ETV Bharat / state

ನಮ್ಮ ರಸಗೊಬ್ಬರ ಬೇರೆ ಜಿಲ್ಲೆಯವರಿಗೆ ಕೊಡ್ತಿದ್ದಾರೆ: ಗದಗ ರೈತರಿಂದ ಆಕ್ರೋಶ

author img

By

Published : Jun 24, 2021, 11:04 AM IST

Updated : Jun 24, 2021, 12:42 PM IST

ನಮ್ಮ ಜಿಲ್ಲೆಯ ರಸಗೊಬ್ಬರ ಅಕ್ಕಪಕ್ಕದ ಜಿಲ್ಲೆಯವರಿಗೆ ಕೊಡ್ತಿದ್ದಾರೆ. ಹಾಗಾಗಿ, ನಮಗೆ ರಸಗೊಬ್ಬರ ಸಿಗ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Gadag farmers facing problem due to lack of fertilizer
ಗದಗ ರೈತರಿಂದ ಆಕ್ರೋಶ

ಗದಗ: ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಉತ್ತಮವಾಗಿ ಮಳೆಯಾಗುತ್ತಿದ್ದು ಅನ್ನದಾತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಸರಿಯಾಗಿ ರಸಗೊಬ್ಬರ ಸಿಗದೆ ರೈತರಿಗೆ ಸಮಸ್ಯೆ ಎದುರಾಗಿದೆ.

ಲಕ್ಷ್ಮೇಶ್ವರ ಭಾಗದಲ್ಲಿ ಧಾರವಾಡ ತಾಲೂಕಿನ ಕುಂದಗೋಳ ಹಾಗೂ ಹಾವೇರಿ ಜಿಲ್ಲೆಯ ಸವಣೂರಿನ ರೈತರು, ಮುಂಡರಗಿ ಭಾಗದಲ್ಲಿ ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯ ರೈತರು, ರೋಣ ಭಾಗದಲ್ಲಿ ಬಾಗಲಕೋಟೆ ಜಿಲ್ಲೆಯವರು, ನರಗುಂದ ಭಾಗದಲ್ಲಿ ಬೆಳಗಾವಿ ಜಿಲ್ಲೆಯ ರೈತರು ರಸಗೊಬ್ಬರ ಖರೀದಿ ಮಾಡುತ್ತಿದ್ದಾರೆ. ಹಾಗಾಗಿ, ನಮಗೆ ಗೊಬ್ಬರ ಸಿಗುತ್ತಿಲ್ಲ ಎಂದು ಜಿಲ್ಲೆಯ ರೈತರು ಆರೋಪ ಮಾಡಿದ್ದಾರೆ.

ಗೊಬ್ಬರ ಸಿಗದೆ ರೈತರಿಗೆ ಸಂಕಷ್ಟ

ನಾವು ಆಧಾರ ಕಾರ್ಡ್, ಜಮೀನಿನ ಪಹಣಿ ಪತ್ರ ನೀಡಿದರೂ, ಒಂದು, ಎರಡು ಚೀಲ ಗೊಬ್ಬರ ನೀಡುತ್ತಾರೆ. ಆದರೆ, ಅಕ್ಕ ಪಕ್ಕದ ಜಿಲ್ಲೆಯ ರೈತರಿಂದ ಹೆಚ್ಚಿನ ಹಣ ಪಡೆದು, ಅವರಿಗೆ ಬೇಕಾಗುವಷ್ಟು ಗೊಬ್ಬರ ಕೊಡ್ತಿದ್ದಾರೆ ಎಂದು ಜಿಲ್ಲೆಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಜಂಟಿ ಕೃಷಿ ನಿರ್ದೇಶಕರನ್ನು ಕೇಳಿದ್ರೆ, ಗದಗ ಜಿಲ್ಲೆಯಾದ್ಯಂತ 26,700 ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆಯಾಗಿದೆ. ಇನ್ನೆರಡು ದಿನಗಳಲ್ಲಿ 3,000 ಮೆಟ್ರಿಕ್ ಟನ್ ಬರಲಿದೆ. ಈಗಾಗಲೇ ಜಿಲ್ಲೆಯ ರಸಗೊಬ್ಬರ ಅಂಗಡಿ ಮಾಲೀಕರಿಗೆ ಹೊರ ಜಿಲ್ಲೆಯ ರೈತರಿಗೆ ರಸಗೊಬ್ಬರ ನೀಡದಂತೆ ಸೂಚನೆ ನೀಡಲಾಗಿದೆ.

ಆದರೂ, ಏಳು ರಸಗೊಬ್ಬರ ಅಂಗಡಿ ಮಾಲೀಕರು ಬೇರೆ ಜಿಲ್ಲೆಯ ರೈತರಿಗೆ ಗೊಬ್ಬರ ನೀಡಿದ್ದಾರೆ. ಅವರಿಗೆ ನೋಟಿಸ್ ನೀಡಲಾಗಿದೆ. ರಸಗೊಬ್ಬರ ಅಂಗಡಿ ಮಾಲೀಕರು ಆಧಾರ ಕಾರ್ಡ್ ಹಾಗೂ ಜಮೀನು ಪಹಣೆ ಪತ್ರ ನೋಡಿ ಸಮನಾಗಿ ಗೊಬ್ಬರ ವಿತರಣೆ ಮಾಡುವಂತೆ ಸೂಚಿಸಿದ್ದೇವೆ ಎನ್ನುತ್ತಾರೆ.

ಇದನ್ನೂ ಓದಿ: ಗಣಿನಾಡಲ್ಲಿ ಕಾರಹುಣ್ಣಿಮೆ ಸಂಭ್ರಮ: ಜೋಡೆತ್ತುಗಳ ಮೆರವಣಿಗೆಗೆ ಸಕಲ‌ ತಯಾರಿ

Last Updated : Jun 24, 2021, 12:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.