ಗದಗ: ಜಿಲ್ಲೆಯ ರೈತನೋರ್ವ ಕ್ವಿಂಟಾಲ್ ಮೆಣಸಿನಕಾಯಿಯನ್ನು 50,111 ರೂ.ಗೆ ಮಾರಾಟ ಮಾಡುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದ್ದಾರೆ.
ಜಿಲ್ಲೆಯ ಬೆಟಗೇರಿಯ ರೈತ ಮಲ್ಲಿಕಾರ್ಜುನ ಮೆಣಸಿನಕಾಯಿ ಭಾರೀ ಬೆಲೆಗೆ ಮೆಣಸಿನಕಾಯಿ ಮಾರಿ ಗಮನ ಸೆಳೆದವರು. ಹಾವೇರಿಯ ಬ್ಯಾಡಗಿ ಎಪಿಎಂಸಿಯಲ್ಲಿ ದುಬಾರಿ ಬೆಲೆಗೆ ಮೆಣಸಿನಕಾಯಿ ಮಾರಾಟವಾಗಿದೆ.
ಓದಿ : ಸಾರ್ವಜನಿಕ ಗ್ರಂಥಾಲಯಕ್ಕಿಲ್ಲ ಪ್ರತ್ಯೇಕ ಕೊಠಡಿ ವ್ಯವಸ್ಥೆ: ಬೀಳುವ ಸ್ಥಿತಿಯಲ್ಲಿ ಅವಲಂಬಿತ ಕಟ್ಟಡ!
ಕೆಲ ದಿನಗಳ ಹಿಂದೆ ಗದಗದ ಎಪಿಎಂಸಿಯಲ್ಲಿ ಸವಡಿಯ ರೈತನೊಬ್ಬ 40 ಸಾವಿರ ರೂ.ಗೆ ಮೆಣಸಿನಕಾಯಿ ಮಾರಾಟ ಮಾಡಿ ಗಮನ ಸೆಳೆದಿದ್ದರು. ಇದೀಗ ಬ್ಯಾಡಗಿ ಎಪಿಎಂಸಿಯಲ್ಲಿ ರೈತ ಮಲ್ಲಿಕಾರ್ಜುನ 50 ಸಾವಿರ ರೂ.ಗೆ ಮಾರಿ ದಾಖಲೆ ಬರೆದಿದ್ದಾರೆ. ಮಲ್ಲಿಕಾರ್ಜುನ ಅವರು ಸುಮಾರು ಮೂರು ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದಿದ್ದರು. ಮೊದಲನೇ ಕಟಾವಿನಲ್ಲಿ 10 ಚೀಲ ಮಾರಾಟಕ್ಕೆ ತೆಗೆದುಕೊಂಡು ಹೋಗಿದ್ದರು. ಈ ಪೈಕಿ ಮೂರು ಚೀಲ 50 ಸಾವಿರ ರೂ.ಗೆ ಮಾರಾಟವಾಗಿವೆ.