ETV Bharat / state

ಈ ಗ್ರಾಮದಲ್ಲಿ ಕೋಳಿ ಕೂಗೋ ಹಾಗಿಲ್ಲ... 'ಪಾಪನಾಶಿ ರಹಸ್ಯ' ಏನು ಗೊತ್ತಾ? - ಗದಗ ಪಾಪನಾಶಿ ಹಳ್ಳಿ ಇತಿಹಾಸ

ಗದಗ ತಾಲೂಕಿನಲ್ಲಿ ಪಾಪನಾಶಿ ಎನ್ನುವ ಗ್ರಾಮವಿದೆ. ಅಲ್ಲಿಯೇ ಒಂದು ತಾಂಡಾ ಕೂಡ ಇದೆ. ಸದ್ಯ ಈ ತಾಂಡಾ ಆಶ್ಚರ್ಯಕ್ಕೆ ಕಾರಣವಾಗಿದ್ದು, ಹಲವಾರು ವಿಶೇಷತೆಗಳನ್ನು ತನ್ನಲ್ಲಿ ಹುದುಗಿಸಿಕೊಂಡಿದೆ. ಒಂದು ವೇಳೆ ನೀವು ಈ ತಾಂಡಾಗೆ ಭೇಟಿ ಕೊಟ್ರೆ ಅಲ್ಲಿ ನೀವು ಅಪ್ಪಿತಪ್ಪಿನೂ ಒಂದೇ ಒಂದು ಕೋಳಿ ಕಾಣೋಕೆ ಸಾಧ್ಯವಿಲ್ಲ.

gadag-papanashi-village-history-behand-not-hen-farming
ಪಾಪಾನಾಶಿ ಗ್ರಾಮ
author img

By

Published : Jan 4, 2021, 10:20 PM IST

Updated : Jan 5, 2021, 6:53 AM IST

ಗದಗ: ಕೋಳಿ ಕೂಗಿದ ಮೇಲೆ‌ ಬೆಳಕಾಯ್ತು ಅಂತ ಹೊಲದ ದಾರಿ ಹಿಡಿಯುವ ಗ್ರಾಮದ ರೈತರಿಗೆ ಕೋಳಿಯೇ ಅಲಾರಂ. ಸದ್ಯ ಕೋಳಿ ಸಾಕಾಣಿಕೆ ಕೂಡ ದೊಡ್ಡ ಉದ್ಯಮವಾಗಿದೆ. ಆದ್ರೆ ಇಲ್ಲೊಂದು ಹಳ್ಳಿಯಲ್ಲಿ ಮಾತ್ರ ಬ್ಯಾಟರಿ ಹಾಕ್ಕೊಂಡು ಹುಡುಕಿದ್ರು ಕೂಡ ಒಂದು ಕೋಳಿ ಮರಿನೂ ಕಾಣಲ್ಲ.

ಗದಗ ತಾಲೂಕಿನಲ್ಲಿ ಪಾಪನಾಶಿ ಎನ್ನುವ ಗ್ರಾಮವಿದೆ. ಅಲ್ಲಿಯೇ ಒಂದು ತಾಂಡಾ ಕೂಡ ಇದೆ. ಸದ್ಯ ಈ ತಾಂಡಾ ಆಶ್ಚರ್ಯಕ್ಕೆ ಕಾರಣವಾಗಿದ್ದು, ಹಲವಾರು ವಿಶೇಷತೆಗಳನ್ನು ತನ್ನಲ್ಲಿ ಹುದುಗಿಸಿಕೊಂಡಿದೆ. ಒಂದು ವೇಳೆ ನೀವು ಈ ತಾಂಡಾಗೆ ಭೇಟಿ ಕೊಟ್ರೆ ಅಲ್ಲಿ ನೀವು ಅಪ್ಪಿತಪ್ಪಿನೂ ಒಂದೇ ಒಂದು ಕೋಳಿ ಕಾಣೋಕೆ ಸಾಧ್ಯವಿಲ್ಲ.

