಿದೆ.

ವಿದ್ಯಾರ್ಥಿಗಳ ವಸತಿ ನಿಲಯದ ದುಸ್ಥಿತಿ:

ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿವೆ. ಮುಖ್ಯ ದ್ವಾರ ಸೇರಿದಂತೆ ಉಳಿದ ಎಲ್ಲ ಕೋಣೆಗಳ ಬಾಗಿಲುಗಳು ಹುಳು ತಿಂದು ಹೋಗಿವೆ. ಬಾಗಿಲುಗಳು ಅಸ್ತಿಪಂಜರದಂತೆ ಕಾಣುತ್ತಿವೆ. ಇತ್ತ ಕಿಟಕಿಗಳ ಗಾಜುಗಳು ಒಡೆದುಹೋಗಿವೆ. ಕೋಟಿ ಕೋಟಿ ಖರ್ಚು ಮಾಡಿ ಕಟ್ಟಡ ಕಟ್ಟಿದರೂ ಉಪಯೋಗಕ್ಕೆ ಬಾರದಂತಾಗಿದೆ. ಮಕ್ಕಳ ಅನುಕೂಲಕ್ಕಾಗಿ ಮಾಡಿದ್ದ ಸರ್ಕಾರದ ಯೋಜನೆ ಹಳ್ಳ ಹಿಡಿದಿದೆ. ಹಾಗಾಗಿ ಕಾಲೇಜಿನ ಪ್ರಾಚಾರ್ಯರು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಅಮೆರಿಕದ ವೆಲ್​ನೆಸ್ ವಿವಿಯಿಂದ ವೀರೇಂದ್ರ ಹೆಗ್ಗಡೆಯವರಿಗೆ ಗೌರವ ಡಾಕ್ಟರೇಟ್ ಪ್ರದಾನ

ಈ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳಿಗಾಗಿ ಎಸ್.ಟಿ.ಪಿಎಸ್.ಟಿ ಅನುದಾನದಡಿ ಸುಮಾರು ಒಂದು ಕೋಟಿ ರೂ. ಖರ್ಚು ಮಾಡಿ ಈ ಹಾಸ್ಟೆಲ್ ನಿರ್ಮಾಣ ಮಾಡಲಾಗಿದೆ. ಇದರ ನಿರ್ಮಾಣದ ಹೊಣೆಯನ್ನು ಲ್ಯಾಂಡ್ ಆರ್ಮಿ ಇಲಾಖೆಗೆ ವಹಿಸಲಾಗಿತ್ತು. ಆದ್ರೆ ಸೂಕ್ತ ಜವಾಬ್ದಾರಿ ಹೊತ್ತಿಲ್ಲ, ಕಳಪೆ ಕಾಮಗಾರಿ ಮಾಡಿ ಕಟ್ಟಡ ನಿರ್ಮಾಣ ಮಾಡಿದ್ದಕ್ಕೆ ಬಾಗಿಲು ಕಿಟಕಿಗಳು, ಗೋಡೆಗಳು ಒಡೆದು ಹೋಗಿವೆ ಅನ್ನೋ ಆರೋಪವೂ ಇದೆ. ಇತ್ತ ಇಂತಹ ಅವ್ಯವಸ್ಥೆಯಲ್ಲಿಯೇ ವಸತಿ ನಿಲಯವನ್ನು ಕಾಲೇಜಿಗೆ ಹಸ್ತಾಂತರ ಮಾಡೋದಕ್ಕೆ ಮುಂದಾಗಿದ್ದರಂತೆ. ಆದರೆ ಕಾಲೇಜು ಆಡಳಿತ ಮಂಡಳಿ ಸ್ವೀಕಾರ ಮಾಡಿಲ್ಲ. ಕಟ್ಟಡವನ್ನು ಮಕ್ಕಳು ವಾಸಿಸಲು ಯೋಗ್ಯ ರೀತಿಯಲ್ಲಿ ದುರಸ್ತಿ ಮಾಡಿಕೊಟ್ಟರೆ ಮಾತ್ರ ಅದನ್ನು ಸ್ವೀಕಾರ ಮಾಡ್ತೇವೆ ಅಂತ ಖಡಕ್ ಆಗಿ ಸೂಚಿಸಿದ್ದಾರೆ. ಆದರೆ ಲ್ಯಾಂಡ್ ಆರ್ಮಿ ಇಲಾಖೆಯ ಅಧಿಕಾರಿಗಳು ಮಾತ್ರ ಇದು ನಮ್ಮ ಗಮನಕ್ಕೆ ಬಂದಿಲ್ಲಾ, ಗಮನಿಸ್ತೇವೆ ಅಂತಿದ್ದಾರೆ.

ಗದಗ ಜಿಲ್ಲೆಯಲ್ಲಿ ಕಟ್ಟಿಸಿರುವ ಬಹುತೇಕ ಸರ್ಕಾರಿ ಕಟ್ಟಡಗಳು ಇದೇ ರೀತಿ ಹಾಳಾಗಿ ಹೋಗ್ತಿವೆ. ಆದರೆ ಇನ್ನೂ ಅಧಿಕಾರಿಗಳು ನೋಡ್ತೇವೆ, ಮಾಡ್ತೇವೆ ಅನ್ನೋದರಲ್ಲೇ ಕಾಲ ಹರಣ ಮಾಡ್ತಿದ್ದಾರೆ ಎನ್ನುವ ಗಂಭಿರ ಆರೋಪವಿದೆ.

Last Updated : Nov 7, 2021, 9:01 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.