'ಪಾಪನಾಶಿ ರಹಸ್ಯ'

ಯಾಕೆ ಆಂತ ಆಶ್ಚರ್ಯ ಆಗುತ್ತೆ ಅಲ್ವಾ. ಹೌದು, ಈ ಹಿಂದೆ ಪ್ಲೇಗ್ ಎಂಬ ಮಹಾಮಾರಿ ಕಾಯಿಲೆ ಬಂದಾಗ ಕೋಳಿ ಸಾಕೋದು ಬಿಟ್ಟಿದ್ದಾರಂತೆ. ಅಪ್ಪಿತಪ್ಪಿ ಕೋಳಿ ಸಾಕಿದರೆ ಆ ಗ್ರಾಮಕ್ಕೆ ಮತ್ತು ಕೋಳಿ ಸಾಕಿದ ಮನೆತನಕ್ಕೆ ಅಪಾಯ ತಪ್ಪಿದ್ದಲ್ಲ ಅಂತಾರೆ ಈ ಗ್ರಾಮಸ್ಥರು. ಕೋಳಿ ಅಷ್ಟೇ ಅಲ್ಲಾ, ಇಲ್ಲಿ ಹೆಂಡ, ಸರಾಯಿ ಮಾರೋದನ್ನ ಮತ್ತು ಕುಡಿಯೋದನ್ನ ನಿಲ್ಲಿಸಿದ್ದಾರೆ. ಕಳ್ಳತನ ಮಾಡೋದಿಲ್ಲ ಅನ್ನೋದು ಪ್ರತಿಯೊಂದು ಮನೆಯ ಶಪಥ. ಇದು ಹಿಂದಿನಿಂದಲೇ ನಡೆದುಕೊಂಡು ಬಂದಿರುವ ಪದ್ಧತಿ.

ಓದಿ-ಆ್ಯಪ್​ ಮೂಲಕ ಏರ್ ಟಿಕೆಟ್ ಬುಕ್​​ ಮಾಡಿದವನಿಗೆ 7 ಲಕ್ಷ ದೋಖಾ!

ಹೌದು, ಇಷ್ಟೆಲ್ಲ ಸಂಪ್ರದಾಯಗಳನ್ನು ಅಡವಾಗಿಟ್ಟುಕೊಂಡಿರುವುದಕ್ಕೆ ಕಾರಣ ಕೇಳಿದ್ರೆ ಈ ಊರಿನ ದೇವರುಗಳು ಮತ್ತು ಈ ಸಮುದಾಯದ ಗುರುಗಳ ಕಡೆ ಬೆಟ್ಟು ಮಾಡ್ತಾರೆ ಪಾಪನಾಶಿ ತಾಂಡಾ ನಿವಾಸಿಗಳು. ತಮ್ಮ ಗುರುಗಳಾದ ಕುಬಸಾದ್ ಮಹರಾಜರು, ಡಾಕುಸಾದ್ ಮಹರಾಜರ ಕಾಲದಿಂದಲೂ ಈ ಪದ್ಧತಿ ಅಳವಡಿಸಿಕೊಂಡು ಬಂದಿದ್ದಾರಂತೆ.

ಅಲ್ಲದೆ, ಗ್ರಾಮದ ಹಿರಿಯರು ಕೈಗೊಂಡ ಪ್ರತಿಯೊಂದು ತೀರ್ಮಾನಕ್ಕೆ ಇಲ್ಲನ ನಿವಾಸಿಗಳು ಬದ್ಧರಾಗಿರ್ತಾರಂತೆ. ಒಟ್ಟಿನಲ್ಲಿ ಸುಮಾರು 80 ವರ್ಷಗಳಿಂದ ಕೋಳಿ ಸಾಕದೆ ವಿಚಿತ್ರ ಪದ್ಧತಿ ಅಳವಡಿಸಿಕೊಂಡಿರುವ ಹಾಗೂ ಹಲವಾರು ಕಟ್ಟುಪಾಡುಗಳನ್ನ ಹಾಕಿಕೊಂಡು ಚಾಚು ತಪ್ಪದೆ ಪಾಲಿಸುವ ಗ್ರಾಮಸ್ಥರ ನಡೆ ಅಚ್ಚರಿ ಮೂಡಿಸುವುದಂತು ಸತ್ಯ.

Last Updated : Jan 5, 2021, 6:53 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.